Home » ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಆಕೆಯ ಮಾಂಸ ತಿಂದಿದ್ದ ‘ ನರಭಕ್ಷಕ ‘ ಮನುಷ್ಯ ಸಾವು

ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಆಕೆಯ ಮಾಂಸ ತಿಂದಿದ್ದ ‘ ನರಭಕ್ಷಕ ‘ ಮನುಷ್ಯ ಸಾವು

0 comments

ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದ ‘ಕೋಬ್ ನರಭಕ್ಷಕ’ ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು.

ಆತ ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದು ‘ ಕೋಬ್ ನರಭಕ್ಷಕ’ ಎಂದು ಕುಖ್ಯಾತಿ ಪಡೆದಿದ್ದ ಜಪಾನಿನ ಆ ಹಂತಕ.

ಇಸ್ಸಿ ಸಾಗವಾ 1981ರಲ್ಲಿ ಪ್ಯಾರಿಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ರೆನೀ ಹಾರ್ಟೆವೆಲ್ಟ್ ಎಂಬ ಡಚ್ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಅಲ್ಲಿ, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದ. ನಂತರ ವಿದ್ಯಾರ್ಥಿನಿಯ ಶವವನ್ನು ಮನೆಯಲ್ಲಿ ಬಚ್ಚಿಟ್ಟು ಸ್ವಲ್ಪ ಸ್ವಲ್ಪವೇ ದೇಹದ ಕೆಲ ಭಾಗಗಳನ್ನು ತಿಂದಿದ್ದಾನೆ. ಉಳಿದ ‘ಅನುಪಯುಕ್ತ ‘ ಅನ್ನಿಸಿದ ಭಾಗಗಳನ್ನು ಕೆಲ ದಿನಗಳ ನಂತರ ನಿಧಾನವಾಗಿ ಪಾರ್ಕ್ ನಲ್ಲಿ ಎಸೆದು ಬರುತ್ತಿದ್ದ. ಆಗ ಆತನನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸರ ಮುಂದೆ ತನ್ನ ಹೀನ ಅಪರಾಧವನ್ನು ಒಪ್ಪಿಕೊಂಡು ಎಲ್ಲಾ ವಿಚಾರವನ್ನೂ ಬಾಯಿ ಬಿಟ್ಟಿದ್ದ.

ಅಂತಹ ನರಭಕ್ಷಕ  ಕೃತ್ಯ ನಡೆಸಿದರೂ 1983 ರಲ್ಲಿ, ಫ್ರೆಂಚ್ ವೈದ್ಯಕೀಯ ತಜ್ಞರು ಇಸ್ಸಿ ಅವರ ಕಳಪೆ ಮಾನಸಿಕ ಸ್ಥಿತಿಯ ಕಾರಣದಿಂದ ವಿಚಾರಣೆ ಮಾಡಲು ಅನರ್ಹರು ಎಂದು ಘೋಷಿಸಿದರು. ವೈದ್ಯಕೀಯ ತಜ್ಞರು ನೀಡಿದ ವರದಿ ಪ್ರಕಾರ ಫ್ರೆಂಚ್ ಸರ್ಕಾರ ಅವರನ್ನು ಮಾನಸಿಕ ರೋಗಿ ಎಂದು ಪರಿಗಣಿಸಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿತ್ತು. ನಂತರ 1984ರಲ್ಲಿ ಅಪರಾಧದ ಮೂರು ವರ್ಷಗಳ ನಂತರ ಫ್ರಾನ್ಸ್ ದೇಶದಿಂದ ಆತನನ್ನು ಗಡೀಪಾರು ಮಾಡಿ ಜಪಾನ್ ಗೆ ಕಳುಹಿಸಲಾಯಿತು.

ಸಂತ್ರಸ್ತೆಯ ಕುಟುಂಬ ಸದಸ್ಯರು ಇಸ್ಸಿ ಸಾಗವಾ ನಿಗೆ ಜಪಾನ್‌ನಲ್ಲಿ ಶಿಕ್ಷೆಗೆ ಗುರಿಪಡಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅಲ್ಲದೇ ಆತನನ್ನು ಜಪಾನ್‌ಗೆ ಗಡಿಪಾರು ಮಾಡಿದ ಫ್ರಾನ್ಸ್, ಅಪರಾಧ ಇತಿಹಾಸಕ್ಕೆ ಸಂಬಂಧಿಸಿದ ಫೈಲ್ ಅನ್ನು ಜಪಾನ್ ಅಧಿಕಾರಿಗಳಿಗೆ ನೀಡಲೇ ಇಲ್ಲ. ಪರಿಣಾಮವಾಗಿ, ಜಪಾನಿನ ಅಧಿಕಾರಿಗಳು ಅವನ ಪ್ರಕರಣವನ್ನು ಮುಚ್ಚಿ ಬಿಟ್ಟರು ಮತ್ತು ಹೆಚ್ಚಿನ ಶಿಕ್ಷೆಯಿಂದ ಆತ ತಪ್ಪಿಸಿಕೊಂಡ.

ಇಸ್ಸೆ ಸಾಗವಾ ತನ್ನ ಕಾದಂಬರಿ ‘ಇನ್ ದಿ ಫಾಗ್’ ಸೇರಿ ಹಲವು ಕೃತಿಗಳನ್ನು ಬರೆದಿದ್ದರೂ ಎಲ್ಲೂ ಕೂಡಾ ತನ್ನ ಕೊಲೆಯ ರಹಸ್ಯವನ್ನು ಒಪ್ಪಿಕೊಂಡಿಲ್ಲ. ಹೀನ ಕೃತ್ಯದ ನಡೆಸಿದ್ದರೂ, ಆತ ಮಾಧ್ಯಮದ ಮಿತ್ರನಾಗಿದ್ದ. ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಿಗೆ ಕೂಡಾ ಆತ ಆಗಾಗ್ಗೆ ಸಂದರ್ಶನಗಳನ್ನು ನೀಡುವ ದೊಡ್ಡ ಸೆಲೆಬ್ರಿಟಿಯಾಗಿದ್ದ. ನರಭಕ್ಷಕ ಎಂದು ಹೆಸರಾಗಿದ್ದ ಇಸ್ಸೆ ಸಾಗವಾ ನ ಬಗ್ಗೆ ಸಾಕಷ್ಟು ಆರ್ಟಿಕಲ್ಸ್ ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ. ನರಭಕ್ಷಕ ಹಂತಕನಾಗಿದ್ದರೂ ಆತ ಸೆಲೆಬ್ರಿಟಿ ಸ್ಟೇಟಸ್ ಅನುಭವಿಸಿದ್ದ. ಇದೀಗ ಮೊನ್ನೆ ನವೆಂಬರ್ 24 ರಂದು ಆತ ಬದುಕು ಚುಕ್ತಾ ಮಾಡಿಕೊಂಡು ಹೋಗಿದ್ದಾನೆ.

You may also like

Leave a Comment