KMF recruitment : ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮ, ಕೋಲಾರ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ (KMF recruitment) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ವಿವಿಧ ವೃಂದಗಳಲ್ಲಿನ 53+28 ಒಟ್ಟು 81 ಹುದ್ದೆಗಳ ಭರ್ತಿಗೆ ಎರಡು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಹುದ್ದೆಯ ಬಗೆಗಿನ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ ಇಲ್ಲಿದೆ;
ಸಹಾಯಕ ವ್ಯವಸ್ಥಾಪಕರು (ಎ.ಹೆಚ್& ಎ.ಐ) : 26
ಸಹಾಯಕ ವ್ಯವಸ್ಥಾಪಕರು (ವಿತ್ತ) : 1
ತಾಂತ್ರಿಕ ಅಧಿಕಾರಿ (ಡಿ.ಟಿ) : 15
ಮಾರುಕಟ್ಟೆ ಅಧಿಕಾರಿ ; 1
ಸಿಸ್ಟಮ್ ಆಫೀಸರ್ : 1
ತಾಂತ್ರಿಕ ಅಧಿಕಾರಿ (ಗು.ನಿ) : 1
ಕೃಷಿ ಅಧಿಕಾರಿ ; 3
ಆಡಳಿತಾಧಿಕಾರಿ : 1
ತಾಂತ್ರಿಕ ಅಧಿಕಾರಿ (ಇಂಜಿ) : 3
ಲೆಕ್ಕಾಧಿಕಾರಿ : 1
ವಿಸ್ತರಣಾಧಿಕಾರಿ ದರ್ಜೆ-3 : 16
ಡೇರಿ ಸೂಪರ್ ವೈಸರ್ ದರ್ಜೆ-2 : 12
ವಿಸ್ತರಣಾಧಿಕಾರಿ ದರ್ಜೆ 3 ನೇರ ನೇಮಕಾತಿ (ಸಾಮಾನ್ಯ ಕೋಟಾ) ಕೋಟಾದಲ್ಲಿ 8 ಹುದ್ದೆ, MpCs ಕೋಟಾದಲ್ಲಿ 8 ಹುದ್ದೆಗಳ ಖಾಲಿ ಇವೆ.
ಪ್ರಮುಖ ದಿನಾಂಕಗಳು
ವಿಸ್ತರಣಾಧಿಕಾರಿ ದರ್ಜೆ-3, ಡೇರಿ ಸೂಪರ್ ವೈಸರ್ ದರ್ಜೆ-2 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-10-2023
ಉಳಿದ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 04-10-2023 ರ ರಾತ್ರಿ 11-59 ಗಂಟೆವರೆಗೆ.
ವೇತನ: ಸಹಾಯಕ ವ್ಯವಸ್ಥಾಪಕರು (ಪ.ವೈ.ಸೇ/ಕೃ.ಗ): ರೂ.52650-97100
ಸಹಾಯಕ ವ್ಯವಸ್ಥಾಪಕರು (ಖರೀದಿ/ಉಗ್ರಾಣ) : ರೂ.52650-97100
ಲೀಗಲ್ ಅಧಿಕಾರಿ : ರೂ.43100-83900
ತಾಂತ್ರಿಕ ಅಧಿಕಾರಿ (ಡಿ.ಟಿ): ರೂ.43100-83900
ಡೇರಿ ಪರಿವೀಕ್ಷಕಕರು ದರ್ಜೆ-2 ಸಿವಿಲ್ : ರೂ.33450-62600
ವಿಸ್ತರಣಾಧಿಕಾರಿ ದರ್ಜೆ-3 : ರೂ.33450-62600
ಆಡಳಿತ ಸಹಾಯಕ ದರ್ಜೆ-2 : ರೂ. 27650-52650
ಲೆಕ್ಕ ಸಹಾಯಕ ದರ್ಜೆ-2 : ರೂ.27650-52650
ಮಾರುಕಟ್ಟೆ ಸಹಾಯಕ ದರ್ಜೆ-3/ ಡಿಸ್‌ಪ್ಯಾಚರ್ಸ್: ರೂ.21400-42000
ಜೂನಿಯರ್ ಟೆಕ್ನೀಷಿಯನ್ : 21400-42000
ಕೃಷಿ ಸಹಾಯಕ : ರೂ.21400-42000
ಡೇರಿ ಪರಿವೀಕ್ಷಕರು ದರ್ಜೆ-2 (ಸಿವಿಲ್) : ರೂ.33450-62600
ನೇರನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಬಹುದು. ಅಂಚೆ, ಕೊರಿಯರ್ ಅಥವಾ ಖದ್ದಾಗಿ ಅರ್ಜಿಗಳನ್ನು ಅಭ್ಯರ್ಥಿಗಳು ಸಲ್ಲಿಸಲು ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ನೋಟಿಫಿಕೇಶನ್ 1, ನೋಟಿಫಿಕೇಶನ್ 2
ಇದನ್ನೂ ಓದಿ: ಪುತ್ತೂರು : ಗ್ರಾ.ಪಂ.ಮಾಜಿ ಸದಸ್ಯ ಹಾಗೂ ತಾಯಿಯ ಕಟ್ಟಿ ಹಾಕಿ ನಗದು ,ಚಿನ್ನಾಭರಣ ದರೋಡೆ
