Home » Bedbug at UK Hotel: ದಿನಕ್ಕೆ ಬಾಡಿಗೆ 17ಸಾವಿರ ನೀಡಿ ಹೋಟೆಲ್‌ ರೂಂನಲ್ಲಿ ಮಲಗಿದ್ದ ಮಹಿಳೆಗೆ ರಾತ್ರಿಯಿಡೀ 200ಕ್ಕೂ ಹೆಚ್ಚು ತಿಗಣೆ ಕಡಿತ!!!

Bedbug at UK Hotel: ದಿನಕ್ಕೆ ಬಾಡಿಗೆ 17ಸಾವಿರ ನೀಡಿ ಹೋಟೆಲ್‌ ರೂಂನಲ್ಲಿ ಮಲಗಿದ್ದ ಮಹಿಳೆಗೆ ರಾತ್ರಿಯಿಡೀ 200ಕ್ಕೂ ಹೆಚ್ಚು ತಿಗಣೆ ಕಡಿತ!!!

by Mallika
1 comment
Bedbug at UK Hotel

Bedbug at UK Hotel: ಶರೋನ್ ಹಸ್ಲಾಮ್ ಎಂಬ 65 ವರ್ಷದ ಮಹಿಳೆ ತನ್ನ ಮೇಲೆ ಬೆಡ್‌ಬಗ್‌ಗಳು ಹೇಗೆ ದಾಳಿ ಮಾಡಿದೆ ಎಂಬುವುದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಡ್‌ಬಗ್‌ಗಳು ಅವರ ಕೈಗಳು, ಕಾಲುಗಳು ಮತ್ತು ಅವರ ದೇಹದ ಇತರ ಅನೇಕ ಭಾಗಗಳಿಗೆ ಕೆಟ್ಟದಾಗಿ ಕಚ್ಚಿರುವ ಫೋಟೋವೊಂದು ವೈರಲ್‌ ಆಗಿದೆ. ಈ ಮಹಿಳೆ ಕಳೆದ ತಿಂಗಳು ಬ್ಲ್ಯಾಕ್‌ಪೂಲ್‌ನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದು, ಅಲ್ಲಿ ಬೆಡ್‌ಬಗ್‌ಗಳು ರಕ್ತವನ್ನು ಹೀರಿರುವ ಘಟನೆಯೊಂದು ನಡೆದಿದೆ.

ಕಳೆದ ತಿಂಗಳು ಶರೋನ್ ಎಂಬ ಮಹಿಳೆ ಬ್ಲ್ಯಾಕ್‌ಪೂಲ್‌ನಲ್ಲಿ ಹೋಟೆಲ್ ಬುಕ್ ಮಾಡಿದ್ದಳು. 17 ಸಾವಿರ ಬಾಡಿಗೆ ಕೊಟ್ಟು ಕೊಠಡಿ ಪಡೆದಿದ್ದರು. ಆದರೆ ಮರುದಿನ ಬೆಳಿಗ್ಗೆ ಎದ್ದಾಗ ಆಕೆಯ ದೇಹದ ಮೇಲೆ ಗಾಢವಾದ ಕೆಂಪು ದದ್ದುಗಳಿದ್ದವು. ಅಲ್ಲದೆ, ಅನೇಕ ಬೆಡ್‌ಬಗ್‌ಗಳು( Bedbug at UK Hotel)ಬೆಡ್‌ ಮೇಲೆ ಹರಿದಾಡುತ್ತಿದ್ದವು. ಇದನ್ನು ನೋಡಿದ ನಂತರ ಇಬ್ಬರಿಗೂ ಪ್ರಜ್ಞೆ ತಪ್ಪೋದೇ ಒಂದು ಬಾಕಿ. ಬೆಡ್‌ಬಗ್‌ಗಳು ರಾತ್ರಿಯಿಡೀ ಆಕೆಯ ರಕ್ತವನ್ನು ಹೀರಿದ್ದವು.

ಈ ಘಟನೆಯ ನಂತರ ಹೋಟೆಲ್ ನವರು ಪರಿಹಾರ ನೀಡಿದ್ದರು. ಈ ಘಟನೆಯ ನಂತರ ಸಂತ್ರಸ್ತೆಯ ಮನಸ್ಸಿನಲ್ಲಿ ಅಗಾಧವಾದ ಭಯ ಆವರಿಸಿಕೊಂಡಿದೆ ಎಂಬ ಮಾತನ್ನು ಹೇಳಿಕೊಂಡಿದ್ದಾಳೆ. ಮೊದಲು ರೂಮಿನ ಲೈಟ್ ಆಫ್ ಮಾಡಿ ಮಲಗುತ್ತಿದ್ದಳು. ಆದರೆ ಈಗ ಅವಳು ರಾತ್ರಿಯಲ್ಲಿ ಹಲವಾರು ಬಾರಿ ದೀಪಗಳನ್ನು ಆನ್ ಮಾಡುತ್ತಾಳೆ ಮತ್ತು ಹಾಸಿಗೆಯೊಳಗೆ ಬೆಡ್‌ಬಗ್‌ಗಳನ್ನು ಹುಡುಕುತ್ತಾಳೆ ಎಂಬ ಮಾಹಿತಿಯನ್ನು ಆಕೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: Love Relationship: ಪ್ರೇಮ ಸಂಬಂಧದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ‘ರೇಪ್‌ʼ ಎಂದು ಆಗಲ್ಲ: ಕೋರ್ಟ್‌ನಿಂದ ಮಹತ್ವದ ತೀರ್ಪು!!!

You may also like

Leave a Comment