Agniveer Reservation: ದೇಶದ ಗಡಿ ಕಾಯುವ, ಭಾರತೀಯರ ಪ್ರಾಣ ರಕ್ಷಕರಾಗಿರುವ ಅಗ್ನಿವೀರರಿಗೆ (Agniveer) ಭಾರತೀಯ ರೈಲ್ವೆಯು ಸಿಹಿಸುದ್ಧಿ ನೀಡಿದೆ. ರೈಲ್ವೆ ಉದ್ಯೋಗದಲ್ಲಿ ನಿಮಗಿದೆ ಮೀಸಲಾತಿ. ಅಗ್ನಿವೀರರಿಗೆ ರೈಲ್ವೆ ಇಲಾಖೆ ಉದ್ಯೋಗದಲ್ಲಿ ಶೇ.15ರಷ್ಟು ಮೀಸಲಾತಿ (Agniveer Reservation) ನೀಡುವುದಾಗಿ ಹೇಳಲಾಗಿದೆ.
ವಿವಿಧ ಇಲಾಖೆಗಳಲ್ಲಿನ ನಾನ್ ಗೆಜೆಟೆಡ್ ಹುದ್ದೆಗಳನ್ನು ಭರ್ತಿ ಮಾಡಲು ನಡೆಯುವ ನೇರ ನೇಮಕಾತಿಯಲ್ಲಿ ರೈಲ್ವೆಯು ಅಗ್ನಿವೀರರಿಗೆ ಶೇ.15ರಷ್ಟು ಮೀಸಲಾತಿ ನೀಡುತ್ತದೆ. ರೈಲ್ವೆ ಇಲಾಖೆಯ ಲೆವೆಲ್ 1 ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಾತಿ ಹಾಗೂ ಲೆವೆಲ್ 2, ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ಶೇ.5ರಷ್ಟು ಮೀಸಲಿಡಲಾಗಿದೆ.
ರೈಲ್ವೆಯ ಭದ್ರತಾ ಪಡೆಗಳಲ್ಲಿ ಕೂಡ ಮೀಸಲಾತಿ ನೀತಿಯನ್ನು ಜಾರಿಗೆ ತರಲಾಗುತ್ತದೆ. ಮೊದಲ ಬ್ಯಾಚ್ನ ಅಗ್ನಿವೀರರಿಗೆ ವಯೋಮಿತಿಯಲ್ಲಿ 5 ವರ್ಷ ಹಾಗೂ ನಂತರದ ಬ್ಯಾಚ್ಗಳ ಅಗ್ನಿವೀರರಿಗೆ 3 ವರ್ಷಗಳಷ್ಟು ಸಡಿಲಿಕೆ ನೀಡಲಾಗುತ್ತದೆ.
