Home » Jobs : ಸರಕಾರದ ಎಂಪ್ರಿ (EMPRI) ಸಂಸ್ಥೆಯಲ್ಲಿ ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿ ಇಲ್ಲಿದೆ

Jobs : ಸರಕಾರದ ಎಂಪ್ರಿ (EMPRI) ಸಂಸ್ಥೆಯಲ್ಲಿ ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿ ಇಲ್ಲಿದೆ

0 comments
EMPRI Recruitment 2023

EMPRI Recruitment 2023: ಸರ್ಕಾರಿ ಕೆಲಸಕ್ಕಾಗಿ ಸಾಲು ಸಾಲು ಜನರು ಕಾದು ಕುಳಿತಿದ್ದಾರೆ. ಸಣ್ಣ ಅವಕಾಶ ಸಿಕ್ಕರೂ ಸದುಪಯೋಗ ಪಡಿಸಿಕೊಳ್ಳುತ್ತಾರೆ. ಸದ್ಯ ನಿರುದ್ಯೊಗಿಗಳ ಸಂಖ್ಯೆ ಹೆಚ್ಚಾಗಿದ್ದು, ಯಾವುದಾದರೂ ಒಂದು ಕೆಲಸ ಸಿಗಲಿ ಎಂದು ಅಲೆಯುತ್ತಿದ್ದಾರೆ. ಇಂತಹ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಇಲ್ಲಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI Recruitment 2023) ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.

ಹೌದು, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (Environmental Management & Policy Research Institute -EMPRI) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಹುದ್ದೆ ಖಾಲಿ ಇದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ : ರಿಸರ್ಚ್​ ಸೈಂಟಿಸ್ಟ್ (Research Scientist)​

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 23/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ​21/3/2023

ಉದ್ಯೋಗದ ಸ್ಥಳ : ಬೆಂಗಳೂರು(Bengaluru)

ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಇ-ಮೇಲ್ ಐಡಿ empri@karnataka.gov.in ಗೆ ಕಳುಹಿಸಬೇಕು.

ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವೆಬ್ ಸೈಟ್ empri.karnataka.gov.in ಗೆ ಭೇಟಿ ನೀಡಿ.

ಇದನ್ನೂ ಓದಿ : ಬಿಬಿಎಂಪಿಯಲ್ಲಿ ಉದ್ಯೋಗವಕಾಶ, ಮಾಸಿಕ ವೇತನ ರೂ.25,000

You may also like

Leave a Comment