KPSC 2023 ನೇ ಸಾಲಿನಲ್ಲಿ ಅಧಿಸೂಚಿಸಿರುವ ವಿವಿಧ ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಕುರಿತು ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಿದೆ(KPSC). ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದ ಆಯೋಗವು ಇಂದು ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಇದರ ಪ್ರಕಾರ, ನವೆಂಬರ್ 04,05 ನೇ ತಾರೀಖಿನಂದು ಗ್ರೂಪ್ ಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಪ್ರವೇಸ ಪತ್ರ ಡೌನ್‌ಲೋಡ್ ಮಾಡಲು ಸೂಚಿಸಲಾಗಿದೆ.
ಸರಕಾರಿ ಅಧಿಕೃತ ಗುರುತಿನ ಚೀಟಿ ಇತರೆ ಯಾವುದಾದರೂ ಅಡ್ಮಿಟ್ ಕಾರ್ಡ್ ತೆಗೆದುಕೊಂಡು ಪರೀಕ್ಷೆ ದಿನಾಂಕದಂದು ಹಾಜರಾಗಬೇಕು. ಅಡ್ಮಿಟ್ ಕಾರ್ಡ್ ಇಲ್ಲದೇ ಹೋದರೆ ಪರೀಕ್ಷೆಗೆ ಕೂರಲು ಅವಕಾಶ ನೀಡುವುದಿಲ್ಲ. ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ತಪ್ಪದೇ ಓದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.
ಕನ್ನಡ ಭಾಷಾ ಪರೀಕ್ಷೆ
ಪರೀಕ್ಷೆ ದಿನಾಂಕ : 04-11-2023 (ಅಪರಾಹ್ನ 02-00 ರಿಂದ 04-00 ರವರೆಗೆ)
ಪತ್ರಿಕೆ-1 : ಸಾಮಾನ್ಯ ಜ್ಞಾನ / ಪತ್ರಿಕೆ-2: ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ಪರೀಕ್ಷೆ
ಪರೀಕ್ಷೆ ದಿನಾಂಕ : 05-11-2023 ಪೂರ್ವಾಹ್ನ 10-00 ರಿಂದ 11-30 ರವರೆಗೆ. ಅಪರಾಹ್ನ 02-00 ರಿಂದ 04-00 ಗಂಟೆವರೆಗೆ.
ಸೂಚನೆಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: Sandalwood Actress Amulya: ಅಮೂಲ್ಯ ಅವರ ಪುಟ್ಟ ಮಕ್ಕಳ ಕೊರಳಲ್ಲೂ ಹುಲಿ ಪೆಂಡೆಂಟ್ ?! ಏನಂದ್ರು ನಟಿ ?!
