Teachers Recruitment: ರಾಜ್ಯ ಸರ್ಕಾರವು ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಸುಮಾರು 20 ಸಾವಿರ ಶಿಕ್ಷಕರ ನೇಮಕಕ್ಕೆ (Teachers Recruitment) ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಾಧ್ಯಮ ಜೊತೆ ಮಾತನಾಡಿದ
ಶಿಕ್ಷಣ ಸಚಿವವರು, ರಾಜ್ಯದಲ್ಲಿ ಈಗ 53 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಈಗಾಗಲೇ 13 ಸಾವಿರ ಶಿಕ್ಷಕರ ನೇಮಕ ಆಗಿದೆ. ಆದರೂ ಇನ್ನೂ 40 ಸಾವಿರ ಶಿಕ್ಷಕರ ಅಗತ್ಯವಿದೆ. ಇನ್ನು ಕಡಿಮೆ ಮಕ್ಕಳಿರುವ ಶಾಲೆಗಳನ್ನು ವಿಲೀನ
ಮಾಡಿ ಕ್ಲರ್ಸ್ಟ್ ಮಾಡಿದರೆ ಶಿಕ್ಷಕರ
ಅಗತ್ಯ ಮತ್ತಷ್ಟು ಕಡಿಮೆ ಆಗಲಿದೆ
ಎಂದರು.
ಅದಲ್ಲದೆ ಶಿಕ್ಷಕರು ಮತ್ತು ಮಕ್ಕಳ ಅನುಪಾತದಲ್ಲಿ ಸಾಕಷ್ಟು ಅಸಮತೋಲವಿದ್ದು, ಅದನ್ನು ಹೋಗಲಾಡಿಸುವ ಸಲುವಾಗಿ ರಾಜ್ಯದಲ್ಲಿ ಸುಮಾರು 20 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಈ ವರ್ಷ 20 ಸಾವಿರ ಶಿಕ್ಷಕರ ನೇಮಕ ಸಾಧ್ಯವಾಗದಿದ್ದರೂ ಬಹುಶಃ ಮುಂದಿನ ವೇಳೆಗೆ ಸಾಧ್ಯವಾಗುತ್ತದೆ. ನಂತರ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರ ನೌಕರರಿಗೆ ದೀಪಾವಳಿ ಪ್ರಯುಕ್ತ ಭರ್ಜರಿ ಗುಡ್ ನ್ಯೂಸ್ -ಖಾತೆಗೆ ಜಮಾ ಆಗಲಿದೆ ಇಷ್ಟು ಹೆಚ್ಚಿಗೆ ಮೊತ್ತ !!
