Home » India GDP: ಜಿಡಿಪಿಯಲ್ಲಿ ಜಪಾನ್‌ ಹಿಂದಿಕ್ಕಿ ವಿಶ್ವದ ನಾಲ್ಕನೇ ಸ್ಥಾನದಲ್ಲಿ ಭಾರತ

India GDP: ಜಿಡಿಪಿಯಲ್ಲಿ ಜಪಾನ್‌ ಹಿಂದಿಕ್ಕಿ ವಿಶ್ವದ ನಾಲ್ಕನೇ ಸ್ಥಾನದಲ್ಲಿ ಭಾರತ

0 comments

India GDP: ಆರ್ಥಿಕ ಸುಧಾರಣೆಗಳಿಂದ ಭಾರತ ಜಪಾನ್‌ (Japan) ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೌದು ವಿಶ್ವದ ನಾಲ್ಕನೇಯ ಅತಿ ದೊಡ್ಡ ಆರ್ಥಿಕತೆಯನ್ನು (Economy) ಹೊಂದಿದ ದೇಶವಾಗಿ ಭಾರತ (India) ಹೊರಹೊಮ್ಮಿದೆ.

ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಗಾತ್ರವು 4.18 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. 4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ, ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ 2.5 ರಿಂದ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ. 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ ದೇಶವಾಗಲಿದೆ ಎಂದಿದೆ.

ದೇಶೀಯ ಬೇಡಿಕೆ, ವಿದೇಶಿ ಹೂಡಿಕೆ, ಹಣದುಬ್ಬರ ಇಳಿಕೆ, ನಿರುದ್ಯೋಗ ಇಳಿಕೆ, ರಫ್ತು ಹೆಚ್ಚಳ ಕಾರಣದಿಂದ ದೇಶದ ಜಿಡಿಪಿ ದರ ಏರಿಕೆಯಾಗಿದೆ. ವಾಣಿಜ್ಯ ವಲಯಕ್ಕೆ ಆರೋಗ್ಯಕರ ಸಾಲದ ಹರಿವಿನೊಂದಿಗೆ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಸರ್ಕಾರ ತಿಳಿಸಿದೆ.

ಯಾವ ದೇಶದ ಜಿಡಿಪಿ ಗಾತ್ರ ಎಷ್ಟು?*ಟ್ರಿಲಿಯನ್‌ ಡಾಲರ್‌ ಲೆಕ್ಕದಲ್ಲಿ

1. ಅಮೆರಿಕ – 30.507

2. ಚೀನಾ – 19.213

3. ಜರ್ಮನಿ – 4.744

4. ಭಾರತ – 4.744

5. ಜಪಾನ್‌ – 4.186

6. ಯುಕೆ – 3.839

7. ಫ್ರಾನ್ಸ್‌ – 3.211

8. ಇಟಲಿ – 2.422

9. ಕೆನಡಾ – 2.225

10. ಬ್ರೆಜಿಲ್‌ – 2.125

You may also like