Home » America: ಗಂಡ ಸತ್ತ ಮೇಲೆ 17 ರ ಮಗ ಬಂಧಿ ಮಾಡಿದ ಅಮ್ಮ, ಸ್ವಂತ ಮಗನನ್ನೇ ಹಿಡಿದಿಟ್ಟು ಕಾಮತೃಷೆ ಮುಗಿಸುತ್ತಿದ್ದ ತಾಯಿ !

America: ಗಂಡ ಸತ್ತ ಮೇಲೆ 17 ರ ಮಗ ಬಂಧಿ ಮಾಡಿದ ಅಮ್ಮ, ಸ್ವಂತ ಮಗನನ್ನೇ ಹಿಡಿದಿಟ್ಟು ಕಾಮತೃಷೆ ಮುಗಿಸುತ್ತಿದ್ದ ತಾಯಿ !

0 comments
America

America: ಗಂಡ ಸತ್ತ ಮೇಲೆ ಜೆನ್ನಿ ಸಂತಾನಾ ಎಂಬ ಮಹಿಳೆ ತನ್ನ ಮಗನನ್ನೇ ಬಂಧಿಸಿ ಲೈಂಗಿಕ ಕ್ರಿಯೆಗೆ ಆತನನ್ನು ಬಳಸಿಕೊಳ್ಳುತ್ತಿದ್ದ ಪ್ರಕರಣ ಅಮೆರಿಕದಲ್ಲಿ (America) ಬೆಳಕಿಗೆ ಬಂದಿದೆ. ಗಂಡ ಸತ್ತ ಬಳಿಕ 8 ವರ್ಷಗಳ ಕಾಲ ಮಗನನ್ನು ಬಂಧಿಸಿಟ್ಟು ಗಂಡನಂತೆ ಹಾಸಿಗೆ ಹಂಚಿಕೊಳ್ಳಲು ಒತ್ತಾಯಿಸಿದ್ದಾಳೆ. ಆತನಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾಳೆ. ಈಕೆಯ ಈ ಕೃತ್ಯಕ್ಕೆ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿ ಎಲ್ಲರ ಕಣ್ಣು ತಪ್ಪಿಸಿ ಆತನನ್ನು ಬಂಧಿಸಿಟ್ಟಿದ್ದಾಳೆ.

ಯುವಕನ ಹೆಸರು ರೂಡಿ ಫರಿಯಾಸ್ (17) ಎಂದಾಗಿದೆ.‌ ರೂಡಿ 2015ರಲ್ಲಿ ಈಶಾನ್ಯ ಹೂಸ್ಟನ್‌ನಲ್ಲಿರುವ ತನ್ನ ಕುಟುಂಬದ ಮನೆಯ ಬಳಿ ತನ್ನ ಎರಡು ನಾಯಿಗಳನ್ನು ವಾಕಿಂಗ್ ಕರೆದೊಯ್ಯುತ್ತಿದ್ದಾಗ ಮರಳಿ ಬಾರದೆ ನಾಪತ್ತೆಯಾಗಿದ್ದ. ಮಗನ ನಾಪತ್ತೆ ಆಗಿದ್ದಾನೆ ಎಂದು
ಆತನ ತಾಯಿಯೇ (Mother) ದೂರು ನೀಡಿದ್ದಳು. ತನಿಖೆಯಿಂದ ನಾಯಿಗಳು ಪತ್ತೆಯಾಗಿದವು. ಆದರೆ ರೂಡಿ ಪತ್ತೆಯಾಗಿರಲ್ಲಿಲ್ಲ. ಹಲವು ವರ್ಷಗಳ ನಂತರ ಇದೀಗ ಚರ್ಚ್‌ನ ಹೊರಗೆ ರೂಡಿ ಪತ್ತೆಯಾಗಿದ್ದಾನೆ. ಆತನಿಗೆ ಈಗ 25 ವರ್ಷ ವಯಸ್ಸಾಗಿದೆ.

ರೂಡಿ ಪತ್ತೆಯಾದ ನಂತರ, ಅವನನ್ನು ವಿಚಾರಣೆಗೆ (Enquiry) ಒಳಪಡಿಸಲಾಗಿದ್ದು, ಈ ವೇಳೆ ತನ್ನ ತಾಯಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾನೆ. ಜೆನ್ನಿ ಸಂತಾನಾ ಆತನನ್ನು ಸುಮಾರು 8 ವರ್ಷಗಳ ಕಾಲ ಲೈಂಗಿಕ ಗುಲಾಮನಾಗಿ ಇಟ್ಟುಕೊಂಡಿದ್ದಳು ಎಂದು ಹೇಳಿದ್ದಾನೆ. ಅಲ್ಲದೆ, ತಂದೆ ಮೃತಪಟ್ಟ ಬಳಿಕ ಜೆನ್ನಿ ಮಗನನ್ನು ಹಾಸಿಗೆಯಲ್ಲಿ ಗಂಡನಾಗುವಂತೆ (Husband) ಒತ್ತಾಯಿಸಿದ್ದಾಳೆ. ಯಾರಿಗೂ ಏನನ್ನೂ ಹೇಳದಂತೆ ಬೆದರಿಕೆ ಹಾಕುತ್ತಿದ್ದಳು ಎಂದಿದ್ದಾನೆ. ಘಟನೆಯು ಸಂಪೂರ್ಣ ಮಾಹಿತಿ ತಿಳಿದ ಪೊಲೀಸರು ತಾಯಿಯನ್ನು ವಶಕ್ಕೆ ತೆಗೆದುಕೊಂಡರು.

ಮಹಿಳೆ ಬಾಲಕನನ್ನು ಎಂಟು ವರ್ಷಗಳ ಕಾಲ ಸುಳ್ಳು ಹೆಸರುಗಳನ್ನು ಬಳಸಿ ಬಚ್ಚಿಟ್ಟಿದ್ದಳು. ತನ್ನ ಮಗು ರೂಡಿ ಇನ್ನೂ ಕಾಣೆಯಾಗಿದೆ ಎಂದು ಪೊಲೀಸರನ್ನು ವಂಚಿಸುತ್ತಲೇ ಇದ್ದಳು ಎನ್ನಲಾಗಿದೆ. ಇದೀಗ ಮಹಿಳೆಯನ್ನು ಲೈಂಗಿಕ ದೌರ್ಜನ್ಯ ಮತ್ತು ಅಪಹರಣದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಪೊಲೀಸರು ರೂಡಿಗೆ ಕೌನ್ಸೆಲಿಂಗ್ ಮಾಡುತ್ತಿದ್ದಾರೆ. 8 ವರ್ಷಗಳ ಕಾಲ ಬಂಧಿಯಾಗಿದ್ದು, ಪದೇ ಪದೇ ತನ್ನ ತಾಯಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವಕನ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜನತೆಗೆ ಗುಡ್’ನ್ಯೂಸ್ ; ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ಡಬ್ಬಲ್ ?! ಸಚಿವ ಕೊಟ್ರು ಲೇಟೆಸ್ಟ್ ಅಪ್ಡೇಟ್ !

You may also like

Leave a Comment