Love Story: ಪ್ರೀತಿಗೆ ಕಣ್ಣಿಲ್ಲ ಅನ್ನೋದು ಸತ್ಯ ಘಟನೆಯೊಂದಿಗೆ ಮತ್ತೆ ಮತ್ತೆ ಸಾಬೀತು ಆಗುತ್ತಿದೆ. ಜಾತಿ, ಬಣ್ಣ, ಭಾಷೆ, ದೇಶ, ವಯಸ್ಸು ಇದು ಯಾವುದರ ಬೇಧವಿಲ್ಲದೆ ಹುಟ್ಟಿಕೊಳ್ಳುವುದೇ ಪ್ರೀತಿ. ಪ್ರೀತಿಗಾಗಿ ಪ್ರೇಮಿಗಳು ದೇಶ ಬಿಟ್ಟು ಹೋದ ಘಟನೆಗಳು ಎಷ್ಟೋ ಇವೆ. ಅಂತೆಯೇ ಇಂಥಹದ್ದೇ ಇನ್ನೊಂದು ಘಟನೆ (Love Story) ಬೆಳಕಿಗೆ ಬಂದಿದೆ. ಇದು ಮತ್ತಷ್ಟು ಭಿನ್ನವಾಗಿದೆ. ಇಲ್ಲಿ ದೇಶ ಒಂದೇ ಅಲ್ಲ ವಯಸ್ಸು ಕೂಡ ಪ್ರೀತಿ ಮುಂದೆ ಸೋತಿದೆ ಅಂದ್ರೆ ನೀವು ನಂಬಲೇ ಬೇಕು.
ಹೌದು, ಪಾಕಿಸ್ತಾನದ ವ್ಯಕ್ತಿಯೊಬ್ಬ ಕೆನಡಾ ಮಹಿಳೆ ಪ್ರೀತಿಗೆ ಬಿದ್ದಿದ್ದಲ್ಲದೆ ಆಕೆಯನ್ನು ಮದುವೆಯಾಗಿದ್ದಾನೆ. ಇಬ್ಬರ ಮಧ್ಯೆ ಇರುವ ವಯಸ್ಸಿನ ಅಂತರ ಕೇಳಿದರೆ ಶಾಕ್ ಆಗ್ತೀರಾ. 32 ವರ್ಷದ ಪಾಕಿಸ್ತಾನಿ ವ್ಯಕ್ತಿ 70 ವರ್ಷದ ಕೆನಡಾ ಮಹಿಳೆ ಕೈ ಹಿಡಿದಿದ್ದಾನೆ.
ಪಾಕಿಸ್ತಾನಿ ಮಾಧ್ಯಮಗಳ ವರದಿ ಪ್ರಕಾರ ಈ ಪಾಕಿಸ್ತಾನಿ (Pakistani) ಪ್ರೇಮಿ ಹೆಸರು ನಹೀಮ್. ಈತ ತನಗಿಂತ 35 ವರ್ಷ ಹಿರಿಯ ಮಹಿಳೆ ಕೈ ಹಿಡಿದಿರುವ ಬಗ್ಗೆ ಅನೇಕರು ಕೆಟ್ಟ ದೃಷ್ಟಿ ಯಲ್ಲಿ ಮಾತನಾಡ್ತಿದ್ದಾರೆ. ಪ್ರೀತಿ (Love)ಗಾಗಿ ಆತ 70 ವರ್ಷದ ಮಹಿಳೆ ಮದುವೆಯಾಗಿಲ್ಲ. ಇದ್ರ ಹಿಂದೆ ಬೇರೆ ಉದ್ದೇಶವಿದೆ ಎಂದು ಜನರು ಹೇಳುತ್ತಿದ್ದಾರೆ . ನಹೀಮ್ ನನ್ನು ಜನರು ಗೋಲ್ಡ್ ಡಿಗ್ಗರ್ ಎಂದು ಕೂಡ ಕರೆಯುತ್ತಿದ್ದಾರೆ.
ಮೂಲತಃ ನಹೀಮ್ ಮತ್ತು ಅಜ್ಜಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿ ಸ್ನೇಹ ಬೆಳೆದು, ಸ್ನೇಹ ಪ್ರೀತಿಯಾಗಿ ಚಿಗುರಿದೆ. ಈ ಕುರಿತು ಸದ್ಯ ವೆಬ್ಸೈಟ್ ಒಂದರ ಜೊತೆ ಮಾತನಾಡಿದ ನಹೀಮ್, ಜನರು ಮಾಡುತ್ತಿರುವ ಕೆಟ್ಟ ಆರೋಪವನ್ನು ತಳ್ಳಿ ಹಾಕಿದ್ದಾನೆ.
ಅಷ್ಟೇ ಅಲ್ಲದೆ 70ನೇ ವಯಸ್ಸಿನಲ್ಲಿ ಪರದೇಶದ, ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿರುವ ವ್ಯಕ್ತಿ ಜೊತೆ ಮದುವೆಯಾಗಲು ವಧು, ಕೆನಡಾದಿಂದ ಪಾಕಿಸ್ತಾನಕ್ಕೆ ಬಂದಿದ್ದಳು.
ನಹೀಮ್ ಪ್ರಕಾರ, ಪತ್ನಿ ಜೊತೆ ಕೆನಡಾದಲ್ಲಿ ವಾಸಿಸುವ ಪ್ಲಾನ್ ನಲ್ಲಿ ಇದ್ದಾನೆ. ಪತ್ನಿಗೆ ಅನಾರೋಗ್ಯವಿರುವ ಕಾರಣ ಆಕೆ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇಬ್ಬರು ಸೇರಿ ಯುಟ್ಯೂಬ್ ಚಾನೆಲ್ ಶುರು ಮಾಡಿ, ಅದ್ರ ಮೂಲಕ ಹಣ ಗಳಿಸುವ ಪ್ಲಾನ್ ಮಾಡಿದ್ದು, ನಾನು ಗೋಲ್ಡ್ ಡಿಗ್ಗರ್ ಅಲ್ಲ ಎಂದು ನಹೀಮ್ ಹೇಳಿದ್ದಾನೆ. ಅಲ್ಲದೇ ಕೆನಡಾ ಮಹಿಳೆ ಹಣ ನೋಡಿ ನಾನು ಮದುವೆಯಾಗಿಲ್ಲ. ಆಕೆ ಶ್ರೀಮಂತೆಯಲ್ಲ. ಆಕೆಗೆ ಬರುವ ಪಿಂಚಣಿಯಲ್ಲಿ ಆಕೆ ಜೀವನ ನಡೆಸುತ್ತಿದ್ದಳು, ಆದರೆ ಇನ್ನು ಮುಂದೆ ಆಕೆಯ ಜವಾಬ್ದಾರಿ ನನ್ನದು ಎಂದು ನಹೀಮ್ ಹೇಳಿದ್ದಾನೆ.
ಇದನ್ನೂ ಓದಿ : ಯಬ್ಬೋ.. ಈತ ಹಗಲು ವಿದೇಶದಲ್ಲಿ ತಿಂದುಂಡು, ರಾತ್ರಿ ಮಲಗಲು ಬರೋದು ಭಾರತಕ್ಕಂತೆ !! ಇದೇನಿದು ಆಶ್ಚರ್ಯ ?!
