ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಬಂಪರ್ ಉದ್ಯೋಗವಕಾಶ. ಹೌದು, ಭರ್ಜರಿ 40,889 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಉದ್ಯೋಗ ಇಲಾಖೆ : ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್
ಭಾರತದಾದ್ಯಂತ ಹುದ್ದೆಗಳ ಸಂಖ್ಯೆ : 40,889
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 3036
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 27-01-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-02-2023
ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ : ಫೆಬ್ರುವರಿ 17-19, 2023 ವರೆಗೆ.
ರಾಜ್ಯವಾರು ಹುದ್ದೆಗಳು : ಆಂಧ್ರ ಪ್ರದೇಶ(ತೆಲುಗು)- 2480
ಅಸ್ಸಾಂ(ಅಸ್ಸಾಮೀಸ್/ ಅಸೋಮಿಯಾ)- 355
ಅಸ್ಸಾಂ(ಬೆಂಗಾಲಿ/ಬಾಂಗ್ಲಾ)- 36
ಅಸ್ಸಾಂ (ಬೋಡೋ)- 16
ಬಿಹಾರ (ಹಿಂದಿ)- 1461
ಛತ್ತೀಸ್ಗಢ (ಹಿಂದಿ)- 1593
ದೆಹಲಿ (ಹಿಂದಿ)- 46
ಗುಜರಾತ್ (ಗುಜರಾತಿ)- 2017
ಹರಿಯಾಣ (ಹಿಂದಿ)- 354
ಹಿಮಾಚಲ ಪ್ರದೇಶ (ಹಿಂದಿ)- 603
ಜಮ್ಮು ಕಾಶ್ಮೀರ (ಹಿಂದಿ/ ಉರ್ದು)- 300
ಜಾರ್ಖಂಡ್ (ಹಿಂದಿ)- 1590
ಕರ್ನಾಟಕ(ಕನ್ನಡ)- 3036
ಕೇರಳ (ಮಲೆಯಾಳಂ)- 2462
ಮಧ್ಯ ಪ್ರದೇಶ(ಹಿಂದಿ)- 1841
ಮಹಾರಾಷ್ಟ್ರ (ಕೊಂಕಣಿ/ಮರಾಠಿ)- 94
ಮಹಾರಾಷ್ಟ್ರ (ಮರಾಠಿ)- 2414
ನಾರ್ತ್ ಈಸ್ಟರ್ನ್ (ಬೆಂಗಾಳಿ)- 201
ನಾರ್ತ್ ಈಸ್ಟರ್ನ್ (ಹಿಂದಿ/ಇಂಗ್ಲಿಷ್)- 395
ನಾರ್ತ್ ಈಸ್ಟರ್ನ್ (ಮಣಿಪುರ್/ ಇಂಗ್ಲಿಷ್)- 209
ನಾರ್ತ್ ಈಸ್ಟರ್ನ್ (ಮಿಜೋ)- 118
ಒಡಿಶಾ (ಒರಿಯಾ)- 1382
ಪಂಜಾಬ್ (ಹಿಂದಿ/ ಇಂಗ್ಲಿಷ್)- 6
ಪಂಜಾಬ್ (ಪಂಜಾಬಿ)-760
ರಾಜಸ್ಥಾನ (ಹಿಂದಿ)- 1684
ತಮಿಳುನಾಡು (ತಮಿಳು)- 3167
ತೆಲಂಗಾಣ (ತೆಲುಗು)- 1266
ಉತ್ತರ ಪ್ರದೇಶ (ಹಿಂದಿ)- 7987
ಉತ್ತರಾಖಂಡ (ಹಿಂದಿ)- 889
ಪಶ್ಚಿಮ ಬಂಗಾಳ (ಬೆಂಗಾಲಿ)- 2001
ಪಶ್ಚಿಮ ಬಂಗಾಳ (ಹಿಂದಿ/ಇಂಗ್ಲಿಷ್)- 29
ಪಶ್ಚಿಮ ಬಂಗಾಳ (ನೇಪಾಳಿ)- 54
ಪಶ್ಚಿಮ ಬಂಗಾಳ (ನೇಪಾಳಿ/ಬೆಂಗಾಲಿ)- 19
ಪಶ್ಚಿಮ ಬಂಗಾಳ (ನೇಪಾಳಿ/ ಇಂಗ್ಲಿಷ್)- 24
ಅರ್ಜಿ ಶುಲ್ಕ ರೂ.100.
ವೇತನ : ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ (BPM) : Rs.12,000-29,380 ವರೆಗೆ.
ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM) : Rs.10,000-24,470.
ಡಾಕ್ ಸೇವಕ್ : Rs.10,000-24,470.
ವಿದ್ಯಾರ್ಹತೆ : ಕನಿಷ್ಠ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು.
ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 40 ವರ್ಷ ಮೀರಿರಬಾರದು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಆಸಕ್ತರ ಅಭುರ್ಥಿಗಳು ವೆಬ್‌ಸೈಟ್ ವಿಳಾಸ https://indiapostgdsonline.gov.in/Reg_validation.aspx ಕ್ಕೆ ಭೇಟಿ ನೀಡಿ ಮೊದಲಿಗೆ ರಿಜಿಸ್ಟ್ರೇಷನ್ ಪಡೆಯಬೇಕು. ನಂತರ ಮತ್ತೆ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ, ಅರ್ಜಿ ಪೂರ್ಣಗೊಳಿಸಬೇಕು. ಅಭ್ಯರ್ಥಿಗಳು ಆಯಾ ರಾಜ್ಯದ ಅಧಿಕೃತ ಭಾಷೆ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು. ಕರ್ನಾಟಕ ಅಭ್ಯರ್ಥಿಗಳಿಗೆ ಅಧಿಕೃತ ಭಾಷೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಜತೆಗೆ ಬೇಸಿಕ್ ಕಂಪ್ಯೂಟರ್ ಜ್ಞಾನ ಮತ್ತು ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
