Home » KSP : ‘ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ’ ( ಸೀನ್ ಕ್ರೈಮ್ ಆಫೀಸರ್ ) ಹುದ್ದೆಗೆ ಅರ್ಜಿ ಹಾಕಿದವರೇ ಗಮನಿಸಿ | ಈ ಪರೀಕ್ಷೆಯ ‘ಪಠ್ಯಕ್ರಮ ಪರಿಷ್ಕರಣೆ’

KSP : ‘ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ’ ( ಸೀನ್ ಕ್ರೈಮ್ ಆಫೀಸರ್ ) ಹುದ್ದೆಗೆ ಅರ್ಜಿ ಹಾಕಿದವರೇ ಗಮನಿಸಿ | ಈ ಪರೀಕ್ಷೆಯ ‘ಪಠ್ಯಕ್ರಮ ಪರಿಷ್ಕರಣೆ’

by Mallika
0 comments

ಕರ್ನಾಟಕ ಪೊಲೀಸ್ ಇಲಾಖೆ ಅಡಿಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಹುದ್ದೆಯಾದ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಯ (Scene Crime Officer) 206 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಯ ಕನ್ನಡ ಭಾಷಾ ಪರೀಕ್ಷೆಯ ಪಠ್ಯಕ್ರಮದಲ್ಲಿ ಪರಿಷ್ಕರಣೆ ಮಾಡಲಾಗಿದೆ.

10-04 2022 ದಿನಾಂಕ ದಂದು ನಡೆಸಲು ನಿಗದಿ ಪಡಿಸಿರುವಂತ SOCO ಹುದ್ದೆಗಳ ( Karnataka Police Scene Crime Officer Recruitment) ಕನ್ನಡ ಭಾಷಾ ಪರೀಕ್ಷೆಯ ಪಠ್ಯಕ್ರಮವನ್ನು ಪರಿಷ್ಕರಿಸಲಾಗಿದೆ ಎಂದು ನೇಮಕಾತಿ ವಿಭಾಗದ ಎಡಿಜಿಪಿಯವರು ತಿಳಿಸಿದ್ದಾರೆ.

ಅಂದಹಾಗೆ 50 ಅಂಕಗಳಿಗೆ 1 ಸಾವಿರ ಪದಗಳಲ್ಲಿ ಕನ್ನಡ ಪ್ರಬಂಧ ಬರೆಯುವ ವಿಷಯ, 40 ಅಂಕಗಳಿಗೆ 300 ಪದಗಳಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ ಭಾಷಾಂತರ ವಿಷಯ, 20 ಅಂಕಗಳಿಗೆ 200 ಪದಗಳಲ್ಲಿ ಕನ್ನಡದಲ್ಲಿ ಪತ್ರ ಬರೆಯುವುದು, 40 ಅಂಕಗಳಿಗೆ ಕನ್ನಡ ವ್ಯಾಕರಣ ವಿರುದ್ಧ ಪದಗಳು, ಲಿಂಗ ಬದಲಾವಣೆ, ಹೊಂದಿಸಿ ಬರೆಯಿರಿ, ಗುಂಪಿಗೆ ಸೇರದ ಪದವನ್ನು ಆರಿಸುವುದು ಸೇರಿದಂತೆ ಒಟ್ಟು 150 ಅಂಕಗಳಿಗೆ ಒಂದೂವರೆ ಗಂಟೆಯ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಅಭ್ಯರ್ಥಿಗಳು ಪಡೆಯಬೇಕಾಗಿದೆ.

You may also like

Leave a Comment