Home » Sydney: ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ – ಕ್ರಿಕೆಟ್ ನ ಹಲವು ದಾಖಲೆ ಮುರಿದ ರೋಹಿತ್ ಮತ್ತು ಕೊಹ್ಲಿ

Sydney: ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ – ಕ್ರಿಕೆಟ್ ನ ಹಲವು ದಾಖಲೆ ಮುರಿದ ರೋಹಿತ್ ಮತ್ತು ಕೊಹ್ಲಿ

0 comments

 

Sydney ಸಿಗ್ನಿಯಲ್ಲಿ ಏಕದಿನ ಪಂದ್ಯ ನಡೆಯುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಪತನಮಾಡಿದ್ದಾರೆ.

ಹೌದು, ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ನೀಡಿದ್ದ 237 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ರೋಹಿತ್ ಶರ್ಮಾ ಶತಕ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಭರ್ಜರಿ ಗೆಲವು ದಾಖಲಿಸಿತು. ಭಾರತ 38.3 ಓವರ್ ನಲ್ಲಿಯೇ 1 ವಿಕೆಟ್ ಮಾತ್ರ ಕಳೆದುಕೊಂಡು 237 ರನ್ ಗಳಿಸಿ 9 ವಿಕೆಟ್ ಗಳ ಗೆಲುವು ದಾಖಲಿಸಿತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 125 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 13 ಬೌಂಡರಿ ಸಹಿತ 121 ರನ್ ಗಳಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ ಕೂಡ 81 ಎಸೆತಗಳಲ್ಲಿ 7 ಬೌಂಡರಿ ಸಹಿತ 74 ರನ್ ಗಳಿಸಿದರು. ಈ ಜೋಡಿ ಮುರಿಯದ 2ನೇ ವಿಕೆಟ್ ಗೆ 168 ರನ್ ಗಳ ಅಮೋಘ ಜೊತೆಯಾಟವಾಡಿ, ಆ ಮೂಲಕ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಛಿದ್ರಗೊಳಿಸಿದೆ.

ಈ ಮೂಲಕ ಶತಕ ಜೊತೆಯಾಟದ ಮೂಲಕ ರೋಹಿತ್ ಮತ್ತು ಕೊಹ್ಲಿ ಜೋಡಿ ಅತೀ ಹೆಚ್ಚು ಬಾರಿ ಶತಕ ಜೊತೆಯಾಟವಾಡಿದ ಜಗತ್ತಿನ ಮೂರನೇ ಯಶಸ್ವಿ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ.

You may also like