Indonesia: ಫಿಟ್ನೆಸ್ ಟ್ರೈನರ್ (Fitness Trainer) ಒಬ್ಬ ಧಾರುಣ ಸಾವು ಕಂಡಿದ್ದಾನೆ. 210 ಕೆಜಿ ಭಾರ ಎತ್ತಲು ಹೋದಾಗ ಭಾರ ಕುತ್ತಿಗೆಗೆ ಬಿದ್ದು ಫಿಟ್‌ನೆಸ್ ಟ್ರೈನರ್‌ವೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಇಂಡೋನೇಷ್ಯಾದ ರಾಜಧಾನಿ ಬಾಲಿಯಲ್ಲಿ (Indonesia) ನಡೆದಿದೆ.
ಜಸ್ಟಿನ್ ವಿಕಿ ಎನ್ನುವ 33 ವಯಸ್ಸಿನ ಫಿಟ್‌ನೆಸ್ ಟ್ರೈನರ್ ಸಾವನ್ನಪ್ಪಿದ ವ್ಯಕ್ತಿ. ಈತ ವೇಟ್ ಲಿಫ್ಟಿಂಗ್ ವೇಳೆ 210 ಕೆಜಿ ಭಾರವನ್ನು ಎತ್ತಲು ಪ್ರಯತ್ನಿಸಿದ್ದಾರೆ. ಆದರೆ ಆ ವೇಳೆ ಅಷ್ಟು ಭಾರ ಎತ್ತಲಾಗದೇ ಕೈ ಚೆಲ್ಲಿ ಬಿಟ್ಟಿದ್ದು, ಈ ವೇಳೆ ಭಾರವು ಅವರ ಕುತ್ತಿಗೆಗೆ ಬಿದ್ದಿದೆ. ಪರಿಣಾಮವಾಗಿ ಯುವ ವೇಯ್ಟ್ ಲಿಫ್ಟರ್ ಜಸ್ಟಿನ್ ಮೃತಪಟ್ಟಿದ್ದಾರೆ.
ಆ ಪರಿಪ್ರಮಾಣದ ಭಾರ ಬಿದ್ದ ಪರಿಣಾಮ ಅವರ ಕುತ್ತಿಗೆಯೇ ಮುರಿದು ಹೋಗಿದೆ. ಭಾರ ಬಿದ್ದ ಕಾರಣದಿಂದ ಶ್ವಾಸ ನಾಳ ಮತ್ತು ಹೃದಯ ಸಂಬಂಧಿತ ಕೊಳವೆ ಮತ್ತು ನರಗಳಿಗೆ ಭಾರೀ ಹಾನಿಯಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಕೆಲವು ದಿನಗಳ ಚಿಕಿತ್ಸೆ ನಂತರ ಚಿಕಿತ್ಸೆ ಫಲಕಾರಿಯಾಗದೆ ಜಸ್ಟಿನ್ ಸಾವಿಗೀಡಾಗಿದ್ದಾನೆ.
ಯುವ ಕ್ರೀಡಾಪಟು ಜಸ್ಟಿನ್ ದುರಂತ ಅಂತ್ಯಕ್ಕೆ ವ್ಯಾಪಕ ದುಃಖ ವ್ಯಕ್ತವಾಗಿದ್ದು, ಆತನ ಸ್ನೇಹಿತರು, ಬಂಧುಗಳು, ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಫಿಟ್‌ನೆಸ್ ನಲ್ಲಿ ಎಕ್ಸ್ ಪರ್ಟ್ ಆಗಿದ್ದ ಆತ ತನ್ನ ದೇಹವನ್ನು ಕಟೆದ ಶಿಲ್ಪದಂತೆ ಇಟ್ಟುಕೊಂಡಿದ್ದ. ಜೊತೆಗೆ ಇತರರಿಗೂ ಇತರರಿಗೆ ಸ್ಫೂರ್ತಿ ಮತ್ತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಹಲವಾರು ಫಿಟ್ನೆಸ್ ಆಕಾಂಕ್ಷಿಗಳನ್ನು ಆತ ತಯಾರು ಮಾಡಿದ್ದ.
ಇದನ್ನೂ ಓದಿ: ಪಬ್ಜಿ ಪ್ರೇಮದ ಬೆನ್ನಲ್ಲೇ ಈಗ ಪೋಲಂಡ್ ಪ್ರೀತಿ, ಪ್ರಿಯಕರನಿಗಾಗಿ 6 ವರ್ಷದ ಮಗಳೊಂದಿಗೆ ಭಾರತಕ್ಕೆ ಹಾರಿ ಬಂದ ಪೋಲೆಂಡ್ ಮಹಿಳೆ
