Home » ಇಟಲಿಗೆ ಮದುವೆಗೆಂದು ಹಾರಿದ ವಧು! ವರ ಮಾತ್ರ ಬಾಕಿ, ಕಾರಣ ಈ ಒಂದು ನಾಯಿ!!!

ಇಟಲಿಗೆ ಮದುವೆಗೆಂದು ಹಾರಿದ ವಧು! ವರ ಮಾತ್ರ ಬಾಕಿ, ಕಾರಣ ಈ ಒಂದು ನಾಯಿ!!!

0 comments
Italy

Italy: ಮದುವೆ (Marriage)ಎಂಬುದು ಎರಡು ಜೋಡಿಯ ಬೆಸೆಯುವ ಕೊಂಡಿ ಮಾತ್ರವಲ್ಲ ಎರಡು ಕುಟುಂಬವನ್ನು ಒಟ್ಟಾಗಿಸುವ ಸುಂದರ ಬಂಧ. ಮದುವೆ ಎಂದರೆ ಸಹಜವಾಗಿ ವಧು ವರರ ಪಾಲಿಗೆ ವಿಶೇಷವಾದ ದಿನವಾಗಿದ್ದು, ವಧು ವರರ ಪಾಲಿಗೆ ಪ್ರತಿ ಕ್ಷಣಗಳು ಕೂಡ ಅವಿಸ್ಮರಣೀಯ ಆನಂದವನ್ನು ಉಂಟು ಮಾಡುತ್ತವೆ.

ಮದುವೆಯನ್ನು ಮತ್ತಷ್ಟು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಜೋಡಿಯೊಂದು ಇಟಲಿಯಲ್ಲಿ ಆಗಸ್ಟ್ 31ಕ್ಕೆ ಮದುವೆಯ ಯೋಜನೆ ಹಾಕಿ ಮದುವೆಗೆ ಭರ್ಜರಿ ತಯಾರಿ ನಡೆಸಿದೆ. ಮದುವೆಗೆ ಪೂರ್ವ ತಯಾರಿಗೆ ವಧುವಿನ( Bride)ಕುಟುಂಬ ಇಟಲಿಯಲ್ಲಿ (Italy)ಎಲ್ಲ ಸಿದ್ದತೆ ನಡೆಸಿದ್ದು, ಇನ್ನೊಂದು ವಾರ ಮಾತ್ರ ಬಾಕಿಯಿದೆ ಎನ್ನುವಾಗ ವಧುವಿನ ಕುಟುಂಬ ಇಟಲಿಗೆ ಬಂದಿದೆ.ಆದರೆ, ಇದೀಗ ವರ (Groom)ಮಾತ್ರ ಮನೆಯಲ್ಲೇ ಉಳಿದು ಬಿಟ್ಟಿದ್ದಾನೆ. ಅರೇ, ಇದ್ಯಾಕೆ ಎಂಬ ಅಚ್ಚರಿ ನಿಮ್ಮನ್ನು ಕಾಡುತ್ತಿರಬಹುದು. ಹಾಗಿದ್ರೆ, ನೀವು ಈ ಕಹಾನಿ ಓದಲೇಬೇಕು.

ಇಂಗ್ಲೆಂಡ್‌ನ ಬಾಸ್ಟನ್ ನಗರದ ನಿವಾಸಿ ಡೋನಾಟೋ ಫ್ರಾಟ್ಟಾರೋಲಿ ತನ್ನ ಬಹುಕಾಲದ ಗೆಳತಿಯನ್ನು ಮದುವೆ ಯಾಗಲು ಸಜ್ಜಾಗಿದ್ದ. ವರ ಬೋಸ್ಟನ್ ನಗರದ ನಿವಾಸಿಯಾಗಿದ್ದು, ವಧು ಅಮೆರಿಕಾ ಪ್ರಜೆಯಾಗಿದ್ದು ಬೋಸ್ಟನ್ ಸಿಟಿ ಹಾಲ್‌ಗೆ ತೆರಳಿದ ವರ ಹಾಗೂ ವಧು, ಮದುವೆಯ ಕೆಲ ಕಾನೂನು ಪ್ರಕ್ರಿಯೆ ಮುಗಿಸಲು ತಯಾರಿ ನಡೆಸಿದ್ದಾರೆ. ಅರ್ಜಿ ಭರ್ತಿ, ಫೋಟೋ, ದಾಖಲೆಗಳ ಪ್ರತಿ ಸೇರಿ ಎಲ್ಲ ಪ್ರಕ್ರಿಯೆ ಮುಗಿಸಲು ಮುಂದಾಗಿದ್ದಾರೆ.

Italy

ಆದರೆ, ಈ ನಡುವೆ ಮನೆಯಲ್ಲಿ ಏಕಾಂಗಿಯಾಗಿದ್ದ ನಾಯಿ(Dog)ಬೆಳಗ್ಗೆಯಿಂದ ಸಂಜೆವರೆಗೆ ಮನೆಯಲ್ಲಿ ಯಾರು ಮನೆಯೊಳಗೆ ಬಂಧಿಯಾಗಿದ್ದ ನಾಯಿಗೆ ಸಿಟ್ಟು ಬಂದಿದೆ. ಹೀಗಾಗಿ ವರನ ಟೇಬಲ್ ಮೇಲಿದ್ದ ಪಾಸ್‌ಪೋರ್ಟ್ ಸೇರಿದಂತೆ ಇನ್ನಿತರ ಫೈಲ್‌ಗಳನ್ನು( File)ಕಚ್ಚಿ ಹರಿದುಹಾಕಿದ್ದು, ಅದರಲ್ಲಿಯೂ ವರನ ಪಾಸ್‌ಪೋರ್ಟ್ ಅನ್ನು ಜಗಿದು ಬಹುತೇಕ ಭಾಗ ನುಂಗಿ ಹಾಕಿ ಕೆಲವು ಚೂರುಗಳನ್ನು ಮಾತ್ರ ಬಿಟ್ಟಿದೆ.

ಮದುವೆ ಅರ್ಜಿ ಭರ್ತಿ ಸೇರಿದಂತೆ ಇತರ ಕೆಲಸ ಮುಗಿಸಿ ಮನೆಗೆ ಬಂದ ವರನಿಗೆ ಮನೆಯ ಪರಿಸ್ಥಿತಿ ಕಂಡು ಅಚ್ಚರಿಗೆ ಒಳಗಾಗಿದ್ದಾನೆ. ಪಾಸ್‌ಪೋರ್ಟ್ (Passport)ನಾಯಿ ಕಚ್ಚಿ ತಿಂದದ್ದು ಕಂಡು ಗಾಬರಿಯಾಗಿ ವಧುವಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ಹೀಗಾಗಿ, ವರ ಚೂರು ಚೂರಾದ ಪಾಸ್‌‌ಪೋರ್ಟ್ ಹಿಡಿದು ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಪಾಸ್‌ಪೋರ್ಟ್ ಕಚೇರಿಗೆ ತೆರಳಿದ ವರ ನಡೆದ ಘಟನೆ ತಿಳಿಸಿ ಅತೀ ಶೀಘ್ರದಲ್ಲಿ ಪಾಸ್‌ಪೋರ್ಟ್ ನವೀಕರಿಸುವಂತೆ ಮನವಿ ಮಾಡಿದ್ದಾನೆ. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಪಾಸ್‌ಪೋರ್ಟ್ ವಿಭಾಗದ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದೆ. ಕೆಲ ಕಾನೂನು ಪ್ರಕ್ರಿಯೆಯ ಹಿನ್ನೆಲೆ ಪಾಸ್‌ಪೋರ್ಟ್ ಆಗಸ್ಟ್ 29ರೊಳಗೆ ವರನ ಕೈಸೇರುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರಂತೆ. ಹೀಗಾಗಿ, ಅಧಿಕಾರಿಗಳು ನೀಡಿದ ಭರವಸೆಯಂತೆ ವಧುವಿನ ಕುಟುಂಬಸ್ಥರಿಗೆ ಇಟಲಿಗೆ ತೆರಳಲು ವರ ಸೂಚಿಸಿದ್ದಾನೆ. ಒಂದು ವೇಳೆ ಪಾಸ್‌ಪೋರ್ಟ್ ಸಿಗುವುದು ತಡವಾದರೆ ವರ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾನಂತೆ. ವಧುವಿನ ತವರಾದ ಅಮೆರಿಕದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಮದುವೆಯಾಗಿ ಪರಿವರ್ತಿಸುವ ಪ್ಲಾನ್ ಮಾಡಲಾಗಿದೆಯಂತೆ.

ಇದನ್ನೂ ಓದಿ: ಕುಂದಾಪುರ: ಸೀಮೆಎಣ್ಣೆ ಸುರಿದು ಪೊಲೀಸರ ಮೇಲೆ ಎಸೆದ ಮಹಿಳೆ! ಈಕೆಯ ರೋಷಾವೇಷಕ್ಕೆ ಕಾರಣವೇನು ಗೊತ್ತೇ?

You may also like

Leave a Comment