Home » California: ಅಮ್ಮ ಬೈದಳೆಂದು ಸಿಟ್ಟು ಮಾಡಿಕೊಂಡ 10 ವರ್ಷದ ಪೋರ ಕಾರು ಡ್ರೈವ್‌ ಮಾಡಿಕೊಂಡು ಹೋದ! ಹೋದದ್ದೆಲ್ಲಿಗೆ ಗೊತ್ತೇ? ಪೊಲೀಸರಿಗೇ ಶಾಕ್‌ ಕೊಟ್ಟ ಬಾಲಕ!!!

California: ಅಮ್ಮ ಬೈದಳೆಂದು ಸಿಟ್ಟು ಮಾಡಿಕೊಂಡ 10 ವರ್ಷದ ಪೋರ ಕಾರು ಡ್ರೈವ್‌ ಮಾಡಿಕೊಂಡು ಹೋದ! ಹೋದದ್ದೆಲ್ಲಿಗೆ ಗೊತ್ತೇ? ಪೊಲೀಸರಿಗೇ ಶಾಕ್‌ ಕೊಟ್ಟ ಬಾಲಕ!!!

by Mallika
1 comment
California

California: 10 ವರ್ಷದ ಬಾಲಕನೋರ್ವ ಸದಾ ಎಲೆಕ್ಟ್ರಾನಿಕ್‌ ಸಾಮಗ್ರಿಗಳೊಂದಿಗೆ ಕಾಲ ಕಳೆಯುತ್ತಿದ್ದ ಕಾರಣದಿಂದ ತಾಯಿಯೊರ್ವಳು ಬೈದಿದ್ದಕ್ಕೆ ಸಿಟ್ಟುಗೊಂಡ ಪುಟ್ಟ ಪೋರ, ತನ್ನ 11 ವರ್ಷದ ಸಹೋದರಿಯೊಂದಿಗೆ 200 ಮೈಲಿ ದೂರ ಕಾರು ಚಾಲನೆ ಮಾಡಿಕೊಂಡು ಹೋಗಿರುವ ಅಚ್ಚರಿಯ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ.

ಈ ಬಾಲಕ ತನ್ನ ಸಹೋದರಿಯೊಂದಿಗೆ ಕ್ಯಾಲಿಪೋರ್ನಿಯಾಗೆ(California) ಹೋಗಲು ಮುಂದಾಗಿದ್ದು, ಹೈವೇಯಲ್ಲಿ ಪೊಲೀಸರು ಇವರ ಕಾರನ್ನು ತಡೆದಿದ್ದಾರೆ.

ತನ್ನ ಮಕ್ಕಳು ಮನೆಯಲ್ಲಿ ಕಾಣದೇ ಇರುವುದನ್ನು ಕಂಡು ಮೊದಲಿಗೆ ತಾಯಿ ನಾಪತ್ತೆಯಾಗಿರುವುದಾಗಿಯೂ, ನಂತರ ಕಾರು ಕಳುವಾಗಿರುವುದರ ಕುರಿತು ದೂರು ದಾಖಲು ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿ ಇದ್ದ ಹೈವೇ ಪೊಲೀಸರು ಕಾರು ನಿಲ್ಲಿಸಲು ಸಿಗ್ನಲ್‌ ಮಾಡಿ ಒಳಗಡೆ ಕಳ್ಳರಿದ್ದಾರೆ ಎಂದು ಭಾವಿಸಿ ಗನ್‌ ಹಿಡಿದು ಸುತ್ತುವರಿದು ನಿಂತಿದ್ದಾರೆ.

ನಂತರ ಚಾಲಕನ ಸೀಟಿನಿಂದ 10 ವರ್ಷದ ಬಾಲಕ ತನ್ನ ಕೈ ಮೇಲೆ ಎತ್ತಿ ಕೆಳಗಿಳಿದಿದ್ದಾನೆ. ಇದನ್ನು ಕಂಡು ಪೊಲೀಸರು ಅಚ್ಚರಿಗೊಂಡಿದ್ದು, ಈತನ 11 ವರ್ಷದ ಸಹೋದರಿಯೂ ಇರುವ ವಿಷಯ ಗೊತ್ತಾಗಿದೆ. ಇದೀಗ ತಾಯಿ ದೂರನ್ನು ಹಿಂಪಡೆದ ಕಾರಣ ಮಕ್ಕಳನ್ನು ವಶಕ್ಕೆ ನೀಡಲಾಗಿದೆ. ಪೊಲೀಸರು ತಾಯಿ ಹಾಗೂ ಮಕ್ಕಳ ಹೆಸರನ್ನು ಗೌಪ್ಯವಾಗಿಟ್ಟಿದ್ದಾರೆ.

ಇದನ್ನೂ ಓದಿ : ಇಂದು ಈ ರಾಶಿಯವರಿಗೆ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತೆ, ಧನಲಾಭದ ಸೂಚನೆ ಇರಲಿದೆ!!!

You may also like

Leave a Comment