Home » Upsc Recruitment 2023: ಯುಪಿಎಸ್‌ಸಿ ಇಂದ ಉದ್ಯೋಗಾವಕಾಶ! ಟೀಚಿಂಗ್, ನಾನ್‌ ಟೀಚಿಂಗ್ ಹುದ್ದೆಗೆ ಅರ್ಜಿ ಆಹ್ವಾನ!!!

Upsc Recruitment 2023: ಯುಪಿಎಸ್‌ಸಿ ಇಂದ ಉದ್ಯೋಗಾವಕಾಶ! ಟೀಚಿಂಗ್, ನಾನ್‌ ಟೀಚಿಂಗ್ ಹುದ್ದೆಗೆ ಅರ್ಜಿ ಆಹ್ವಾನ!!!

1 comment
Upsc Recruitment 2023

Upsc Recruitment 2023 : ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸುವರ್ಣ ಅವಕಾಶ ಇಲ್ಲಿದೆ ನೋಡಿ. ಕೇಂದ್ರ ಲೋಕಸೇವಾ ಆಯೋಗ (KPSC)ವಿವಿಧ ಟೀಚಿಂಗ್, ನಾನ್ ಟೀಚಿಂಗ್ ಹುದ್ದೆಗಳಿಗೆ( Upsc Recruitment 2023)ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ವಿವಿಧ ಹುದ್ದೆಗಳಾದ ಅಸಿಸ್ಟಂಟ್ ಪ್ರೊಫೆಸರ್, ಸಿಸ್ಟಮ್ ಅನಾಲಿಸ್ಟ್, ಪೋಸ್ಟ್ ಗ್ರಾಜುಯೇಟ್ ಟೀಚರ್ ಹುದ್ದೆಗಳನ್ನು ವಿವಿಧ ಇಲಾಖೆಗಳು / ಸಚಿವಾಲಯಗಳಲ್ಲಿ ನೇಮಕ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 11-09-2023 ಆರಂಭಿಕ ದಿನವಾಗಿದ್ದು,28-09-2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿಯನ್ನು ಪಡೆಯಲು 29-09-2023 ಕೊನೆಯ ದಿನವಾಗಿದೆ. ಈ ಹುದ್ದೆಗಳು ವಿವಿಧ ಮಿನಿಸ್ಟ್ರಿಗಳಾದ ಜಲ್ ಶಕ್ತಿ / ಜವಹರಲಾಲ್ ನೆಹರು ರಾಜಕೀಯ ಮಹಾವಿದ್ಯಾಲಯ, ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ಆಡಳಿತ ವಿಭಾಗಗಳಲ್ಲಿ ಲಭ್ಯವಿದೆ.

ಹುದ್ದೆಗಳ ವಿವರ ಹೀಗಿದೆ:
ಸಿಸ್ಟಮ್ ಅನಾಲಿಸ್ಟ್ ಇನ್ ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ : 1
ಪಿಜಿ ಟೀಚರ್ (ಬೆಂಗಾಲಿ) : 1
ಪಿಜಿ ಟೀಚರ್ (ಕೆಮಿಸ್ಟ್ರಿ) : 1
ಪಿಜಿ ಟೀಚರ್ (ಇಂಗ್ಲಿಷ್ ) : 1
ಪಿಜಿ ಟೀಚರ್ ( ಗಣಿತ) : 1
ಪಿಜಿ ಟೀಚರ್ ( ಭೌತಶಾಸ್ತ್ರ ) : 1
ಪಿಜಿ ಟೀಚರ್ ( ಪೊಲಿಟಿಕಲ್ ಸೈನ್ಸ್ ) : 1
ಅಸಿಸ್ಟಂಟ್ ಪ್ರೊಫೆಸರ್ (ಬೆಂಗಾಲಿ) : 1
ಅಸಿಸ್ಟಂಟ್ ಪ್ರೊಫೆಸರ್ (ಕಾಮರ್ಸ್ ) : 1

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
# ಮೊದಲಿಗೆ, ಯುಪಿಎಸ್ಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
# ತೆರೆದ ಪೇಜ್ನಲ್ಲಿ ‘ONLINE RECRUITMENT APPLICATION (ORA) FOR VARIOUS RECRUITMENT POSTS’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
# ತೆರೆಯವ ವೆಬ್ಪೇಜ್ನಲ್ಲಿ ಅಧಿಸೂಚಿಸಿರುವ ಹುದ್ದೆಗಳಿಗೆ ಅರ್ಜಿಯ ಆನ್ಲೈನ್ ಲಿಂಕ್ ಕಾಣಲಿದೆ.
# ನಿಮ್ಮ ಆಸಕ್ತ ಹುದ್ದೆಯ ಮುಂದೆ ‘Apply Now’ ಎಂಬಲ್ಲಿ ಕ್ಲಿಕ್ ಮಾಡಿಕೊಳ್ಳಿ.
# ಬಳಿಕ ಅರ್ಜಿಯಲ್ಲಿ ಕೇಳಲಾದ ಮಾಹಿತಿ ನೀಡಿ ಅರ್ಜಿ ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಮೇಲೆ ತಿಳಿಸಿದ ಹುದ್ದೆಗಳಿಗೆ ವಿದ್ಯಾರ್ಹತೆ ಗಮನಿಸಿದರೆ, ಸಿಸ್ಟಮ್ ಅನಾಲಿಸ್ಟ್ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್ , ಎಂಎಸ್ಸಿ ಅಥವಾ ಬಿಇ, ಬಿ.ಟೆಕ್ ಮಾಡಿರಬೇಕು. ಪಿಜಿ ಟೀಚರ್ ಹುದ್ದೆಗಳಿಗೆ, ಆಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಸಂದರ್ಶನ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: 2nd PUC Result: ದ್ವಿತೀಯ ‘PUC’ ಪೂರಕ ಪರೀಕ್ಷೆ-2 ಫಲಿತಾಂಶ ಇಂದು ಪ್ರಕಟ; ಈ ರೀತಿ ನಿಮ್ಮ ರಿಸಲ್ಟ್‌ ಚೆಕ್‌ ಮಾಡಿ!!!

You may also like

Leave a Comment