Home » Gram Panchayat Jobs : ಗ್ರಾಮ ಪಂಚಾಯತ್‌ ನೇಮಕಾತಿ; ಭರ್ಜರಿ ಉದ್ಯೋಗ, ಯಾವುದೇ ಪರೀಕ್ಷೆ ಇಲ್ಲ!!! ಈ ಕೂಡಲೇ ಅರ್ಜಿ ಸಲ್ಲಿಸಿ!!

Gram Panchayat Jobs : ಗ್ರಾಮ ಪಂಚಾಯತ್‌ ನೇಮಕಾತಿ; ಭರ್ಜರಿ ಉದ್ಯೋಗ, ಯಾವುದೇ ಪರೀಕ್ಷೆ ಇಲ್ಲ!!! ಈ ಕೂಡಲೇ ಅರ್ಜಿ ಸಲ್ಲಿಸಿ!!

1 comment
Gram Panchayat Jobs

Gram Panchayat Jobs: ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. Vijayapura Gram Panchayat Recruitment 2023: ವಿಜಯಪುರ ಗ್ರಾಮ ಪಂಚಾಯತ್ (Vijayapura Gram Panchayat jobs)  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು, ಒಟ್ಟು 13 ಲೈಬ್ರರಿ ಸೂಪರ್ವೈಸರ್ (Library Supervisor) ಹುದ್ದೆಗಳು ಖಾಲಿಯಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಯ ವಿವರ ಹೀಗಿದೆ:
ಸಂಸ್ಥೆ -ವಿಜಯಪುರ ಗ್ರಾಮ ಪಂಚಾಯತ್
ಹುದ್ದೆ – ಲೈಬ್ರರಿ ಸೂಪರ್ವೈಸರ್
ಒಟ್ಟು ಹುದ್ದೆ- 13
ಉದ್ಯೋಗದ ಸ್ಥಳ- ವಿಜಯಪುರ

ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು 16,10, 2023 ಆರಂಭಿಕ ದಿನವಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 6, 2023 ಕೊನೆಯ ದಿನವಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08352-250644 ಗೆ ಕರೆ ಮಾಡಬಹುದು.

ವಿದ್ಯಾರ್ಹತೆ :
ವಿಜಯಪುರ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ, ಲೈಬ್ರರಿ ಸೈನ್ಸ್ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಮುಗಿಸಿರಬೇಕು.

ವಯೋಮಿತಿ:
ವಿಜಯಪುರ ಗ್ರಾಮ ಪಂಚಾಯತ್ ನೇಮಕಾತಿ ಅಧಿಸೂಚನೆ ಅನುಸಾರ, ನವೆಂಬರ್ 6, 2023ಕ್ಕೆ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು. SC/ST/ಪ್ರವರ್ಗ-I ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆಯಿರಲಿದೆ.PWD/ವಿಧವಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ 10 ವರ್ಷಗಳು. ಇದರ ಜೊತೆಗೆ, ಪ್ರವರ್ಗ-2A/2B/3A & 3B ಅಭ್ಯರ್ಥಿಗಳಿಗೆ 03 ವರ್ಷಗಳು ವಯೋಮಿತಿ ಸಡಿಲಿಕೆ ಇರಲಿದೆ.

ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ ಹೀಗಿದೆ:
ಉಪನಿರ್ದೇಶಕರ ಕಛೇರಿ,
ಜಿಲ್ಲಾ ಕೇಂದ್ರ ಗ್ರಂಥಾಲಯ,
ವಿಜಯಪುರ – ಕರ್ನಾಟಕ

ಅರ್ಜಿ ಶುಲ್ಕ:
PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100/-
SC/ST/ಪ್ರವರ್ಗ-I/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.200/-
ಪ್ರವರ್ಗ-2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.300/-
ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.500/-

ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬೇಕಾಗಿದ್ದು, ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹ 15,196 ನೀಡಲಾಗುತ್ತದೆ.

ಇದನ್ನೂ ಓದಿ: Crime News: 13 ರ ಅಪ್ರಾಪ್ತೆಯಿಂದ ತನ್ನ ತಾಯಿಯ ಭೀಕರ ಕೊಲೆ!!! ಅಲ್ಲಿತ್ತು ಅವನ ನೆರಳು!!!

You may also like

Leave a Comment