Home » ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಗುಂಡಿನ ದಾಳಿ : 19 ಮಂದಿ ದುರ್ಮರಣ

ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಗುಂಡಿನ ದಾಳಿ : 19 ಮಂದಿ ದುರ್ಮರಣ

by Praveen Chennavara
0 comments

ಮೆಕ್ಸಿಕೋ : ಕೇಂದ್ರ ಮೆಕ್ಸಿಕೋದಲ್ಲಿ ನಡೆಯುತ್ತಿದ್ದ ಸಭೆಯ ಮೇಲೆ ದಾಳಿ ಮಾಡಿ 19 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಮಿಚೊಯಾಕನ್ ರಾಜ್ಯದ ಲಾಸ್ ತಿನಾಜಾಸ್ ಪಟ್ಟಣದಲ್ಲಿ ನಡೆದ ಸಭೆಯ ಮೇಲೆ ದಾಳಿ ನಡೆದ ವರದಿಗಳ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 10:30ರ ಸುಮಾರಿಗೆ (ಭಾರತೀಯ ಕಾಲಮಾನ) ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು.

’19 ನಿರ್ಜೀವ ದೇಹಗಳು (16 ಪುರುಷರು ಮತ್ತು ಮೂವರು ಮಹಿಳೆಯರು) ಪತ್ತೆಯಾಗಿವೆ, ಅವರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ’ ಎಂದು ಎಫ್ಜಿಇ ತಿಳಿಸಿದೆ.

You may also like

Leave a Comment