Home » Job Alert: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ; ಕಂದಾಯ ಇಲಾಖೆಯಲ್ಲಿ 1,700 ‘ ಗ್ರಾಮಕರಣಿಕರ ‘ ಹುದ್ದೆ!

Job Alert: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ; ಕಂದಾಯ ಇಲಾಖೆಯಲ್ಲಿ 1,700 ‘ ಗ್ರಾಮಕರಣಿಕರ ‘ ಹುದ್ದೆ!

2 comments
Job Alert

Job Alert: ಇಂದಿನ ಕಾಲದಲ್ಲಿ ಉದ್ಯೋಗ (job vacancy) ಸಿಗುವುದು ಬಹಳ ಕಷ್ಟವಾಗಿದೆ. ಕೆಲಸ ಸಿಕ್ಕಿದರು ಬಯಸಿರುವಂತಹ ಕೆಲಸ ಸಿಗುವುದಿಲ್ಲ. ಬಯಸಿದ ಕೆಲಸ ಪಡೆಯಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಆದರೆ ಇದೀಗ ಉದ್ಯೋಗಾಕಾಂಕ್ಷಿಗಳಿಗೆ )Job Alert) ಸಿಹಿ ಸುದ್ದಿ ಇಲ್ಲಿದೆ.

ಹೌದು, ಉದ್ಯೋಗದ ಬಗ್ಗೆ ಕಂದಾಯ ಸಚಿವರು ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು, ರಾಜ್ಯದಲ್ಲಿನ ಕಂದಾಯ ಇಲಾಖೆಯ ಕೆಲಸಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಆರು ತಿಂಗಳೊಳಗೆ 1,700 ರಷ್ಟು ಗ್ರಾಮಕರಣಿಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.

ಅಂದಹಾಗೆ ಗ್ರಾಮಕರಣಿಕರ (Post of Villager) ನೇಮಕ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ಮೂಲಕ ನಡೆಯಲಿದೆ‌. ಮೂರ್ನಾಲ್ಕು ತಿಂಗಳೊಳಗೆ 250 ಲೈಸನ್ಸ್ಡ್ ಸರ್ವೆಯರ್ ಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ಇದನ್ನೂ ಓದಿ: Murder Case: ಮಗಳಿಂದ ಅಪ್ಪನ ಕೊಲೆ ರಹಸ್ಯ ಬಯಲು! ಅಮ್ಮನ ಮೇಲೆ ಕೊಲೆ ಆರೋಪ ಹೊರಿಸಿದ್ಯಾಕೆ ಮಗಳು?!

You may also like

Leave a Comment