Home » Viral News: ಮದುವೆ ಆಗಲು ಹುಡುಗ ಬೇಕೆಂದು ರಸ್ತೆಯಲ್ಲಿ ಬೋರ್ಡ್ ಹಿಡಿದ ಹುಡುಗಿ – ನಂತರ ಆದ ಅವಾಂತರ ಕೇಳಿದ್ರೆ ನೀವೇ ಹೌಹಾರುತ್ತೀರಾ!!

Viral News: ಮದುವೆ ಆಗಲು ಹುಡುಗ ಬೇಕೆಂದು ರಸ್ತೆಯಲ್ಲಿ ಬೋರ್ಡ್ ಹಿಡಿದ ಹುಡುಗಿ – ನಂತರ ಆದ ಅವಾಂತರ ಕೇಳಿದ್ರೆ ನೀವೇ ಹೌಹಾರುತ್ತೀರಾ!!

1 comment
Viral News

Viral News: ಕಾಲೇಜು ಮೆಟ್ಟಿಲು ಹತ್ತಿದರೆ ಸಾಕು ವಯೋಸಹಜ ಆಕರ್ಷಣೆಗೆ ಬಲಿಯಾಗಿ, ಹುಚ್ಚು ಕೋಡಿ ಮನಸಿನ ಮಾತಿಗೆ ಮರುಳಾಗಿ ಪ್ರೀತಿ ಪ್ರೇಮ ಎಂದು ಮಕ್ಕಳು ಸಿಕ್ಕಿದಲ್ಲಿ ಅಡ್ಡಾಡಿ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುವುದು ಸಹಜ. ಅದರಲ್ಲಿಯೂ ಇತ್ತೀಚೆಗೆ ಸೂಕ್ತವಾದ ಜೀವನ ಸಂಗಾತಿಯನ್ನು ಹುಡುಕುವ ನಿಟ್ಟಿನಲ್ಲಿ ಹೆಚ್ಚಿನ ಮಂದಿ ಡೇಟಿಂಗ್ ಅಪ್ಲಿಕೇಶನ್‌ ಗಳನ್ನು ಬಳಕೆ ಮಾಡುವುದು ಹೆಚ್ಚಾಗಿದೆ. ಇದರಲ್ಲಿ ಕೆಲವು ಸಫಲರಾದರೆ,ಮತ್ತೆ ಕೆಲವರು ಅನ್ಯ ಮಾರ್ಗದ ಮೊರೆ ಹೋಗುತ್ತಾರೆ.

ಇದೀಗ, ಯುವತಿಯೊಬ್ಬಳು ಭಾವಿ ಪತಿ ಬೇಕಾಗಿದ್ದಾನೆ ಎಂದು ಬೋರ್ಡ್ ಹಿಡಿದು ರಸ್ತೆಯಲ್ಲಿ ನಿಂತಿರುವ ಫೋಟೋಗಳು ವೈರಲ್ (Viral Photo)ಆಗಿ ಸಂಚಲನ ಸೃಷ್ಟಿ ಮಾಡಿದೆ. ಅಷ್ಟಕ್ಕೂ ಘಟನೆ ನಡೆದಿದ್ದೆಲ್ಲಿ? ಎಂದು ಗಮನಿಸಿದರೆ ಅಮೆರಿಕದಲ್ಲಿ ಕರೊಲಿನಾ ಗೀಟ್ಸ್ ಎಂಬ ಯುವತಿ ಎರಡು ವರ್ಷಗಳಿಂದ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಳು. ತನಗೆ ತಕ್ಕನಾದ ಭಾವಿ ಪತಿಯನ್ನು ಆಯ್ಕೆ ಮಾಡುವ ಸಲುವಾಗಿ ಹೊಸ ಮಾರ್ಗ ಕಂಡುಕೊಂಡ ಯುವತಿ ತನ್ನ ಭವಿಷ್ಯದ ಜೀವನ ಸಂಗಾತಿಯನ್ನು (Life Partner)ಹುಡುಕುತ್ತಿದ್ದೇನೆ… ಎಂದು ಬೋರ್ಡ್(Board)ಮೇಲೆ ಬರೆದು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ನಿಂತಿದ್ದಲ್ಲದೆ, ಈ ಬೋರ್ಡು ಹಿಡಿದು ಊರೂರು ಸುತ್ತಾಟ ಕೂಡ ನಡೆಸಿದ್ದಾಳೆ.ಯುವತಿಯ ವಿನೂತನ ರೀತಿಯನ್ನು ಕಂಡು ಮಾಧ್ಯಮಗಳು ಕ್ಯಾರೊಲಿನಾ ಗೀಟ್ಸ್ ಅವರನ್ನು ಹಿಂಬಾಲಿಸಿದ ಘಟನೆ ಕೂಡ ನಡೆದಿದೆ (Viral News).

ಹೀಗೆ, ಬೋರ್ಡ್ ಹಿಡಿದು ರಸ್ತೆಗಳಲ್ಲಿ ಓಡಾಟ ನಡೆಸಿದ ಪರಿಣಾಮ ಕೇವಲ 30 ನಿಮಿಷಗಳಲ್ಲಿ ಆಕೆ ತನಗೆ ತಕ್ಕ ವರನನ್ನು ಭೇಟಿಯಾಗಿದ್ದಾಳೆ. ಆತ ಆಕೆಯನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದು, ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರಂತೆ.ಈ ವಿನೂತನ ಪ್ರಯತ್ನದ ಕುರಿತು ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ಯುವತಿ ಕರೊಲಿನಾ ಗೀಟ್ಸ್, ಭಾವಿ ಪತಿಯನ್ನು ಹುಡುಕುತ್ತಿದ್ದೇನೆ ಎಂಬ ಫಲಕವನ್ನು ಹಿಡಿದು ನಗರದಾದ್ಯಂತ ತಿರುಗಾಡಿದೆ. ಕೆಲವು ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಈಗಾಗಲೇ ಕೆಲವು ಪುರುಷರ ಜೊತೆಗೆ ಸ್ನೇಹ ಹೊಂದಿದ್ದು, ಆದರೆ ಇದರಿಂದ ತನಗೆ ಕೇವಲ ಸಮಯ ವ್ಯರ್ಥ ಎಂಬ ವಿಚಾರ ತಿಳಿದು ಡೇಟಿಂಗ್ ಆ್ಯಪ್ ಮೊರೆ ಹೋಗುವುದನ್ನು ನಿಲ್ಲಿಸಿದೆ. ಈ ಹೊಸ ವ್ಯಕ್ತಿಯ ಪರಿಚಯ ತನ್ನ ಜೀವನದಲ್ಲಿ ಹೊಸದಾದ ಬದಲಾವಣೆ ತರುವುದೇ ಎಂಬುದನ್ನು ನೋಡುವ ಕಾತುರದಿಂದ ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ChatGPT: 17 ವೈದ್ಯರಿಂದ ಪತ್ತೆ ಮಾಡಲಾಗದ ಮಗುವಿನ ನೋವನ್ನು ಕ್ಷಣಾರ್ಧದಲ್ಲಿ ಹುಡುಕಿದ Chat GPT! ಏನದು ಅಂತಾ ನೋವು?

You may also like

Leave a Comment