Home » ಇಲ್ಲಿನ ಜನರು ಮನೆಯಿಂದ ಹೊರ ಹೋಗಲು ವಿಮಾನವನ್ನೇ ಬಳಸುತ್ತಾರಂತೆ !! | ನಾವು ಕಾರು ಬಳಸಿದಂತೆ ವಿಮಾನ ಬಳಸುವ ಈ ಜನರ ಲೈಫ್ ಸ್ಟೈಲ್ ನ ಹಿಂದಿದೆ ಒಂದು ರೋಚಕ ಕಥೆ

ಇಲ್ಲಿನ ಜನರು ಮನೆಯಿಂದ ಹೊರ ಹೋಗಲು ವಿಮಾನವನ್ನೇ ಬಳಸುತ್ತಾರಂತೆ !! | ನಾವು ಕಾರು ಬಳಸಿದಂತೆ ವಿಮಾನ ಬಳಸುವ ಈ ಜನರ ಲೈಫ್ ಸ್ಟೈಲ್ ನ ಹಿಂದಿದೆ ಒಂದು ರೋಚಕ ಕಥೆ

0 comments

ನಮ್ಮ ದೇಶದಲ್ಲಿ ಇದೀಗ ಪ್ರತಿಯೊಬ್ಬ ಸಾಮಾನ್ಯ ವರ್ಗದದವನ ಮನೆಯಲ್ಲಿ ಒಂದಲ್ಲ ಒಂದು ರೀತಿಯ ವಾಹನ ಇದ್ದೇ ಇರುತ್ತದೆ. ನಗರಗಳಲ್ಲಂತೂ ಕಾರು ಇಲ್ಲದ ಮನೆಗಳಿಲ್ಲ ಎಂದೇ ಹೇಳಬಹುದು. ಭಾರತದಲ್ಲಿ ಕಾರು ಹೊಂದುವುದೇ ಒಂದು ರೀತಿಯ ಸಿರಿತನ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಅಮೆರಿಕದ ಕ್ಯಾಮರೂನ್ ಪಾರ್ಕ್‌ನಲ್ಲಿರುವ ನಿವಾಸಿಗಳು ಸ್ವಂತ ವಿಮಾನಗಳನ್ನೇ ಹೊಂದಿದ್ದಾರೆ!! ಹೌದು. ಅಲ್ಲಿನ ಜನರು ಕಾರುಗಳಂತೆ ತಮ್ಮ ಮನೆಯ ಮುಂದೆ ವಿಮಾನಗಳನ್ನು ನಿಲ್ಲಿಸುತ್ತಾರಂತೆ. ಅಚ್ಚರಿಯಾದರೂ ಇದು ನಿಜ.

ಕ್ಯಾಲಿಫೋರ್ನಿಯಾದ ಕ್ಯಾಮರೂನ್ ಪಾರ್ಕ್‌ನಲ್ಲಿ ವಾಸಿಸುವ ಜನರು ಕೆಲಸಕ್ಕೆ ಹೋಗಲು ವಿಮಾನಗಳನ್ನೇ ಬಳಸುತ್ತಾರಂತೆ. ಈ ಪಟ್ಟಣದ ತುಂಬಾ ವಿಮಾನಗಳದ್ದೇ ಕಾರುಬಾರು. ಕಾರುಗಳನ್ನು ನಾವು ಹೇಗೆ ಬಳಸುತ್ತೇವೋ ಅಂತೆಯೇ ಇಲ್ಲಿನ ಜನರು ವಿಮಾನಗಳನ್ನು ಬಳಸುತ್ತಾರೆ. ಈ ಬಗ್ಗೆ ಒಂದು ವೀಡಿಯೋ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅದು 2ನೇ ವಿಶ್ವ ಮಹಾಯುದ್ಧದ ನಂತರದ ಕಾಲಘಟ್ಟ. ಅಮೆರಿಕದಲ್ಲಿ ಅನೇಕ ವಿಮಾನ ನಿಲ್ದಾಣಗಳು ಹಾಗೆಯೇ ಉಳಿದಿದ್ದವು. ಪೈಲಟ್‌ಗಳ ಸಂಖ್ಯೆ 1939ರಲ್ಲಿ 34 ಸಾವಿರ ಇದ್ದದ್ದು 1946ಕ್ಕೆ 4 ಲಕ್ಷ ಆಗಿತ್ತು. ಹೀಗಾಗಿ ಇಲ್ಲಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶದಾದ್ಯಂತ ವಸತಿ ವಾಯುನೆಲೆ ಸ್ಥಾಪಿಸಲು ಮುಂದಾಯಿತು. ಇದರಿಂದ ನಿಷ್ಕ್ರಿಯಗೊಂಡ ಸೇನಾ ಲೇನ್‌ಗಳು, ನಿವೃತ್ತ ಸೇನಾ ಪೈಲಟ್‌ಗಳಿಗೆ ಅವಕಾಶ ಸಿಕ್ಕಿತು. ಕ್ಯಾಲಿಫೋರ್ನಿಯಾದ ಕ್ಯಾಮರೂನ್ ಏರ್‌ಪಾರ್ಕ್‌ ಹೀಗೆ ನಿರ್ಮಾಣವಾಯಿತಂತೆ. ಗ್ಯಾರೇಜ್‌ಗಳಲ್ಲಿ ಕಾರುಗಳನ್ನು ಇರಿಸುವಂತೆಯೇ ಇಲ್ಲಿನ ನಿವಾಸಿಗಳು ವಿಮಾನಗಳನ್ನು ತಮ್ಮ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸುತ್ತಾರಂತೆ.

ಈ ಪಟ್ಟಣದ ಬೀದಿಗಳು ವಿಶಾಲವಾಗಿದ್ದು, ಪೈಲಟ್‌ಗಳು ಹತ್ತಿರದ ವಿಮಾನ ನಿಲ್ದಾಣಕ್ಕೆ ಹೋಗಲು ಬಳಸಿಕೊಳ್ಳುವಂತೆ ಅವುಗಳನ್ನು ರೂಪಿಸಲಾಗಿದೆ. ಇಲ್ಲಿನ ಪ್ರತಿಯೊಂದು ರಸ್ತೆಯೂ ದೊಡ್ಡದಾಗಿದ್ದು, ವಿಮಾನ ಮತ್ತು ಕಾರುಗಳು ಸುಲಭ ಮತ್ತು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ. ಇಲ್ಲಿ ವಾಸಿಸುವ ಬಹುತೇಕ ಜನರ ಬಳಿ ವಿಮಾನವಿದ್ದು, ಕೆಲಸಕ್ಕೆ ಕಾರುಗಳ ಬದಲು ಹೆಚ್ಚಾಗಿ ವಿಮಾನವನ್ನೇ ಬಳಸಲಾಗುತ್ತದೆ. ವರದಿಗಳ ಪ್ರಕಾರ, ಪ್ರಪಂಚದಲ್ಲಿ 630ಕ್ಕೂ ಹೆಚ್ಚು ವಸತಿ ಏರ್‌ಪಾರ್ಕ್‌ಗಳಿದ್ದು, ಈ ಪೈಕಿ 610ಕ್ಕೂ ಹೆಚ್ಚು ಅಮೆರಿಕದಲ್ಲಿವೆಯಂತೆ.

You may also like

Leave a Comment