Home » ತನ್ನ ತಂದೆಯನ್ನೇ ಮದುವೆಯಾದ ಯುವತಿ! ʼನನ್ನ ನಿರ್ಧಾರ ಸಂಪೂರ್ಣವಾಗಿ ಸರಿʼ ಎಂದಳು ಈ ನಾರಿ

ತನ್ನ ತಂದೆಯನ್ನೇ ಮದುವೆಯಾದ ಯುವತಿ! ʼನನ್ನ ನಿರ್ಧಾರ ಸಂಪೂರ್ಣವಾಗಿ ಸರಿʼ ಎಂದಳು ಈ ನಾರಿ

by Mallika
0 comments
Weird marriage

Weird Marriage : ಇನ್ನು ಏನೇನು ನೋಡಬೇಕು ನಾವು ಎಂದು ನಿಮಗೆ ಈ ಹೆಡ್ಡಿಂಗ್‌ ನೋಡುವಾಗ ಅನಿಸದೇ ಇರದು. ಹೌದು, ಈ ಯುವತಿ ತನ್ನ ತಾಯಿಯ ಮಾಜಿ ಬಾಯ್‌ಫ್ರೆಂಡನ್ನೇ(Weird Marriage ) ಮದುವೆಯಾಗಿರುವುದಾಗಿ, ಸಾಮಾಜಿಕ ಜಾಲತಾಣದಲ್ಲಿ ಹೇಳುವ ಮೂಲಕ ಸಂಚಲನ ಮೂಡಿಸಿದ್ದಾಳೆ. ಆದರೆ ತನ್ನ ಪತಿ ಬೇರೆ ಯಾರೂ ಅಲ್ಲ ತನ್ನ ಮಲತಂದೆ ಎಂದು ಮಹಿಳೆ ಬಹಿರಂಗಪಡಿಸಿದಾಗ ನಿಜಕ್ಕೂ ಜನ ಆಶ್ಚರ್ಯಗೊಂಡಿದ್ದಾರೆ. ತನ್ನ ಜೀವನದ ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಯುವತಿ ಹೇಳಿದ್ದಾಳೆ. ಈ ವಿಚಿತ್ರ ಮದುವೆಯ ಬಗ್ಗೆ ಈಗ ಜನರು ವಿಭಿನ್ನವಾಗಿ ಮಾತನಾಡುತ್ತಿರುವುದಂತೂ ಖಂಡಿತ.

ಇತ್ತೀಚೆಗೆ, ಅಮೇರಿಕಾದ ಲಾಸ್ ವೇಗಾಸ್‌ನಲ್ಲಿ ಈ ವಿಚಿತ್ರ ವಿವಾಹವನ್ನು ಮಾಡಿಕೊಂಡ ವಧು ಕ್ರಿಸ್ಟಿ #MarryYourMomsEx ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ತಾನು ತನ್ನ ಮಲತಂದೆಯನ್ನು ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾದರು.

ಮಲತಂದೆಯನ್ನು ಮದುವೆಯಾಗುವ ಮೂಲಕ ಸರಿಯಾದ ನಿರ್ಧಾರವನ್ನು ತೆಗೆದುಕೊಂಡೆ

ಫ್ಲೋರಿಡಾದ ಟ್ಯಾಂಪಾ ನಿವಾಸಿ ಕ್ರಿಸ್ಟಿ ಇಬ್ಬರು ಮಕ್ಕಳ ತಾಯಿ. ಈಕೆ ತನ್ನ ವೈರಲ್‌ ಕ್ಲಿಪ್‌ನಲ್ಲಿ ತನ್ನ ಮಲತಂದೆಯನ್ನು ಮದುವೆಯಾಗುವುದು ಅವಳು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿದೆ ಎಂದು ಹೇಳಿದ್ದಾಳೆ. ಅವಳು ತನ್ನ ಮದುವೆಯನ್ನು ಆಚರಿಸುವಾಗ ತನ್ನ ಮಲತಂದೆಗೆ ಮುತ್ತಿಡುವ ಫೋಟೋ ಕೂಡಾ ಶೇರ್‌ ಮಾಡಿದ್ದಾಳೆ. ಕ್ರಿಸ್ಟಿ ಅವರ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು 20 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟಿದೆ. ಅದೇ ಸಮಯದಲ್ಲಿ, ಬಳಕೆದಾರರು ಈ ವೀಡಿಯೋ ವೀಕ್ಷಿಸಿದ ನಂತರ ಅನೇಕ ಜನ ಅನೇಕ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಅಮ್ಮನಿಗೆ ತೊಂದರೆ ಇಲ್ಲ

ಆದಾಗ್ಯೂ, ಕ್ರಿಸ್ಟಿ ತನ್ನ ಫಾಲೋವರ್ಸ್‌ಗಳಿಗೆ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಈಕೆ ತನ್ನ ಮಲತಂದೆಯ ಜೊತೆಯ ಸಂತೋಷದ ಫೋಟೋಗಳನ್ನು ಅವಳ ತಾಯಿಯೇ ಕ್ಲಿಕ್‌ ಮಾಡಿದ್ದಾಗಿ ಬರೆದುಕೊಂಡಿದ್ದಾಳೆ. ಜನರು ತನ್ನ ತಾಯಿಯ ಭಾವನೆಗಳನ್ನು ಮಾತ್ರ ಮೆಚ್ಚುತ್ತಿದ್ದಾರೆ ಎಂದು ಮಹಿಳೆ ಬರೆದಿದ್ದು, ಅವಳಿಗೆ ತನ್ನದೇ ಆದ ಕೆಲವು ಭಾವನೆಗಳಿವೆ ಎಂದು ಹೇಳಿದ್ದಾಳೆ. ಆದರೆ ಕ್ರಿಸ್ಟಿ ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನ ಮಲತಂದೆಯನ್ನು ಮದುವೆಯಾದ ಸಂಭ್ರಮದಲ್ಲಿದ್ದಾಳೆ.

You may also like

Leave a Comment