Home » Government employees: ಸರ್ಕಾರಿ ನೌಕರರಿಗೆ ಬಂತು ಮೊಬೈಲ್ ಆಧಾರಿತ ಹಾಜರಾತಿ

Government employees: ಸರ್ಕಾರಿ ನೌಕರರಿಗೆ ಬಂತು ಮೊಬೈಲ್ ಆಧಾರಿತ ಹಾಜರಾತಿ

0 comments
Government Employee

Government employees: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಸದ್ಯ ಜಾರಿಗೊಳಿಸಿದೆ. ಆದರೆ ಹಂತ ಹಂತವಾಗಿ ಮೊಬೈಲ್ ಆಧಾರಿತ ಹಾಜರಾತಿ ಜಾರಿಗೊಳಿಸಲಾಗುತ್ತದೆ ಎಂದು 2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.ಈಗ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಮೊಬೈಲ್ ಆಧಾರಿತ ಹಾಜರಾತಿ ಜಾರಿಗೆ ಬಂದಿದೆ.

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮೊಬೈಲ್ ಆಧಾರಿತ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.ಇಲಾಖೆಯು ಈಗಾಗಲೇ ಚಾಲ್ತಿಯಲ್ಲಿದ್ದ ಬಯೋಮೆಟ್ರಿಕ್ ಹಾಜರಾತಿಯನ್ನು ರದ್ದುಗೊಳಿಸಿ, ಮೊಬೈಲ್ ಆಧಾರಿತ ಹಾಜರಾತಿಯ (ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಮೂಲಕ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಾತಿ ನೀಡಬೇಕೆಂದು ಎಂದು ಸೂಚಿಸಿದೆ.

ಈ ಹೊಸ ಹಾಜರಾತಿ ವ್ಯವಸ್ಥೆಯನ್ನು ಅನುಸರಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸುವುದರ ಜೊತೆಗೆ ನಡತೆ ನಿಯಮದ ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರು ತಿಳಿಸಿದ್ದಾರೆ.ಹೇಗೆ ಕೆಲಸ ಮಾಡಲಿದೆ? ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಈಗಾಗಲೇ ಈ ಮಾದರಿ ಹಾಜರಾತಿಯನ್ನು ಜಾರಿಗೊಳಿಸಲಾಗಿತ್ತು. ಈಗ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿಯೂ ಇದು ಜಾರಿಗೆ ಬಂದಿದೆ.ಮೊಬೈಲ್ ಆಧಾರಿತ ಎಐ ತಂತ್ರಜ್ಞಾನ ಚಾಲಿತವಾದ ಫೇಸ್ ರೆಕಗ್ನಿಶನ್ ವ್ಯವಸ್ಥೆಯಡಿ ಇದು ಕಾರ್ಯ ನಿರ್ವಹಣೆ ಮಾಡುತ್ತಿದೆ.

ಆಫೀಸ್ ಒಳಗೆ ಹೋಗುವ ಮುನ್ನ ಸೆಲ್ಫೀ ಮೂಲಕ ಇದು ನೌಕರರು/ ಅಧಿಕಾರಿಗಳ ಹಾಜರಾತಿಯನ್ನು ದಾಖಲು ಮಾಡಿಕೊಳ್ಳುತ್ತದೆ.ಈಗಾಗಲೇ ಚಾಲ್ತಿಯಲ್ಲಿರುವ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳಿದ್ದವು. ಆದ್ದರಿಂದ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಸರ್ಕಾರಿ ನೌಕರರ ಹಾಜರಾತಿಯನ್ನು ಮೊಬೈಲ್ ಮೂಲಕ ದಾಖಲು ಮಾಡಲಾಗುತ್ತಿದೆ. ಇದಕ್ಕಾಗಿಯೇ ಅಪ್ಲಿಕೇಶನ್ ಸಿದ್ಧಗೊಳಿಸಲಾಗಿದೆ.ಕರ್ನಾಟಕ ಸರ್ಕಾರದ ವತಿಯಿಂದಲೇ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAMS) ಅಭಿವೃದ್ಧಿಗೊಳಿಸಲಾಗಿದೆ. ಕ

ಛೇರಿಯ ಹಾಜರಾತಿ ವ್ಯವಸ್ಥೆಯನ್ನು ಈ ಮುಖಾಂತರವಾಗಿ ನಿರ್ವಹಿಸುವುದರಿಂದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಏಕರೂಪವಾದ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು ಹಂತ ಹಂತವಾಗಿ ಮಾಡಲಾಗುತ್ತದೆ.ಅಧಿಕಾರಿ/ ನೌಕರರು ಕಚೇರಿ ಆವರಣದಲ್ಲಿ ಸೆಲ್ಪೀ ತೆಗೆದುಕೊಳ್ಳಬೇಕು. ಈ ಸೆಲ್ಪೀ ಆಧಾರ್ ಆಧಾರಿತ ವಿವರಗಳ ಜೊತೆ ಹೋಲಿಕೆಯಾಗುತ್ತದೆ. ಹಾಜರಾತಿಯನ್ನು ನಿಖರವಾದ ಸಮಯದಲ್ಲಿ ಇದು ದಾಖಲಿಸುತ್ತದೆ. ಕಚೇರಿಯ 100 ರಿಂದ 200 ಮೀಟರ್ ವ್ಯಾಪ್ತಿಯಲ್ಲಿಯೇ ಈ ಸೆಲ್ಫೀ ತೆಗೆದುಕೊಂಡಿರಬೇಕು.

You may also like