Home Work: ಮಕ್ಕಳು ಹೋಂ ವರ್ಕ್ (Home Work) ಮಾಡೋಕೆ ತುಂಬಾ ಆಲಸ್ಯ ತೋರಿಸುತ್ತಾರೆ. ಅಷ್ಟೇ ಅಲ್ಲ ಹೇಗಾದರು ಮಾಡಿ ತಪ್ಪಿಸಬೇಕು ಎಂದು ಏನಾದರೂ ಸುಳ್ಳು ಹೇಳುತ್ತಾರೆ. ಆದ್ರೆ ಕೆಲವು ತರ್ಲೆ ಮಕ್ಕಳು ಹೋಂ ವರ್ಕ್ ತಪ್ಪಿಸೋಕೆ ಖತರ್ನಾಕ್ ಉಪಾಯ ಮಾಡಿ, ಎಲ್ಲರನ್ನು ಪೇಚಿಗೆ ಸಿಲುಕಿಸುತ್ತಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಬಾಲಕ ಮಾಡಿದ ಕೆಲಸ ನೋಡಿದರೆ ನೀವು ಶಾಕ್ ಆಗುವುದು ಖಂಡಿತಾ. ಹೌದು, ಚೀನಾ (China) ದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದ ಘಟನೆಯನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಾಕಿದ್ದಾನೆ.
ಆ ವಿಡಿಯೋದಲ್ಲಿ ಪಕ್ಕದ ಮನೆಯ ವ್ಯಕ್ತಿ ಪೊಲೀಸ್ (Police) ಜೊತೆ ಮಾತನಾಡುತ್ತಿರುವುದನ್ನು ನೋಡಬಹುದು. ನೆರೆ ಮನೆಯಲ್ಲಿ ವಾಸವಾಗಿರುವ ವ್ಯಕ್ತಿ ಪೊಲಿಸರಿಗೆ ಹುಡುಗನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ವಾಸ್ತವವಾಗಿ, ಹುಡುಗ ಮನೆಯ ಮೇಲಿಂದ ಕಿಟಕಿ ಮೂಲಕ ನೋಟ್ ಒಂದನ್ನು ಕೆಳಗೆ ಇಳಿ ಬಿಟ್ಟಿದ್ದಾನೆ. ಅದರಲ್ಲಿ ಹೆಲ್ಪ್ ಮೀ (Help Me) ಎಂದು ಬರೆದಿತ್ತು. ಇದನ್ನು ನೋಡಿದ ನೆರೆ ಮನೆ ವ್ಯಕ್ತಿ ಹೆದರಿದ್ದು, ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾನೆ.
ಪೊಲೀಸರು ನೆರೆ ಮನೆ ವ್ಯಕ್ತಿ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದಿದ್ದಾರೆ. ಆದ್ರೆ ಅಲ್ಲಿ ನಡೆದಿದ್ದೆ ಬೇರೆ. ಬಾಲಕ ನೋಟಿನ ಮೇಲೆ ಹೆಲ್ಪ್ ಮೀ ಎಂದು ಬರೆದಿದ್ದಲ್ಲದೆ ಅಳುವುದನ್ನು ನೋಡಿರೋದಾಗಿ ನೆರೆ ಮನೆ ವ್ಯಕ್ತಿ ಪೊಲೀಸರಿಗೆ ಹೇಳಿದ್ದ. ಆ ಮನೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದ್ರೆ ಅಲ್ಲಿ ಬಾಲಕನಿಗೆ ಏನೋ ಕೆಟ್ಟದಾಗಿ ನಡೆದಿದೆ ಎನ್ನುವ ಊಹೆ ನನ್ನದು. ಈ ಮನೆ ಕೆಳಗೆ ಇಬ್ಬರು ಮಕ್ಕಳು ಆಟ ಆಡೋದನ್ನು ಬಿಟ್ಟು ನಾನು ಮತ್ತೇನೂ ನೋಡಿಲ್ಲವೆಂದು ಆ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ, ಬಾಲಕನನ್ನು ಕರೆಸಿ ಮಾಹಿತಿ ಪಡೆಯುತ್ತಾರೆ. ಆದ್ರೆ ಈ ವೇಳೆ ಬಾಲಕನ ಕಿಲಾಡಿತನ ಬಯಲಾಗುತ್ತದೆ. ನಕಲಿ ನೋಟ್ ಇದು. ಸುಮ್ಮನೆ ಹೆಲ್ಪ್ ಮೀ ಎಂದು ಬರೆದಿದ್ದೇನೆ. ನಾನು ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡಿದೆ ಎಂದು ಬಾಲಕ ಹೇಳ್ತಾನೆ. ಆತನ ಮಾತು ಕೇಳಿದ ಪೊಲೀಸರಿಗೆ ತಲೆ ಮೇಲೆ ಕೈ ಇಡೋದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ನಂತರ ಹುಡುಗನ ಜೊತೆ ಮಾತನಾಡಿದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Tulsi Rules: ತುಳಸಿ ಗಿಡವನ್ನು ಮನೆಗೆ ತರಬೇಕು ಅಂದ್ಕೊಂಡಿದ್ದೀರಾ? ಹಾಗಿದ್ರೆ ಅದಕ್ಕೆ ಈ ದಿನ ಮಾತ್ರ ಸೂಕ್ತ!
