British crocodile expert: ಖ್ಯಾತ ಬ್ರಿಟಿಷ್ ವನ್ಯಜೀವಿ ತಜ್ಞ (British crocodile expert)ಆಡಮ್ ಬ್ರಿಟ್ಟೊನ್ ವಿರುದ್ಧ ಸಾಕು ನಾಯಿಗಳ ಮೇಲೆ ಅತ್ಯಾಚಾರವೆಸಗಿದ್ದು ಮಾತ್ರವಲ್ಲದೇ ಅವುಗಳ ಮೇಲೆ ದೌರ್ಜನ್ಯವೆಸಗಿ ಹಿಂಸೆ ನೀಡಿ ಹತ್ಯೆ ಮಾಡಿದ ವಿಕೃತ ಆರೋಪವೊಂದು ಕೇಳಿ ಬಂದಿದೆ.
ಇದು ನಿಜಕ್ಕೂ ಪ್ರಾಣಿ ಪ್ರಿಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಈತ ಮೂಲತಃ ಮೊಸಳೆ ತಜ್ಞನಾಗಿದ್ದು, ಸರ್ ಡೇವಿಡ್ ಆಟೆನ್‌ಬರೋ (Sir David Attenborough) ಎಂಬವರೊಂದಿಗೆ ಕೆಲಸ ಮಾಡಿಕೊಂಡಿದ್ದ. ಬಿಬಿಸಿಯೊಂದಿಗೆ ಕೆಲವೊಂದು ವನ್ಯಜೀವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಹೆಸರಾಂತ ವನ್ಯಜೀವಿ ತಜ್ಞ ಎಂಬ ಖ್ಯಾತಿ ಹೊಂದಿದ್ದ. ಇದೀಗ ಈ ಭೀಭತ್ಸ ಕೃತ್ಯ ತಿಳಿದು ಈತ ಪ್ರಾಣಿ ಪ್ರಿಯ ಅಲ್ಲ, ಪ್ರಾಣಿ ಪೀಡಕ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇದೀಗ ಈತ ತನ್ನ 51ನೇ ವಯಸ್ಸಿನಲ್ಲಿ ಪ್ರಾಣಿಗಳ ಮೇಲೆ ಹಿಂಸಾಚಾರ, ಅತ್ಯಾಚಾರ, ಕೊಲೆ ಚಿತ್ರಹಿಂಸೆಗೆ ಸಂಬಂಧಿಸಿದಂತೆ 60 ಪ್ರಕರಣ ಎದುರಿಸುತ್ತಿದ್ದಾನೆ. ಅಷ್ಟು ಮಾತ್ರವಲ್ಲದೇ ಈತ ಆಸ್ಟ್ರೇಲಿಯಾದ ಉತ್ತರ ಪ್ರದೇಶದ (Northen Terriory) ಸುಪ್ರೀಂಕೋರ್ಟ್ (Supreme Court) ಮುಂದೆ ಈತ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಶ್ವಾನಗಳ ಮೇಲೆ ಅತ್ಯಾಚಾರ ಹಾಗೂ ಮಕ್ಕಳ ಮೇಲೆ ದೌರ್ಜನ್ಯಕ್ಕೆ ಕುರಿತ ವೀಡಿಯೋ ಶೇರ್ ಮಾಡಿದ ಅಪರಾಧ ಈತನ ಮೇಲಿದೆ.
ಈತ ಟೆಲಿಗ್ರಾಮ್‌ನಲ್ಲಿ ಎರಡು ಖಾತೆ ಹೊಂದಿದ್ದು, ಒಂದು ಜನರಿಗೆ ಇನ್ನೊಂದು ಪ್ರಾಣಿಗಳ ಹಿಂಸೆ ನIಡಿದ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದ ಎನ್ನಲಾಗಿದೆ. ಈತ ಮಾಡಿದ ವೀಡಿಯೋ ಪ್ರಾಣಿಗಳ ಕಲ್ಯಾಣ ಸಂಘಟನೆಗೆ ಗಮನಕ್ಕೆ ಬಂದಿದ್ದು, ಅನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Mangaluru ರೈಲು ಹತ್ತುವಾಗ ಕೆಳಗೆ ಬಿದ್ದ ಮಹಿಳೆ! ಮುಂದೇನಾಯ್ತು?
