California: ಮಹಿಳೆಯರೇ ಎಚ್ಚರ (Be Careful)!! ನಿಮಗೂ ಕೂಡ ಅಡಿಗೆ ಮಾಡುವಾಗ ಆಹಾರ ಪದಾರ್ಥ ಬೆಂದಿದೆಯೇ? ರುಚಿ ಉಪ್ಪು ಖಾರ ಸರಿಯಾಗಿದೆಯೇ ಎಂದು ರುಚಿ ನೋಡುವ ಅಭ್ಯಾಸವಿದ್ದರೆ ಮೊದಲು ಈ ವಿಚಾರ ತಿಳಿದುಕೊಳ್ಳಿ!! ಹೀಗೇ ಅರೆಬರೆ ಬೆಂದ ಆಹಾರ ತಿಂದರೆ ಜೀವಕ್ಕೆ ಕುತ್ತು ತರಬಹುದು ಜೋಕೆ!!
ಅಡುಗೆ ಮಾಡುವ ಹೆಣ್ಣು ಮಕ್ಕಳು ಆಹಾರ ಬೇಯುವ ಮೊದಲೇ ರುಚಿ ನೋಡುವುದಕ್ಕಾಗಿ ಬೇಯುತ್ತಿರುವಾಗಲೇ ಒಂದೊಂದೇ ಫೀಸ್‌ನ್ನು ತೆಗೆದು ರುಚಿ ಸರಿ ಇದೆಯೇ ಉಪ್ಪು ಖಾರ ಸರಿ ಇದೆಯೇ ಎಂದು ನೋಡುತ್ತಾರೆ. ಇದು ಹೆಂಗೆಳೆಯರ ಸಹಜ ಪ್ರಕ್ರಿಯೆ. ಆದರೆ ಹೀಗೆ ಮೀನು ಸಾಂಬಾರು ಮಾಡುತ್ತಿದ್ದ 40 ವರ್ಷದ ಮಹಿಳೆಯೊಬ್ಬರು ಹೀಗೆ ಬೇಯುತ್ತಿರುವಾಗಲೇ ಮೀನಿನ ರುಚಿ ನೋಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು ದುರಂತವೆಂದರೆ ಅವರ ಕೈಕಾಲುಗಳು ಕೂಡ ಸ್ವಾಧೀನ ಕಳೆದುಕೊಂಡಿವೆ.
ಕ್ಯಾಲಿಫೋರ್ನಿಯಾದ (California) ಲಾರಾ ಬರಾಜಾಸ್ (Laura Barajas) ಎಂಬಾಕೆ ಮಾರುಕಟ್ಟೆಯಿಂದ ತಾವೇ ಮೀನು ತಂದು ಅದನ್ನು ಅರೆಬರೆ ಬೇಯಿಸಿ ತಿಂದಿದ್ದು, ಇದರ ಪರಿಣಾಮ ಜೀವನ್ಮರಣದ ನಡುವೆ ಹೋರಾಡುವ ಪರಿಸ್ಥಿತಿ ಬಂದಿದೆಯಂತೆ. ಜುಲೈನಲ್ಲಿ ಸ್ಯಾನ್ ಜೋಸ್‌ನ ಸ್ಥಳೀಯ ಮಾರುಕಟ್ಟೆಯಲ್ಲಿ ಟಿಲಾಪಿಯಾ ಮೀನುಗಳನ್ನು ಖರೀದಿ ಮಾಡಿದ್ದರಂತೆ.ಮೀನು ಖರೀದಿಸಿ ಮನೆಗೆ ತಂದು ಮೀನನ್ನು ಅರೆಬರೆ ಬೇಯಿಸಿ ತಿಂದ ಪರಿಣಾಮ ಅದರಲ್ಲಿದ್ದ ವಿಷಕಾರಿ ಬ್ಯಾಕ್ಟಿರೀಯಾದಿಂದ ಲಾರಾ ಸೋಂಕಿತಳಾಗಿದ್ದು (bacterial infection) ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಡುತ್ತಿದ್ದಾರೆ.
ಕಳೆದ ಎರಡು ತಿಂಗಳುಗಳ ಕಾಲ ಈ ಮೀನಿನ ವಿಷಕಾರಿ ಬ್ಯಾಕ್ಟಿರೀಯಾದಿಂದ ಸೋಂಕಿಗೊಳಗಾದ ಲಾರಾ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದು, ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಈ ಮೀನಿನ ಸೇವನೆಯಿಂದ ಉಂಟಾದ ಸೋಂಕಿನ ಬಳಿಕ ಆಕೆಯ ಬೆರಳುಗಳು, ಪಾದಗಳು, ತುಟಿ, ಸಂಪೂರ್ಣ ಸೋಂಕಿಗೆ ಒಳಗಾಗಿದ್ದು, ಕಪ್ಪು ಬಣ್ಣಕ್ಕೆ ತಿರುಗಿದೆ ಎನ್ನಲಾಗಿದೆ ಆಕೆಯ ಮೂತ್ರಪಿಂಡಗಳು ವೈಫಲ್ಯಕ್ಕೊಳಗಾಗಿವೆ ಎನ್ನಲಾಗಿದೆ.
ವೈಬ್ರಿಯೊ ವಲ್ನಿಫಿಕಸ್ (vibrio vulnificus) ಎಂಬ ಬ್ಯಾಕ್ಟಿರೀಯಾದಿಂದ ಈ ಸೋಂಕು ಉಂಟಾಗಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಕಲುಷಿತ ನೀರಿನ ಸೇವನೆ ಅಥವಾ ಈ ಬ್ಯಾಕ್ಟಿರೀಯಾ ವಾಸಿಸುವ ನೀರಿನಲ್ಲಿ ಟ್ಯಾಟೂ ಹಾಕಿದ ಇಲ್ಲವೇ ಗಾಯಗಳಿರುವ ದೇಹದ ಭಾಗವನ್ನು ತೊಳೆಯುವ ಕಾರಣದಿಂದ ಕೂಡ ಬ್ಯಾಕ್ಟಿರೀಯಾ ದೇಹ ಸೇರಬಹುದೆಂದು ಈ ಸೋಂಕಿಗೆ ಸಂಬಂಧಿಸಿದ ತಜ್ಞ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಗಮನಿಸಿ, ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ! ಪೋಷಕರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಗೈಡ್‌ಲೈನ್ಸ್ ಬಿಡುಗಡೆ!!!
