BEML Jobs 2023 : ಭಾರತ್ ಅರ್ಥ್ ಮೂವರ್ಸ್(BEML JObs 2023) ಲಿಮಿಟೆಡ್ ಬೆಂಗಳೂರು ಕಚೇರಿಯು (bharat earth movers limited bengaluru jobs 2023)ವಿವಿಧ 101 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಹುದ್ದೆಯ ಮಾಹಿತಿ ಅರಿತು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಹುದ್ದೆಯ ವಿವರ:
ನೇಮಕಾತಿ ಪ್ರಾಧಿಕಾರ : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್(BEML JObs 2023)
ಹುದ್ದೆಗಳ ಸಂಖ್ಯೆ : 101
ಹುದ್ದೆಗಳು:
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಆಪರೇಷನ್ಸ್ ಎಕ್ಸಲೆನ್ಸ್): 01
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಸ್ಟ್ರಾಟೆಜಿ / ಅಲಾಯನ್ಸ್ ಮ್ಯಾನೇಜ್ಮೆಂಟ್) : 01
ಎಕ್ಸಿಕ್ಯೂಟಿವ್ ಡೈರೆಕ್ಟರ್ (ಎಂಜಿನ್ಸ್) : 01
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಆರ್ ಅಂಡ್ ಡಿ: 02
ಅಸಿಸ್ಟಂಟ್ ಮ್ಯಾನೇಜರ್ – ಆರ್ ಅಂಡ್ ಡಿ : 31
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್- ಮಾರ್ಕೆಟಿಂಗ್ : 03
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್- ಪ್ಲಾನಿಂಗ್ : 01
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ – ಕ್ವಾಲಿಟಿ ಇಂಜಿನಿಯರಿಂಗ್ : 01
ಸೀನಿಯರ್ ಮ್ಯಾನೇಜರ್ – ಪ್ರೊಡಕ್ಷನ್ ಕಂಟ್ರೋಲ್ : 01
ಅಸಿಸ್ಟಂಟ್ ಮ್ಯಾನೇಜರ್ – ಪ್ರೊಡಕ್ಷನ್ ಕಂಟ್ರೋಲ್ : 01
ಆಫೀಸರ್ ಪ್ರೊಡಕ್ಷನ್ / ಪ್ಲಾನಿಂಗ್ / ಪ್ರೊಡಕ್ಷನ್ ಕಂಟ್ರೋಲ್ : 04
ಆಫೀಸರ್ ಪ್ರೊಡಕ್ಷನ್ : 01
ಆಫೀಸರ್ ಕ್ವಾಲಿಟಿ (ಮೆಕ್ಯಾನಿಕಲ್) : 02
ಆಫೀಸರ್ – ಕ್ವಾಲಿಟಿ ( ಇಲೆಕ್ಟ್ರಿಕಲ್ ) : 01
ಬಿಇಎಂಎಲ್ ಹುದ್ದೆಗಳಿಗೆ 03-11-2023 ರಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 06-11-2023 ಆರಂಭಿಕ ದಿನವಾಗಿದ್ದು, 20-11-2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ / EWS / ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.500 ಆಗಿದೆ .
ಅರ್ಹತಾ ಮಾನದಂಡಗಳು:
ಮೇಲೆ ತಿಳಿಸಿದ ಹುದ್ದೆಗಳಿಗೆ ವಿವಿಧ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರಬೇಕು. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 45 ವರ್ಷವಾಗಿದೆ. ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ ಹುದ್ದೆಗೆ 45 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷವಾಗಿದ್ದು, ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ ಹುದ್ದೆಗೆ 42 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಸೀನಿಯರ್ ಮ್ಯಾನೇಜರ್ ಹುದ್ದೆಗೆ 39 ವರ್ಷ, ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ 30 ವರ್ಷ, ಇತರೆ ಹುದ್ದೆಗಳಿಗೆ 27 ವರ್ಷ ಗರಿಷ್ಠ ಮಿತಿ ನಿಗದಿ ಮಾಡಲಾಗಿದೆ. ಮೇಲೆ ತಿಳಿಸಿದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ Rs.60000-300000 ವರೆಗೆ. ಇರಲಿದೆ.
