Home » Job: ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಕ್ಷ ಗಟ್ಟಲೆ ಉದ್ಯೋಗ ನೇಮಕಾತಿ, ಬೇಗ ಇಲ್ಲಿ ಅರ್ಜಿ ಸಲ್ಲಿಸಿ

Job: ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಕ್ಷ ಗಟ್ಟಲೆ ಉದ್ಯೋಗ ನೇಮಕಾತಿ, ಬೇಗ ಇಲ್ಲಿ ಅರ್ಜಿ ಸಲ್ಲಿಸಿ

0 comments

Job: ಈ ಬಾರಿ ಗಣೇಶ ಹಬ್ಬ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಸಂತಸದ ಸುದ್ದಿ ತಂದಿದೆ. ಕಾರಣ ಫ್ಲಿಪ್‌ಕಾರ್ಟ್ (Flipkart Festive Season Jobs 2025) ಮತ್ತು ಅಮೆಜಾನ್ (Amazon Festive Season Jobs 2025) ಲಕ್ಷಗಟ್ಟಲೆ ಉದ್ಯೋಗಳನ್ನು ಸೃಷ್ಟಿಸಿವೆ.

ದೇಶದ ಎರಡು ದೈತ್ಯ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸುಮಾರು 3.7 ಮಿಲಿಯನ್ (37 ಲಕ್ಷ ಉದ್ಯೋಗಗಳು) ಸೀಸನಲ್ ಉದ್ಯೋಗಗಳನ್ನು ನೀಡುತ್ತಿವೆ. ಪ್ರತಿ ವರ್ಷ ದೀಪಾವಳಿ ಮತ್ತು ಹಬ್ಬದ ಕೊಡುಗೆಗಳ ಸಮಯದಲ್ಲಿ ಆನ್‌ಲೈನ್ ಶಾಪಿಂಗ್‌ನ ಬೇಡಿಕೆ ಹಲವು ಪಟ್ಟು ಹೆಚ್ಚಾಗುತ್ತದೆ. ಹೀಗಾಗಿ ಈ ಕಂಪೆನಿಗಳು ಈ ನಿರ್ಧಾರ ಕೈಗೊಂಡಿವೆ.

ಫ್ಲಿಪ್‌ಕಾರ್ಟ್‌ನಿಂದ 2.2 ಲಕ್ಷ ಉದ್ಯೋಗ:

ಫ್ಲಿಪ್‌ಕಾರ್ಟ್ ತನ್ನ ದಿ ಬಿಗ್ ಬಿಲಿಯನ್ ಡೇಸ್ (TBBD) ಮಾರಾಟಕ್ಕಾಗಿ ಈ ಬಾರಿ ದಾಖಲೆ ಮುರಿಯುವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಂಪನಿಯು ಸುಮಾರು 2.2 ಲಕ್ಷಕ್ಕೂ ಹೆಚ್ಚು ಸೀಸನಲ್ ಸಹವರ್ತಿಗಳು ತಮ್ಮ ತಂಡವನ್ನು ಸೇರುತ್ತಾರೆ ಎಂಬ ಮಾಹಿತುಯನ್ನು ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್ ಹೇಳುವಂತೆ ಈ ಸಮಯ ಅವರಿಗೆ ಅತ್ಯಂತ ವಿಶೇಷವಾಗಿದೆ ಏಕೆಂದರೆ ಈ ಸಮಯದಲ್ಲಿ ಲಕ್ಷಾಂತರ ಪ್ಯಾಕೇಜ್‌ಗಳು, ಕೋಟ್ಯಂತರ ನಗುಗಳಾಗಿ ಬದಲಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಅಮೆಜಾನ್‌ ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು:

ಅಮೆಜಾನ್ ಇಂಡಿಯಾ ಕೂಡ ಹಬ್ಬಗಳ ಮೊದಲು 1.5 ಲಕ್ಷಕ್ಕೂ ಹೆಚ್ಚು ಸೀಸನಲ್ ಉದ್ಯೋಗಗಳನ್ನು ಘೋಷಿಸಿದೆ. ಈ ಅವಕಾಶಗಳು ಕಂಪನಿಯ ಫುಲ್‌ಫಿಲ್‌ಮೆಂಟ್ ಸೆಂಟರ್‌ಗಳು (FCಗಳು), ವಿಂಗಡಣಾ ಕೇಂದ್ರಗಳು ಮತ್ತು ವಿತರಣಾ ಜಾಲದಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಉದ್ಯೋಗಗಳು ಕಾಲೋಚಿತವಾಗಿದ್ದರೂ ಕೆಲವೊಮ್ಮೆ ಶಾಶ್ವತ ಉದ್ಯೋಗಗಳಾಗಿ ಬದಲಾಗುತ್ತವೆ. ನೀವು ಕೂಡ ಈ ಸೀಸನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ದೊಡ್ಡ ಕಂಪನಿಗಳೊಂದಿಗೆ ಕೆಲಸ ಮಾಡುವ ಈ ಅವಕಾಶ ನಿಮಗೆ ಉತ್ತಮ ವೃತ್ತಿಜೀವನದ ಆರಂಭವಾಗಬಹುದು. ಇತ್ತೀಚಿನ ಉದ್ಯೋಗ ತೆರೆಯುವಿಕೆಗಳಿಗಾಗಿ ಸಂಬಂಧಿತ ವೆಬ್‌ಸೈಟ್‌ನ ವೃತ್ತಿ ವಿಭಾಗಕ್ಕೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಿ.

You may also like