Home » KPTCL ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌!

KPTCL ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌!

by Mallika
1 comment
KPTCL job

KPTCL Job: ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಹುದ್ದೆಯ (KPTCL job) ಆಕಾಂಕ್ಷಿಗಳಿಗೆ ರಾಜ್ಯ ಸರಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಬರೋಬ್ಬರಿ 622 ಹುದ್ದೆಗಳ ಭರ್ತಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಒಪ್ಪಿಗೆ ನೀಡಿದ್ದು, ಖುಷಿ ಸುದ್ದಿಯೊಂದನ್ನು ಜನತೆಗೆ ನೀಡಿದ್ದಾರೆ.

ಕೆಪಿಟಿಸಿಎಲ್‌ ಹುದ್ದೆಗಳ ಭರ್ತಿಗೆ ಶಕ್ತಿಭವನದಲ್ಲಿ ಸಿಎಂ ಅವರು ಶುಕ್ರವಾರ ನಡೆದ ನಿಗಮದ ನಿರ್ದೇಶಕರ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ.

296 ಸಹಾಯಕ ಇಂಜಿನಿಯರ್‌, 208 ಕಿರಿಯ ಇಂಜಿನಿಯರ್‌, ಕೆಮಿಸ್ಟ್‌ ಮತ್ತು ಕೆಮಿಕಲ್‌ ಸೂಪರ್‌ ವೈಸರ್‌ ಸೇರಿ 622 ಹುದ್ದೆಗಳ ಭರ್ತಿಗೆ ಮರು ಪರೀಕ್ಷೆಯನ್ನು ಹೈಕೋರ್ಟ್‌ ನಿರ್ದೇಶನದಂತೆ ನಡೆಸಲಾಗುತ್ತಿದೆ.

ಇದರ ಜೊತೆಗೆ 622 ಹುದ್ದೆಗಳ ಜೊತೆಗೆ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಇದನ್ನೂ ಓದಿ: Murder Case: ಮತ್ತೆ ಭೀಮಾತೀರದಲ್ಲಿ ಚೆಲ್ಲಿದ ನೆತ್ತರು! ಯುವಕನ ಕೊಚ್ಚಿ ಕೊಲೆ!!!

You may also like

Leave a Comment