Home » ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ !! | ಸಿಲಿಕಾನ್ ಸಿಟಿಯಲ್ಲಿ ಮೇ 21 ರಂದು ಬೃಹತ್ ಉದ್ಯೋಗ ಮೇಳ

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಗುಡ್ ನ್ಯೂಸ್ !! | ಸಿಲಿಕಾನ್ ಸಿಟಿಯಲ್ಲಿ ಮೇ 21 ರಂದು ಬೃಹತ್ ಉದ್ಯೋಗ ಮೇಳ

0 comments

ಉದ್ಯೋಗ ಅರಸುತ್ತಿರುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಮೇ 21 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜನೆಯಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಗಳು, ಬೆಂಗಳೂರು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಹಾಗೂ ಯುವಿಎ ಡಿಜಿಟಲ್ ಇವರ ಸಹಯೋಗದಲ್ಲಿ ದಿನಾಂಕ: 21-05-2022 ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸೆಂಟ್ ಜೋಸೆಫ್ ಕಾಲೇಜ್ ನಂ.36, ಲಾಂಗ್ ಪೋರ್ಡ್ ರಿಂಗ್ ರೋಡ್, ಲಾಂಗ್ ಪೋರ್ಡ್ ಗಾರ್ಡನ್, ಬೆಂಗಳೂರು – 560027 ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಕನಿಷ್ಟ 18 ರಿಂದ ಗರಿಷ್ಟ 40 ವಯೋಮಿತಿಯೊಳಗಿನ ಆಸಕ್ತ ಉದ್ಯೋಗಕಾಂಕ್ಷಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್, 10 ವೈಯುಕ್ತಿಕ ವಿವರದ ಮಾಹಿತಿ ಒಳಗೊಂಡ ಪತ್ರಗಳು (ಬಯೋಡೇಟಾ) ಹಾಗೂ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9980853738, 9916181705 ಮತ್ತು 8197239971 ಅನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

You may also like

Leave a Comment