Brazil: ಬ್ರೆಜಿಲ್ನಲ್ಲಿ (Brazil)ಬಾಲಕಿಯೊಬ್ಬಳು ಶಾಲಾ ಬಸ್ನಿಂದ(School Bus)ತಲೆ ಹೊರಹಾಕಿ ಸ್ನೇಹಿತರೊಂದಿಗೆ(Friends )ಮಾತನಾಡುತ್ತಿರುವಾಗ ಬಸ್ ಹೊರಟಿದ್ದು, ಆಗ ಅಲ್ಲಿಯೇ ಇದ್ದ ಕಂಬಕ್ಕೆ ತಲೆ ತಗುಲಿ ಬಾಲಕಿ ಸಾವನ್ನಪ್ಪಿದ(Death)ಘಟನೆ ನಡೆದಿದೆ. ಆಗಸ್ಟ್ 16ರಂದು ಬಾಲಕಿ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಬಾಲಕಿಯು ಬಸ್ನ ಕಿಟಕಿಯಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಅದೇ ಸಮಯದಲ್ಲಿ ಬಸ್ ಹೊರಟಿದೆ.
ಪಕ್ಕದಲ್ಲಿ ತುಂಬಾ ವಾಹನಗಳಿದ್ದ ಸಂದರ್ಭ ಡ್ರೈವರ್ ಬಸ್ ಸ್ವಲ್ಪ ಎಡ ಭಾಗಕ್ಕೆ ತೆಗೆದುಕೊಂಡಿದ್ದಾರೆ. ಆಗ ತಲೆ ಹೊರಹಾಕಿದ್ದರಿಂದ ಕಂಬಕ್ಕೆ ಬಾಲಕಿಯ ತಲೆ ಹೊಡೆದಿದ್ದು, ಆಗ ತಕ್ಷಣ ಅಲ್ಲಿದ್ದವರು ಚಾಲಕನಿಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ. ಹೀಗಾಗಿ, ಚಾಲಕ ತಕ್ಷಣ ಬಸ್ ಅನ್ನು ನಿಲ್ಲಿಸಿದ್ದು, ಶಾಲಾ ಆಡಳಿತ ಮಂಡಳಿ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಬಾಲಕಿಯ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಕಿಸದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ
ಇದನ್ನೂ ಓದಿ: ದೇವಸ್ಥಾನಕ್ಕೆ ಗಂಡನನ್ನು ಕರೆದುಕೊಂಡ ಹೋದ ಪತ್ನಿ, ತೋಟಕ್ಕೆ ಹೋಗಿ ಮೋಜು ಮಾಡುವ ಅಂದಳು! ಅಷ್ಟೇ ನಂತರ ಗಂಡ ಏನಾದ?
