Home » CHINA: ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ಪುನರಾರಂಭಿಸಿದ ಭಾರತ

CHINA: ಚೀನಾ ಪ್ರಜೆಗಳಿಗೆ ಪ್ರವಾಸಿ ವೀಸಾ ಪುನರಾರಂಭಿಸಿದ ಭಾರತ

0 comments
Women Viral News

India resumes tourist visas for Chinese nationals

CHINA: ಸುದೀರ್ಘ ಮಿಲಿಟರಿ ಬಿಕ್ಕಟ್ಟಿನ ನಂತರ ಭಾರತವು (India) ಇಂದಿನಿಂದ ಚೀನಾದ (china) ಪ್ರಜೆಗಳಿಗೆ ಪ್ರವಾಸಿ (tourist visas) ನೀಡುವುದನ್ನು ಪುನರಾರಂಭಿಸಿದೆ.

ವಿಶ್ವದಾದ್ಯಂತದ ಭಾರತೀಯ ರಾಯಭಾರ ಕಚೇರಿಗಳು ಮೂಲಕ ಅರ್ಜಿ ಸಲ್ಲಿಸುವ ಚೀನಾದ ಪ್ರಜೆಗಳಿಗೆ ಭಾರತ ಪ್ರವಾಸಿ ವೀಸಾಗಳನ್ನುನೀಡಲಿದೆ.ಜುಲೈನಲ್ಲಿ ಭಾರತವು ಚೀನಾದ ಪ್ರಜೆಗಳಿಗೆ ಪ್ರವಾಸಿ ವೀಸಾಗಳನ್ನು ಪುನಃ ಪರಿಚಯಿಸಿದ ನಾಲ್ಕು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ರಾಯಭಾರ ಕಚೇರಿಯು ತನ್ನ ಅಧಿಸೂಚನೆಯಲ್ಲಿ ಪ್ರವಾಸಿ ವೀಸಾಗಳಿಗೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ, ಬೀಜಿಂಗ್, ಶಾಂಫೈ ಮತ್ತು ಗುವಾಂಗ್‌ಝನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳಲ್ಲಿ ಚೀನೀ ಪ್ರಜೆಗಳು ಸಲ್ಲಿಸಬೇಕಾದ ದಾಖಲೆಗಳನ್ನು ಸಹ ವಿವರಿಸಿದೆ. ಪ್ರವಾಸಿ ವೀಸಾ ನೀಡುವುದನ್ನು ಪುನರಾರಂಭಿಸುವ ಭಾರತದ ನಿರ್ಧಾರವನ್ನು ಚೀನಾ ವಿದೇಶಾಂಗ ಸಚಿವಾಲಯ ಸ್ವಾಗತಿಸಿದೆ, ಇದು ಗಡಿಯಾಚೆಗಿನ ಪ್ರಯಾಣವನ್ನು ಸುಗಮಗೊಳಿಸಲು ಸಕಾರಾತ್ಮಕ ಕ್ರಮವಾಗಿದೆ ಎಂದು ಹೇಳಿದೆ.

You may also like