Home » BookMyShow Hiring: ನೀವು ಡಿಗ್ರಿ ಪಾಸಾಗಿದ್ರೆ ಬುಕ್‌ ಮೈ ಶೋ ನಲ್ಲಿ ನಿಮಗೆ ಕೆಲಸ ಇದೆ | ಹೆಚ್ಚಿನ ವಿವರ ಇಲ್ಲಿದೆ

BookMyShow Hiring: ನೀವು ಡಿಗ್ರಿ ಪಾಸಾಗಿದ್ರೆ ಬುಕ್‌ ಮೈ ಶೋ ನಲ್ಲಿ ನಿಮಗೆ ಕೆಲಸ ಇದೆ | ಹೆಚ್ಚಿನ ವಿವರ ಇಲ್ಲಿದೆ

by Mallika
0 comments

BookMyShow Recruitment 2023: ಬುಕ್​ ಮೈ ಶೋ(BookMyShow) ನಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದವರಿಗೆ ಇಲ್ಲೊಂದು ಒಳ್ಳೆಯ ಅವಕಾಶವಿದೆ. ಖಾಲಿ ಇರುವ ಟ್ರೈನಿ ಇಂಟರ್ನ್​ಶಿಪ್(Trainee Internship) ಹುದ್ದೆಗಳನ್ನು ಭರ್ತಿ ಮಾಡಲು ಬುಕ್​ ಮೈ ಶೋ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾದ ಮಾಹಿತಿ ಇಲ್ಲಿದೆ.

ಈ ಹುದ್ದೆಗಳಿಗೆ ಪದವೀಧರರು(Degree Holders) ಅರ್ಜಿ ಹಾಕಬಹುದು. ಆಸಕ್ತರು ಕೂಡಲೇ ಅರ್ಜಿ ಹಾಕಬಹುದು. ಈ ಅವಕಾಶ ನಿಮ್ಮದಾಗಿಸಿಕೊಳ್ಳಬಹುದು.

ಸಂಸ್ಥೆ : ಬುಕ್​ ಮೈ ಶೋ
ಹುದ್ದೆ : ಟ್ರೈನಿ ಇಂಟರ್ನ್​ಶಿಪ್
ವಿದ್ಯಾರ್ಹತೆ : ಪದವಿ
ಉದ್ಯೋಗದ ಸ್ಥಳ : ಮುಂಬೈ
ಅನುಭವ : ಫ್ರೆಶರ್​

ಈ ಹುದ್ದೆಗಳಿಗೆ ಕಂಪನಿಯು ಅಭ್ಯರ್ಥಿಗಳಿಗೆ ಯಾವುದೇ ಅನುಭವವನ್ನು ಕೇಳಿಲ್ಲ. ಹಾಗಾಗಿ ಇಲ್ಲಿ ಫ್ರೆಶರ್ಸ್​ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಹೀಗಾಗಿ ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. 6 ತಿಂಗಳು ಇಂಟರ್ನ್​ಶಿಪ್ ಅವಧಿ ಇರುತ್ತದೆ. ಟ್ರೈನಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮುಂಬೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಬುಕ್​ ಮೈ ಶೋ ಕಂಪನಿಯು ನಿಯಮಾನುಸಾರ ಅಭ್ಯರ್ಥಿಗಳಿಗೆ ವೇತನ ನೀಡುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಯಾವಾಗ ಎಂದು ತಿಳಿಸಲಾಗಿಲ್ಲ. ಹಾಗಾಗಿ ಅಭ್ಯರ್ಥಿಗಳು ಹೆಚ್ಚಿನ ಸಮಯ ಕಳೆಯದೆ ಇದರ ಬಗ್ಗೆ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

You may also like

Leave a Comment