Home » Court Recruitment 2023: ಮೈಸೂರು ಕೋರ್ಟ್ ನಲ್ಲಿ ಖಾಯಂ ಹುದ್ದೆ ಪಡೆಯಲು ಸುವರ್ಣ ಅವಕಾಶ! ಅರ್ಜಿ ಸಲ್ಲಿಕೆಗೆ ಗ್ರೀನ್ ಸಿಗ್ನಲ್

Court Recruitment 2023: ಮೈಸೂರು ಕೋರ್ಟ್ ನಲ್ಲಿ ಖಾಯಂ ಹುದ್ದೆ ಪಡೆಯಲು ಸುವರ್ಣ ಅವಕಾಶ! ಅರ್ಜಿ ಸಲ್ಲಿಕೆಗೆ ಗ್ರೀನ್ ಸಿಗ್ನಲ್

0 comments
Court recruitment 2023

Court Recruitment 2023: ಉದ್ಯೋಗ ಹುಡುಕುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸ್ಟೆನೋಗ್ರಾಫರ್, ಟೈಪಿಸ್ಟ್‌ ಮತ್ತು ಪ್ಯೂನ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು (Court Recruitment 2023) ಈ ಅವಕಾಶವನ್ನು ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಬಳಸಿಕೊಳ್ಳಬಹುದು.

ಹುದ್ದೆಗಳು:
ಸ್ಟೆನೋಗ್ರಾಫರ್ (ಶೀಘ್ರಲಿಪಿಗಾರರು)-11 ಹುದ್ದೆ, ಟೈಪಿಸ್ಟ್‌ ( ಬೆರಳಚ್ಚುಗಾರರು) -3, ಹುದ್ದೆ ಹಾಗೂ ಪ್ಯೂನ್‌ ( ಸೇವಕರು) 45 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 06-06-2023 ರಿಂದ ಅವಕಾಶ ನೀಡಲಾಗಿದೆ.

ಸ್ಟೆನೋಗ್ರಾಫರ್‌ ಹುದ್ದೆ : ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್‌ ಪ್ರಾಕ್ಟೀಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್‌ ಹಿರಿಯ ಶ್ರೇಣಿ ಬೆರಳಚ್ಚು ಹಾಗೂ ಕನ್ನಡ ಹಾಗೂ ಇಂಗ್ಲಿಷ್‌ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಅಥವಾ ಡಿಪ್ಲೊಮಾ ಕಮರ್ಷಿಯಲ್‌ ಪ್ರಾಕ್ಟೀಸ್‌ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಬೇಕು. ಅಲ್ಲದೆ, ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರಬೇಕು.

ಟೈಪಿಸ್ಟ್‌ ಹುದ್ದೆ: ಪದವಿಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕಮರ್ಷಿಯಲ್‌ ಪ್ರಾಕ್ಟೀಸ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಮಾಡಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅಲ್ಲದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲಿಷ್‌ ಹಿರಿಯ ಶ್ರೇಣಿ ಬೆರಳಚ್ಚು ಹಾಗೂ ಕನ್ನಡ ಹಾಗೂ ಇಂಗ್ಲಿಷ್‌ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಅಥವಾ ಡಿಪ್ಲೊಮಾ ಕಮರ್ಷಿಯಲ್‌ ಪ್ರಾಕ್ಟೀಸ್‌ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಬೇಕು. ಅಲ್ಲದೆ, ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಹೊಂದಿರಬೇಕು.

ಪ್ಯೂನ್‌ ಹುದ್ದೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಥವಾ 10 ನೇ ತರಗತಿ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಪ್ರವರ್ಗ- 1ರ ಅಭ್ಯರ್ಥಿಗಳಿಗೆ 40 ವರ್ಷ ಎಂದು ನಿಗದಿಪಡಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಲೆಕ್ಕ ಹಾಕಲಾಗುತ್ತದೆ.

ಅರ್ಜಿ ಶುಲ್ಕ :
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ- 1ರ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 150 ರೂ. (ಪ್ಯೂನ್‌ ಹುದ್ದೆಗೆ 100 ರೂ.) ಹಾಗು ಸಾಮಾನ್ಯ ವರ್ಗದ ಅಭ್ಯರ್ಥಿಗಳು 300 ರೂ. (ಪ್ಯೂನ್‌ ಹುದ್ದೆಗೆ 200 ರೂ.) ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದು. ಇಲ್ಲವೇ ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಚಲನ್‌ ಮೂಲಕ ಕೂಡ ಪಾವತಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ವೇತನ:
ಸ್ಟೆನೋಗ್ರಾಫರ್‌ ಹುದ್ದೆಯ ವೇತನ ಶ್ರೇಣಿ: ರೂ.27,650-650-29,600-750-32,600-850-36,000-950-39,800-1,100-46,400-1,250-52,650

ಟೈಪಿಸ್ಟ್‌ ಹುದ್ದೆಯ ವೇತನ ಶ್ರೇಣಿ: ರೂ. 21,400-500-22,400-550-24,600-600-27,000-650-29,600-750 32,600-850-36,000-950-39,800-1,100-42,000.

ಪ್ಯೂನ್‌ ಹುದ್ದೆಯ ವೇತನ ಶ್ರೇಣಿ : ರೂ. 17,000-400-18,600-450-20,400-500-22,400-550-24,600-600-27,000-650-28,950.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://districts.ecourts.gov.in/mysuru

ಆಯ್ಕೆ ಪ್ರಕ್ರಿಯೆ:
ಪ್ಯೂನ್‌ ಹುದ್ದೆಗೆ ಮಾತ್ರ ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಒಟ್ಟು ಶೇಕಡವಾರು ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದಶನಕ್ಕೆ 10 ಅಂಕ ನಿಗದಿಯಾಗಿದ್ದು, ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕ ನಡೆಯಲಿದೆ.

ಉಳಿದ ಹುದ್ದೆಗೆ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಅಂಕಗಳ ಶೇಕಡವಾರು ಅಂಕಗಳು ಮತ್ತು ಕೌಶಲ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ನೇಮಕ ನಡೆಯಲಿದೆ. ಷರತ್ತುಗಳು ಅನ್ವಯ.

ಇದನ್ನೂ ಓದಿ: Heart Attack: ಹೃದಯಾಘಾತದ ಶಾಕಿಂಗ್ ಮಾಹಿತಿ ಬಹಿರಂಗ: ಸೋಮವಾರವೇ ಹೆಚ್ಚು ಹಾರ್ಟ್ ಅಟ್ಯಾಕ್ ಆಗಲು ಏನು ಕಾರಣ ?

You may also like

Leave a Comment