Home » Israel Palestine war: ಗಾಜಾಪಟ್ಟಿಗೆ ನುಗ್ಗಿದ ಇಸ್ರೇಲ್ ಸೇನೆಯ ಟ್ಯಾಂಕರ್ ಗಳು, ಹಮಾಸ್ ಉಗ್ರರ ಹುಡುಕಿ-ಜಾಲಾಡಿ ದಾಳಿ!

Israel Palestine war: ಗಾಜಾಪಟ್ಟಿಗೆ ನುಗ್ಗಿದ ಇಸ್ರೇಲ್ ಸೇನೆಯ ಟ್ಯಾಂಕರ್ ಗಳು, ಹಮಾಸ್ ಉಗ್ರರ ಹುಡುಕಿ-ಜಾಲಾಡಿ ದಾಳಿ!

by ಹೊಸಕನ್ನಡ
2 comments
Israel Palestine war

Israel Palestine war: ಪ್ಯಾಲೆಸ್ಟೈನ್ ನ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ನಿಜವಾದ ಯುದ್ದ (Israel Palestine war) ಆರಂಭಿಸಿದೆ. ಈಗ ಆರಂಭಿಸಿರುವ ಯುದ್ಧ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಇಸ್ರೇಲ್ ನ ಭೂದಳ ಇದೀಗ ಗಾಜಾಪಟ್ಟಿಗೆ ನುಗ್ಗಿದೆ.

ಈ ಬಗ್ಗೆ ಸ್ವತಃ ಇಸ್ರೇಲ್ ಸೇನೆ ಮಾಹಿತಿ ನೀಡಿದ್ದು, ಗಾಜಾ(Gaza)ದಲ್ಲಿ ತನ್ನ ಸೇನೆ ನುಗ್ಗಿದೆ. ಪ್ಯಾಲೆಸ್ಟೈನ್ ಹಮಾಸ್ ಉಗ್ರರ ವಿರುದ್ಧ ತನ್ನ ಟ್ಯಾಂಕರ್ ಗಳ ಮೂಲಕ ದಾಳಿ ನಡೆಸುತ್ತಿದ್ದು, ಹಮಾಸ್ ಉಗ್ರರನ್ನು ಹುಡುಕಿ ಹುಡುಕಿ ದಾಳಿ ನಡೆಸುತ್ತಿದೆ ಎಂದು ಅದು ತಿಳಿಸಿದೆ.

“ಕಳೆದ 24 ಗಂಟೆಗಳಲ್ಲಿ, ಇಸ್ರೇಲಿ ಮಿಲಿಟರಿ (IDF) ಪಡೆಗಳು ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳ ಪ್ರದೇಶವನ್ನು ಶುದ್ಧೀಕರಿಸುವ ಪ್ರಯತ್ನ ಪೂರ್ಣ ಮಾಡಲು ಗಾಜಾ ಪಟ್ಟಿಯ ಪ್ರದೇಶದೊಳಗೆ ಸ್ಥಳೀಯವೆನಿಸಿದ ದಾಳಿಗಳನ್ನು ನಡೆಸಿತು” ಎಂದು ಸೇನೆಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಅಲ್ಲದೆ, ಸೇನೆ ನಡೆಸಿದ ಕಾರ್ಯಾಚರಣೆಗಳ ಸಮಯದಲ್ಲಿ, ಇಸ್ರೇಲ್ ನಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನವೂ ಇತ್ತು. ಜತೆಗೆ ಹಮಾಸ್ ಉಗ್ರಗಾಮಿಗಳೊಂದಿಗೆ ಹೋರಾಡಲು, ಅವರ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಮತ್ತು ನಾಪತ್ತೆಯಾದ ಒತ್ತೆಯಾಳುಗಳ ಬಗ್ಗೆ ಸಾಕ್ಷಿ ಹುಡುಕಲು ಗಾಜಾವನ್ನು ನಾವು ಗಾಜಾವನ್ನು ಪ್ರವೇಶಿಸಿದ್ದೇವೆ’ ಎಂದು ಸೇನೆ ಹೇಳಿದೆ.

ಹಮಾಸ್ ಉಗ್ರಗಾಮಿಗಳು ಸಮುದಾಯ ದಾಳಿಯಲ್ಲಿ ಈಗಾಗಲೇ 1,300 ಕ್ಕೂ ಹೆಚ್ಚು ಜನರನ್ನು ಕೊಂದಿದ್ದು, ಅವರಲ್ಲಿ ಹೆಚ್ಚಿನವರು ನಾಗರಿಕರು. ಉಗ್ರರು ಅಂದಾಜು 150 ಇಸ್ರೇಲಿಗಳು ಮತ್ತು ವಿದೇಶಿಯರನ್ನು ಅಪಹರಿಸಿದ್ದಾರೆ. ಇಸ್ರೇಲಿ ಸೇನೆಯು ಹೆಚ್ಚಿನ ವಿವರಗಳನ್ನು ನೀಡದೆ, ಗಾಜಾದ ಮೇಲಿನ ದಾಳಿಯ ಸಮಯದಲ್ಲಿ ಪಡೆಗಳು “ಒತ್ತೆಯಾಳುಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಸಹಾಯ ಮಾಡುವ ಪುರಾವೆಗಳನ್ನು ಸಂಗ್ರಹಿಸಿದೆ” ಎಂದು ಹೇಳಿ ಕಾರ್ಯೋನ್ಮುಖವಾಗಿದೆ.

ಏತನ್ಮಧ್ಯೆ, ಗಾಜಾ ನಗರದಿಂದ ಪಲಾಯನ ಮಾಡುತ್ತಿರುವ ಬೆಂಗಾವಲು ಪಡೆಗಳ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 70 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿರುವ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಅಧಿಕಾರಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: Uttar Pradesh: ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ್ಲು ನಾಪತ್ತೆಯಾದ ಹುಡುಗಿ – ಬಾಯಿಗೆ ಕೆಸರು ತುಂಬಿ, ಕಣ್ಣಿಗೆ ಕಬ್ಬಿನಿಂದ ಚುಚ್ಚಿ ಬರ್ಬರವಾಗಿ ಕೊಂದ ಪಾಪಿಗಳು

You may also like

Leave a Comment