Home » Education: ‘ಶಿಕ್ಷಣವೇ ನನ್ನನ್ನು ಬೆಳೆಸಿದೆ, ಗುಡಿಸಲಿನಿಂದ ಐಷಾರಾಮಿ ಮನೆಗೆ ಕರೆತಂದಿದೆ’ – ವೈರಲ್ ಆಯ್ತು ಖ್ಯಾತ ಅಧಿಕಾರಿ ಪೋಸ್ಟ್

Education: ‘ಶಿಕ್ಷಣವೇ ನನ್ನನ್ನು ಬೆಳೆಸಿದೆ, ಗುಡಿಸಲಿನಿಂದ ಐಷಾರಾಮಿ ಮನೆಗೆ ಕರೆತಂದಿದೆ’ – ವೈರಲ್ ಆಯ್ತು ಖ್ಯಾತ ಅಧಿಕಾರಿ ಪೋಸ್ಟ್

1,283 comments

Education: ಶಿಕ್ಷಣ ಜೀವನವನ್ನು ಹೇಗೆಲ್ಲ ಬದಲಿಸಬಲ್ಲದು ಎನ್ನುವುದಕ್ಕೆ ಅಧಿಕಾರಿಯೊಬ್ಬರು ತಮ್ಮ ಜೀವನದ ಸ್ಥಿತಿ ಗತಿಯ ಬಗೆಗಿನ ವರ್ಣನೆ ಮಾಡಿದ್ದಾರೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ನಾಗರಿಕ ಸೇವಾ ಅಧಿಕಾರಿಯೊಬ್ಬರು ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

ಈ ಅಧಿಕಾರಿ ಅತ್ಯಂತ ಕಡುಬಡತನದಲ್ಲಿ ಬೆಳೆದು, ಇದರ ಮಧ್ಯೆಯೂ ಹೊಟ್ಟೆಗೆ ಹಿಟ್ಟಿಲ್ಲದೆ ಬಟ್ಟೆ ಅಭಾವ ಇದ್ದರು, ಉನ್ನತ ಶಿಕ್ಷಣ ಪಡೆದ ಕಾರಣಕ್ಕೆ ಗುಡಿಸಿಲಿನ ಮನೆಯಿಂದ ಇಂದು ಐಶಾರಾಮಿ ಮನೆಯಲ್ಲಿ ವಾಸಿಸಲು ಕಾರಣವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮೂಲತಃ ನಾಗಾಲ್ಯಾಂಡ್ ಮುಖ್ಯಮಂತ್ರಿಗಳ ಕಚೇರಿಯ ವಿಶೇಷ ಅಧಿಕಾರಿ ಬಿ. ನೆಲಯ್ಯಾಪ್ಪನ್ ಈ ಒಂದು ಪೋಸ್ಟ್ ಹಾಕಿದ್ದು, ಇದರಲ್ಲಿ ತಾವು ಈ ಮೊದಲು ವಾಸವಾಗಿದ್ದ ಮನೆ ಹಾಗೂ ಈಗ ವಾಸಿಸುತ್ತಿರುವ ಮನೆಯ ಫೋಟೋದ ಜೊತೆಗೆ ನನ್ನ ಇಂದಿನ ಈ ಜೀವನಕ್ಕೆ ಶಿಕ್ಷಣವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಅವರ ಪ್ರಕಾರ, ನನಗೆ 30 ವರ್ಷ ಆಗುವವರೆಗೂ ಗುಡಿಸಿಲಿನಂತಹ ಮನೆಯಲ್ಲಿ ನನ್ನ ಪೋಷಕರು ಹಾಗೂ ನಾಲ್ಕು ಮಂದಿ ಒಡಹುಟ್ಟಿದವರ ಜೊತೆ ಬಹಳ ಕಷ್ಟದಲ್ಲಿ ಜೀವನ ನಡೆಸಿದ್ದೆ. ನನ್ನ ಶ್ರದ್ಧೆಯ ಶಿಕ್ಷಣ, ಕಠಿಣ ಪರಿಶ್ರಮದ ಕಾರಣಕ್ಕೆ ಇಂದು ಈ ಹಂತ ತಲುಪಿದ್ದೇನೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿದ್ದು, ಮುಂದಿನ ಪೀಳಿಗೆಗೆ ಸಂದೇಶ ನೀಡಿದ್ದಾರೆ.

ಸದ್ಯ ಈ ಪೋಸ್ಟ್ ನೋಡಿದ್ದ ವೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದು, ನಿಮ್ಮಂತ ಮಾರ್ಗದರ್ಶಕರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

You may also like

Leave a Comment