Home » KKRTC ಯಿಂದ ಚಾಲಕ, ನಿರ್ವಾಹಕರ ನೇಮಕಾತಿ! ದಾಖಲೆ ಪರಿಶೀಲನೆಗೆ ಮತ್ತೊಮ್ಮೆ ಕರೆ

KKRTC ಯಿಂದ ಚಾಲಕ, ನಿರ್ವಾಹಕರ ನೇಮಕಾತಿ! ದಾಖಲೆ ಪರಿಶೀಲನೆಗೆ ಮತ್ತೊಮ್ಮೆ ಕರೆ

by Mallika
1 comment
KKRTC

KKRTC : 2020ನೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕ ಹಾಗೂ ಚಾಲಕ ಕಂ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೊಂದು ಮಹತ್ವದ ಮಾಹಿತಿ. ಈ ಹುದ್ದೆಗೆ ತಾತ್ಕಾಲಿಕವಾಗಿ ಆಯ್ಕೆಯಾಗಿದ್ದವರಿಗೆ ಮೂಲ ದಾಖಲಾತಿಗಳ ಪರಿಶೀಲನೆಗೆ ಪ್ರವೇಶ ಪತ್ರ ಕಳುಹಿಸಿದ್ದು, ಹಲವಾರು ಅಭ್ಯರ್ಥಿಗಳು ಈವರೆಗೆ ಪರಿಶೀಲನೆಗೆ ಹಾಜರಾಗಿಲ್ಲವಾದ್ದರಿಂದ , ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಮತ್ತೊಮ್ಮೆ ಕರೆ ನೀಡಲಾಗಿದೆ.

ಹಾಗಾಗಿ ದಿನಾಂಕ 24-02-2023 ರಿಂದ 28-02-2023 ರವರೆಗೆ (ಭಾನುವಾರ ಹೊರತುಪಡಿಸಿ) ಹಾಜರಾಗಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಸದರಿ ದಿನಗಳಂದು ಸಹ ಹಾಜರಾಗದೇ ಇದ್ದಲ್ಲಿ ಮತ್ತೊಮ್ಮೆ ಯಾವುದೇ ಕಾರಣಕ್ಕೂ ಪರಿಶೀಲನೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ನಿಗಮ (KKRTC) ಹೇಳಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ kkrtcjobs.karnataka.gov.in/call2020 ಗೆ ಭೇಟಿ ನೀಡಿ, ರಿಜಿಸ್ಟರ್ ನಂಬರ್ ಹಾಗೂ ಇತರ ಮಾಹಿತಿಗಳನ್ನು ನೀಡಿ ಲಾಗಿನ್‌ ಆದರೆ ಕರೆಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಇಲಾಖೆ ಸೂಚಿಸಿದೆ.

ಅಭ್ಯರ್ಥಿಗಳು ಸಲ್ಲಿಸಲಬೇಕಾದ ಮೂಲ ದಾಖಲೆಗಳ ಲಿಸ್ಟ್‌ ಇಲ್ಲಿದೆ:

ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ ( ವಯೋಮಿತಿ ಅರ್ಹತೆ ಪ್ರಮಾಣ ಪತ್ರ)
ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ
ಕನ್ನಡ ಮಾಧ್ಯಮದ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು
ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ
ಗ್ರಾಮೀಣ ಮೀಸಲಾಗತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು
ಎರಡು ಪಾಸ್‌ಪೋರ್ಟ್‌ ಸೈಜಿನ ಭಾವಚಿತ್ರಗಳು
ಜಾತಿ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು
ಮಾಜಿ ಸೈನಿಕರ ಮೀಸಲಾತಿ ಪ್ರಮಾಣ ಪತ್ರಗಳು

ಯಾವ ಪ್ರಮಾಣ ಪತ್ರ ಮೀಸಲಾತಿಗೆ ಅನ್ವಯವಾಗುತ್ತದೋ ಆ ಎಲ್ಲಾ ದಾಖಲೆಗಳನ್ನು ಅಭ್ಯರ್ಥಿಗಳು ಹಾಜರು ಪಡಿಸಬೇಕಾಗುತ್ತದೆ. ಮೇಲೆ ಹೇಳಲಾದ ಎಲ್ಲಾ ಮೂಲ ದಾಖಲೆಗಳ ಎರಡು ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ತಾಂತ್ರಿಕ ಅಧಿಕಾರಿಗಳ ಮೂಲಕ ದೃಢೀಕರಿಸಿ ನಂತರ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ನಿಗಮದ ಸಹಾಯವಾಣಿ ಸಂಖ್ಯೆ 6366374977 / 08472-227687 ಗೆ ಸಂಪರ್ಕಿಸುವುದು. ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ನಿಗದಿತ ಸ್ಥಳದಲ್ಲಿ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.

 

You may also like

Leave a Comment