Home » China: ಹಾಟ್ ಹಾಟ್ ಬಟ್ಟೆ ಹಾಕಿದ್ದಾಳೆಂದು ಹಾಟ್ ಇರೋ ಸೂಪನ್ನೇ ಸೊಸೆಯ ಮೇಲೆರಚಿದ ಮಾವ !! ನಂತರ ಆದದ್ದೇನು?

China: ಹಾಟ್ ಹಾಟ್ ಬಟ್ಟೆ ಹಾಕಿದ್ದಾಳೆಂದು ಹಾಟ್ ಇರೋ ಸೂಪನ್ನೇ ಸೊಸೆಯ ಮೇಲೆರಚಿದ ಮಾವ !! ನಂತರ ಆದದ್ದೇನು?

by ಹೊಸಕನ್ನಡ
0 comments
China

China :ಸಾಮಾನ್ಯವಾಗಿ ಮನೆಗಳಲ್ಲಿ ಗಂಡ -ಹೆಂಡತಿ(Husband-wifelನಡುವೆ ಇಲ್ಲ ಅತ್ತೆ ಸೊಸೆಯಂದಿರ ನಡುವೆ ಗಲಾಟೆ, ಜಗಳಗಳು ನಡೆಯುವುದು ಕಾಮನ್. ಅಪರೂಪಕ್ಕೆ ಕೆಲವೊಮ್ಮೆ ಸೊಸೆ ಹಾಗೂ ಮಾವನ Father-in-law and daughter-in-law fight)ನಡುವೆಯೂ ಗಲಾಟೆ ಆಗುವುದುಂಟು. ಅಂತೆಯೇ ಇಲ್ಲೊಂದೆಡೆ ಮಾವ, ಸೊಸೆಯ ನಡುವೆ ಗಲಾಟೆ ನಡೆದಿದ್ದು, ಗಲಾಟೆಯ ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ!!

ಚೀನಾ(China) ದೇಶದಲ್ಲಿ ಒಂದೆಡೆ, ತನ್ನ ಸೊಸೆ ಹಾಕಿರೋ ಡ್ರೆಸ್ ತುಂಬಾ(Short dress) ಚಿಕ್ಕದಾಗಿದೆ ಎಂದು ಆಕೆಯ ಮಾವ ಮೈ ಮೇಲೆ ಬಿಸಿ ಸೂಪ್(Hot supe) ಎರಚಿಬಿಟ್ಟಿದ್ದಾನೆ. ಹೌದು, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಕುಟುಂಬವೊಂದರಲ್ಲಿ, ಊಟ ಬಡಿಸಲು ಬಂದಾಗ ಸೊಸೆ ತೊಟ್ಟಿದ್ದ ಡ್ರೆಸ್ ಇಷ್ಟವಾಗದೆ ಮಾವನಿಗೆ ಕೋಪ ಬಂದಿತ್ತು. ಇದರಿಂದ ಸಿಟ್ಟಿಗೆದ್ದು, ಡೈನಿಂಗ್ ಟೇಬಲ್ ನಲ್ಲಿ ಕುಳಿತಿದ್ದ ಯುವತಿಯ ಮೇಲೆ ಬಿಸಿ ಬಿಸಿ ಸೂಪ್ ಸುರಿದಿದ್ದಾರೆ.

ಚೀನಾದ(Chaina) ಪತ್ರಿಕೆಯೊಂದರ ಪ್ರಕಾರ ಜೂನ್ 12ರಂದು ಈ ಘಟನೆ ಸಂಭವಿಸಿದ್ದು, ‘ಝು’ ಎಂಬ ಹೆಸರಿನ ತನ್ನ ಸೊಸೆಯು ಧರಿಸಿದ್ದ ಪ್ಯಾಂಟ್ ತುಂಬಾ ಚಿಕ್ಕದಾಗಿದೆ ಎಂಬುದು ಮಾವನ (Father in law) ದೂರು. ಈ ರೀತಿಯ ಡ್ರೆಸ್ ತನ್ನ ಕುಟುಂಬಕ್ಕೆ (Family) ಹೊಂದುವುದಿಲ್ಲ, ಸ್ಥಳೀಯರ ಮುಂದೆ ತನಗೆ ಅವಮಾನವಾಗುತ್ತದೆ ಎಂದು ಮಾವ ಸೊಸೆಯನ್ನು ನಿಂದಿಸಿದ್ದಾನೆ. ಅದಕ್ಕೆ ಯುವತಿಯು ಇದು ತನ್ನ ಸ್ವಂತ ಹಣದಿಂದ ಕೊಂಡ ಬಟ್ಟೆ. ತಾನು ಹೇಗಿರಬೇಕು, ಎಂತಹ ಬಟ್ಟೆ ಧರಿಸಬೇಕು ಎಂಬುದು ನನಗೆ ಬಿಟ್ಟ ವಿಚಾರ. ಇದಕ್ಕೆ ಯಾರೂ ಅಡ್ಡಿಪಡಿಸೋ ಅಗತ್ಯವಿಲ್ಲ ಎಂದು ಎದುರಾಡಿದ್ದಾಳೆ. ಸೊಸೆಯ ಮಾತಿಗೆ ಸಿಟ್ಟಿಗೆದ್ದ ಮಾವ ಡೈನಿಂಗ್ ಟೇಬಲ್ ಮೇಲಿದ್ದ ಬಿಸಿಬಿಸಿ ಸೂಪ್‌ನ್ನು (Hot soup)ಆಕೆಯ ಮೈಮೇಲೆ ಸುರಿದಿದ್ದಲ್ಲದೆ, ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದಾರೆ.

ಇನ್ನು ಅಜ್ಜನ ಈ ನಡವಳಿಕೆಯಿಂದ, ತಾಯಿಯ ಮೇಲಾದ ಅವಮಾನದಿಂದ ವಿಚಲಿತನಾದ ಮಗನು ಕೂಡಲೇ ಪೋಲೀಸರಿಗೆ ಕರೆ ಮಾಡಿ ತಾಯಿಯನ್ನು ರಕ್ಷಿಸುವಂತೆ ಮನವಿಮಾಡಿದ್ದಾನೆ. ಅಲ್ಲದೆ ಪೊಲೀಸರು ಬರುವವರೆಗೂ ಆಕೆಯನ್ನು ಕೊಠಡಿಯಲ್ಲಿಟ್ಟು ಬೀಗ ಹಾಕಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ವಿಷಯವನ್ನು ಹತೋಟಿಗೆ ತಂದಿದ್ದು, ಯಾವ ಬಟ್ಟೆ ತೊಡಬೇಕು ಎಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರವಾಗಿದ್ದು, ಅಡ್ಡಿಪಡಿಸಬಾರದು ಎಂದು ಮಾವನಿಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಗಲಾಟೆ ಮುಗಿಯಲ್ಲಿಲ್ಲ. ಘಟನೆ ವೇಳೆ ಮನೆಯಲ್ಲಿ ಇಲ್ಲದಿದ್ದ ಪತಿಗೆ ಮಹಿಳೆ ಮಾಹಿತಿ ನೀಡಿದಾಗ ಆತ ಆಕೆಯ ತಂದೆಯ ಪರ ವಹಿಸಿ ಮತ್ತೆ ಅಂತಹ ಬಟ್ಟೆ ಧರಿಸದಂತೆ ಎಚ್ಚರಿಕೆ ನೀಡಿದ್ದಾನೆ. ಗಂಡನ ಬೆಂಬಲವೂ ಸಿಗದ ಆಕೆ ಮನನೊಂದು ವಿಚ್ಛೇದನಕ್ಕೆ ತಯಾರಿ ನಡೆಸುತ್ತಿದ್ದಾಳೆ. ಈ ಕುರಿತು ವಿಡಿಯೋ ಮಾಡಿ ಆಕೆ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಅಲ್ಲದೆ ಆಕೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ದೇಹದ ಮೇಲೆ ತೀವ್ರವಾದ ಸುಟ್ಟ ಗುರುತುಗಳನ್ನು ತೋರಿಸಲಾಗಿದೆ.

ಇದನ್ನೂ ಓದಿ: Siddaramaiah -Amith sha: ಸಿದ್ದು-ಶಾ ಭೇಟಿ: ರಾಜ್ಯಕ್ಕೆ ಅಕ್ಕಿ ನೀಡುವ ಭರವಸೆ, ಆಹಾರ ಸಚಿವರೊಡನೆ ಚರ್ಚೆ- ಅಮಿತ್ ಶಾ !!

You may also like

Leave a Comment