Home » SECL Recruitment: ಇಂಜಿನಿಯರಿಂಗ್ ಪದವೀಧರರೇ ನಿಮಗಿದೋ ಭರ್ಜರಿ ಉದ್ಯೋಗಾವಕಾಶ: ಇಲ್ಲಿ ಅರ್ಜಿ ಸಲ್ಲಿಸಿ l

SECL Recruitment: ಇಂಜಿನಿಯರಿಂಗ್ ಪದವೀಧರರೇ ನಿಮಗಿದೋ ಭರ್ಜರಿ ಉದ್ಯೋಗಾವಕಾಶ: ಇಲ್ಲಿ ಅರ್ಜಿ ಸಲ್ಲಿಸಿ l

by Mallika
0 comments

ಉದ್ಯೋಗ ಹುಡುಕಾಟದಲ್ಲಿರುವ ಇಂಜಿನಿಯರ್ ಗಳಿಗೆ ಉದ್ಯೋಗವಕಾಶ. ಇಂಜಿನಿಯರ್‌ಗಳು ಮಾತ್ರವಲ್ಲದೇ, ಡಿಪ್ಲೊಮಾ ಓದಿದವರಿಗೂ ಉದ್ಯೋಗವಕಾಶ.  ಈ ನೇಮಕಾತಿಯನ್ನು  ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಮಾಡಲು ಮುಂದಾಗಿದೆ. ಇದು ಭಾರತದ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಕಂಪನಿಯಾಗಿದೆ. ಕೋಲ್ ಇಂಡಿಯಾ ಲಿಮಿಟೆಡ್‌ನ ಎಂಟು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಕಂಪನಿಯು ತನ್ನ ಪ್ರಧಾನ ಕಚೇರಿಯನ್ನು ಬಿಲಾಸ್‌ಪುರ, ಛತ್ತೀಸ್‌ಗಢ ನಲ್ಲಿ ಹೊಂದಿದೆ. ಇನ್ನು ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ? ಹೇಗೆ ಅರ್ಜಿ ಸಲ್ಲಿಸಬೇಕು ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಸಂಸ್ಥೆಯ ಹೆಸರು: ಸೌತ್ ಈಸ್ಟರ್ನ್ ಕೋಲ್ ಫೀಲ್ಡ್
ಲಿಮಿಟೆಡ್
ಹುದ್ದೆಯ ಹೆಸರು: ಗ್ರಾಜ್ಯುಯೇಟ್ ಅಪ್ರೆಂಟಿಸ್, ಡಿಪ್ಲೊಮಾ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: ಒಟ್ಟು 1150 ಹುದ್ದೆಗಳು

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-11- 2022
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-12-2022

ಹುದ್ದೆಗಳ ವಿವರ :
ಮೈನಿಂಗ್ ಇಂಜಿನಿಯರಿಂಗ್ -200
ಇಲೆಕ್ಟ್ರಿಕಲ್ ಇಂಜಿನಿಯರಿಂಗ್- 83
ಮೆಕ್ಯಾನಿಕಲ್ ಇಂಜಿನಿಯರಿಂಗ್-53
ಸಿವಿಲ್ ಇಂಜಿನಿಯರಿಂಗ್-46
ಡಿಪ್ಲೊಮ ಇನ್ ಮೈನಿಂಗ್ ಇಂಜಿನಿಯರಿಂಗ್-1150

ಆಯ್ಕೆ ವಿಧಾನ: ವಿದ್ಯಾರ್ಹತೆಯ ಅಂಕಗಳು ಹಾಗೂ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುವುದು.

ವೇತನ : ಗ್ರಾಜ್ಯುಯೇಟ್ ಅಪ್ರೆಂಟಿಸ್ ಸ್ಟೈಫಂಡ್ : 9,000 ರೂ.
ಡಿಪ್ಲೋಮಾ ಅಪ್ರೆಂಟಿಸ್ ಸ್ಟೈಫಂಡ್ : 8,000 ರೂ.

ಅರ್ಜಿ ಜೊತೆ ಸಲ್ಲಿಸಲು ಬೇಕಾದ ದಾಖಲೆಗಳು
ಜನ್ಮ ದಿನಾಂಕ ಮಾಹಿತಿ ಫೋಟೋ ಕಾಪಿ
SSLC ಅಂಕಪಟ್ಟಿ ಡಿಪ್ಲೊಮ ಪಾಸ್ ಸರ್ಟಿಫಿಕೇಟ್, ಅಂಕಗಳು ಬಿಇ ಪದವಿ ಪಾಸ್ ಸರ್ಟಿಫಿಕೇಟ್, ಅಂಕಗಳು

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

You may also like

Leave a Comment