Black Panther : ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್ ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯ ಫೋಟೋ ನೆಟ್ಟಿಗರನ್ನು ಅಚ್ಚರಿ ಮೂಡಿಸಿದೆ. ಹೀಗೂ ಉಂಟೇ ಎಂಬ ಪ್ರಶ್ನೆ ಮೂಡುವಂತಹ ವೀಡಿಯೋ ವೈರಲ್ ಆಗಿದೆ. ಹಾಗಿದ್ರೆ, ಅಂತಹದ್ದೇನು ಕಹಾನಿ ಅನ್ನೋ ಕುತೂಹಲ ನಿಮಗೂ ಇದ್ದರೆ ನೀವೂ ಇಂಟರೆಸ್ಟಿಂಗ್ ವಿಷಯ ಕೇಳಲೇಬೇಕು.
ಸಾಕು ಪ್ರಾಣಿ (pets) ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!! ನಾಯಿ (Dog), ಬೆಕ್ಕು (Cat) ಪ್ರೀತಿಯಿಂದ ಮನೆ ಸದಸ್ಯನ ಹಾಗೆ ನೋಡಿಕೊಳ್ಳುವ ಹವ್ಯಾಸ ಹೆಚ್ಚಿನವರಿಗೆ ಇದೆ. ಒಂದು ವೇಳೆ, ನೀವು ಪ್ರೀತಿಯಿಂದ ಬೆಕ್ಕು ಎಂದು ಸಾಕಿದ ಪ್ರಾಣಿ (pets) ಬೇರಾವುದೋ ಪ್ರಾಣಿಯಾಗಿದ್ದರೆ?? ಹೇಗಿರಬಹುದು ನಿಮ್ಮ ಪರಿಸ್ಥಿತಿ? ಅರೇ, ಇದೇನಿದು? ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮಗೆ ಕಾಡಬಹುದು.ನಿಮ್ಮ ಗೊಂದಲವನ್ನೂ ನಾವು ಬಗೆ ಹರಿಸ್ತೀವಿ. ನಿಮಗೆ ಕೇಳಿದಾಗ ಅಚ್ಚರಿ ಎಂದೆನಿಸಿದರೂ ಈ ರೀತಿಯ ವಿಚಿತ್ರ ಅನುಭವವಾದ ಪ್ರಕರಣ ಬೆಳಕಿಗೆ ಬಂದಿದೆ.
ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಪ್ರಾಣಿಗಳನ್ನು ಕಂಡಾಗ ಹೊಟ್ಟೆ ಚುರುಕ್ ಎನ್ನುವುದು ಸಹಜ.ಅದರಲ್ಲಿ ಕೆಲವರು ಅನಾಥ ಜೀವಿಗಳನ್ನೂ ಮನೆಗೆ ಕರೆದೊಯ್ದು ಸಾಕುವುದುಂಟು.ಇದೇ ರೀತಿ, ರಷ್ಯಾದ ಮಹಿಳೆ ದಾರಿಯಲ್ಲಿ ಸಿಕ್ಕ ಕಪ್ಪುಮರಿಯೊಂದನ್ನು ಬೆಕ್ಕಿನಮರಿಯೆಂದು ಸಾಕಿದ್ದಾಳೆ. ಆದರೆ, ಅದು ಬೆಳೆಯುತ್ತ ಹೋದಂತೆ ಅದು ಕಪ್ಪುಚಿರತೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ರಷ್ಯಾದ(Russia)ಮಹಿಳೆಯ ಬೆಕ್ಕು ಎಂದು ಕರಿಚಿರತೆಯನ್ನು ಸಾಕಿದ್ದು, ನೆಟ್ಟಿಗರು ಮಹಿಳೆಯ ಪ್ರಾಣಿಪ್ರೀತಿ, ಸಹಾನುಭೂತಿಯನ್ನು ಕಂಡು ಬೆರಗಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಮಹಿಳೆಯ ಮನೆಯ ನಾಯಿ ಕೂಡ ಈ ಅನಾಥ ಮರಿಯನ್ನು ತನ್ನದೇ ಮರಿಯೆಂಬಂತೆ ಪೋಷಿಸುತ್ತದೆ. ದಿನದಿಂದ ದಿನಕ್ಕೆ ಬೆಕ್ಕು ಎಂದು ಭಾವಿಸಿದ್ದ ಪ್ರಾಣಿ ಬೆಳೆಯುತ್ತ ಹೋದಂತೆ ಅದರ ದೇಹ ವೈಖರಿ ಕಂಡು ಅದು ಬೆಕ್ಕಲ್ಲ ಕರಿಚಿರತೆ (Black Panther) ಎಂಬ ವಿಚಾರ ಬಯಲಾಗಿದೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅದ ವೀಡಿಯೋ ನೆಟ್ಟಿಗರ ಕಣ್ಮನ ಸೆಳೆಯುತ್ತಿರುವುದು ಸುಳ್ಳಲ್ಲ.
ಸೆ. 21 ರಂದು ಹಂಚಿಕೊಂಡ ಈ ವಿಡಿಯೋ@factmayor ಎಂಬ ಇನ್ಸ್ಟಾಗ್ರಾಂ ಖಾತೆದಾರರು ಈ ಪೋಸ್ಟ್ ಅನ್ನು ಮಾಡಿದ್ದು, ಇದನ್ನು @luna_the_pantera ಎಂಬ ಖಾತೆಯಿಂದ ಅಪ್ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ 10 ಮಿಲಿಯನ್ಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ”. ನಿಮ್ಮ ಮನೆಗೆ ಬಂದ ಯಾರಿಗೇ ಆಗಲಿ ಮೊದಲಿಗೆ ಇದೊಂದು ಕಾವಲುನಾಯಿ ಎನ್ನಿಸಬಹುದು. ಹತ್ತಿರ ಹೋದಾಗಲೇ ಇದೊಂದು ಕರಿಚಿರತೆ ಎಂಬ ಅರಿವಾಗುವುದು “ಎಂದು ನೆಟ್ಟಿಗರೊಬ್ಬರು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಕೆಲವರು “ಈ ಮಗುವಿನ ಜೀವ ಉಳಿಸಿದ್ದಕ್ಕೆ ನಿಮಗೆ ಧನ್ಯವಾದ” ಎಂದಿದ್ದಾರೆ. ವೈರಲ್ ಆದ ಈ ವೀಡಿಯೋಗೆ ಹೀಗೆ ತರಹೇವಾರಿ ಕಾಮೆಂಟ್ಸ್ ಗಳು ಬರುತ್ತಿವೆ.
ಇದನ್ನೂ ಓದಿ: Appointment : 51 ಸಾವಿರ ಮಂದಿಗೆ ಪ್ರಧಾನಿ ಮೋದಿಯವರಿಂದ ನೇಮಕಾತಿ ಪತ್ರ ವಿತರಣೆ
