ಕೇಂದ್ರ ಸರ್ಕಾರ ದೀಪಾವಳಿಗೂ ಮುನ್ನವೆ ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ನೀಡಲು ಅಣಿಯಾಗುತ್ತಿದೆ. ಕೇಂದ್ರ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನಂತೆ ದೀಪಾವಳಿಯಂದು ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಈಗಾಗಲೇ ಕೇಂದ್ರ ನೌಕರರಿಗೆ ಬೋನಸ್ ಘೋಷಣೆ ಮಾಡಿದ್ದು, ಹಣಕಾಸು ಸಚಿವಾಲಯದ ಪ್ರಕಾರ, ಈ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನ ಸರಾಸರಿ ಶೇಕಡಾ 12ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.
ಬಹುನಿರೀಕ್ಷಿತ ಶೇ.4ರಷ್ಟು ವೇತನ ಹೆಚ್ಚಳವಾದ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಇನ್ನಷ್ಟು ಸಿಹಿಸುದ್ದಿಗಳು ಬರುತ್ತಿವೆ. 7ನೇ ವೇತನದ ನಂತ್ರ 6ನೇ ಮತ್ತು 5ನೇ ವೇತನ ಆಯೋಗದ ಅಡಿಯಲ್ಲಿ ಬರುವ ಉದ್ಯೋಗಿಗಳ ಡಿಎ ಹೆಚ್ಚಿಸಲಾಗಿದೆ.
ವರದಿಗಳ ಪ್ರಕಾರ, 6ನೇ ವೇತನ ಮತ್ತು 5ನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಿಸಲಾಗಿದೆ. ಕೇಂದ್ರವು 5ನೇ ವೇತನದಡಿ ಉದ್ಯೋಗಿಗಳ ಡಿಎಯನ್ನು ಈಗಿರುವ ಶೇಕಡಾ 381 ರಿಂದ ಶೇಕಡಾ 396 ಕ್ಕೆ ಹೆಚ್ಚಿಸಿದ್ದು, ಹೊಸ ಡಿಎ ದರವು ಜುಲೈ 1, 2022 ರಿಂದ ಜಾರಿಗೆ ಬರಲಿದೆ ಎಂದು ವೆಚ್ಚ ಇಲಾಖೆಯ ಅಧಿಕೃತ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.
7ನೇ ವೇತನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಿದ ನಂತರ 6 ಮತ್ತು 5ನೇ ವೇತನ ಆಯೋಗದಡಿ ಉದ್ಯೋಗಿಗಳಿಗೆ ಡಿಎ ಹೆಚ್ಚಳ ಮಾಡಲಾಗಿದೆ .ಕೇಂದ್ರವು 6 ನೇ ವೇತನದಡಿ ಉದ್ಯೋಗಿಗಳ ಡಿಎಯನ್ನು ಹಿಂದಿನ ಶೇಕಡಾ 203 ರಿಂದ ಮೂಲ ವೇತನದ ಶೇಕಡಾ 212 ಕ್ಕೆ ಹೆಚ್ಚಿಸಿದೆ.
ವರದಿಗಳ ಪರಿಷ್ಕೃತ ಡಿಎ ದರವು ಜುಲೈ 1, 2022 ರಿಂದ ಜಾರಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು ಶೇಕಡಾ 34 ರಿಂದ ಶೇಕಡಾ 38ಕ್ಕೆ ಹೆಚ್ಚಿಸಲಾಗಿದೆ.
ಕೇಂದ್ರವು ಸೆಪ್ಟೆಂಬರ್ 28, 2022 ರಂದು ಶೇಕಡಾ 4ರಷ್ಟು ಡಿಎ ಹೆಚ್ಚಳವನ್ನ ಘೋಷಿಸಿದೆ. ಇತ್ತೀಚಿನ ಡಿಎ ಹೆಚ್ಚಳದ ನಂತರ ಎಷ್ಟು ಸಂಬಳ ಹೆಚ್ಚಾಗುತ್ತದೆ ಎಂದು ಗಮನಿಸುವುದಾದರೆ:
ಡಿಎಯನ್ನು ಮೂಲ ವೇತನದ ಮೇಲೆ ಲೆಕ್ಕಹಾಕಲಾಗುತ್ತದೆ. ಆದ್ದರಿಂದ, ಉದ್ಯೋಗಿಯ ಮೂಲ ವೇತನವು ತಿಂಗಳಿಗೆ 43,000 ರೂ.ಗಳಾಗಿದ್ದರೆ, ಉದ್ಯೋಗಿಯು 6 ನೇ ವೇತನ ಆಯೋಗದ ಪ್ರಕಾರ ಸಂಬಳವನ್ನು ಪಡೆಯುತ್ತಾರೆ.
ಡಿಎ ಹೆಚ್ಚಳದಿಂದ, ಕೇಂದ್ರವು ಡಿಎಯನ್ನು ಶೇಕಡಾ 212 ಕ್ಕೆ ಹೆಚ್ಚಿಸಿದ ನಂತರ ಉದ್ಯೋಗಿಗಳು ಶೇಕಡಾ 4ರಷ್ಟು ಡಿಎ ಹೆಚ್ಚಳವನ್ನ ಪಡೆಯುತ್ತಾರೆ, ಅಂದರೆ ಉದ್ಯೋಗಿಯು 3,870 ರೂಪಾಯಿ ಪಡೆಯುತ್ತಾರೆ.
ಅಕ್ಟೋಬರ್ 12ರಂದು ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (DOE) ಇದನ್ನು ಮರುಗ್ರೇಡೀಕರಿಸುವ ನಿರ್ಧಾರವನ್ನ ತೆಗೆದುಕೊಂಡಿದ್ದು , ಅಧಿಕೃತ ಜ್ಞಾಪಕ ಪತ್ರವಾಗಿ, 6ನೇ ವೇತನ ಆಯೋಗದ ಅಡಿಯಲ್ಲಿ ವೇತನವನ್ನ ಹಿಂತೆಗೆದುಕೊಳ್ಳುವ ಸರ್ಕಾರಿ ನೌಕರರು ಮತ್ತು ಸ್ವಾಯತ್ತ ಸಂಸ್ಥೆಗಳ ಡಿಎಯನ್ನ ಕೇಂದ್ರವು ಹೆಚ್ಚಿಸಿದೆ.
ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಮುನ್ನವೇ ಸರ್ಕಾರಿ ನೌಕರರಿಗೆ ದೀಪಾವಳಿ ಪ್ರಯುಕ್ತ ವಿಶೇಷವಾಗಿ ಗಿಫ್ಟ್ ನೀಡಲು ಮುಂದಾಗಿದ್ದು, ನೌಕರರಿಗೆ ಇದರಿಂದ ಎಷ್ಟು ಪ್ರಯೋಜನವಾಗಲಿದೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
