Home » Mangaluru Job News: ಶಿಷ್ಯ ವೇತನ ಸಹಿತ ವೃತ್ತಿ ತರಬೇತಿ ಕಾರ್ಯಕ್ರಮ: ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Mangaluru Job News: ಶಿಷ್ಯ ವೇತನ ಸಹಿತ ವೃತ್ತಿ ತರಬೇತಿ ಕಾರ್ಯಕ್ರಮ: ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

by Praveen Chennavara
0 comments
Mangaluru Job News

Mangaluru Job News: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಉದ್ಯೋಗ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 2024-25ನೇ ಸಾಲಿಗೆ ಉಚಿತ ಮತ್ತು ಶಿಷ್ಯ ವೇತನ ಸಹಿತ ವೃತ್ತಿ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: 7th Pay Commission: ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ 25.5% ಹೆಚ್ಚಳ ಬಹುತೇಕ ಫಿಕ್ಸ್!!

ತರಬೇತಿ ಸಮಯದಲ್ಲಿ ಮಾಸಿಕ ಒಂದು ಸಾವಿರ ರೂ. ಶಿಷ್ಯ ವೇತನ ನೀಡಲಾಗುವುದು. ಮೂರು ಲಕ್ಷ ರೂ. ಆದಾಯ ಮಿತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ತರಬೇತಿಯು ಜುಲೈ 1ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Rave Party: ಬೆಂಗಳೂರಿನಲ್ಲಿ ರೇವ್‌ಪಾರ್ಟಿ ಮೇಲೆ ಸಿಸಿಬಿ ರೇಡ್‌; ಮಾದಕ ನಶೆಯಲ್ಲಿ ತೆಲುಗು ನಟ, ನಟಿಯರು?

ವಿಶೇಷ ತರಬೇತಿ ಕಾರ್ಯಕ್ರಮ: ಒಂದು ವರ್ಷದ ಕೋರ್ಸ್ ಇದಾಗಿದ್ದು, ವಯೋಮಿತಿ 18ರಿಂದ 27 ವರ್ಷವಾಗಿದೆ. ಕನಿಷ್ಠ 10+2 ಶೈಕ್ಷಣಿಕ ಅರ್ಹತೆ ಇರಬೇಕಾಗುತ್ತದೆ ಮತ್ತು ಶುಲ್ಕ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಕಂಪ್ಯೂಟರ್ ತರಬೇತಿ ಮತ್ತು ಕಂಪ್ಯೂಟರ್ ಹಾರ್ಡ್‌ವೇರ್ ನಿರ್ವಹಣೆ ತರಬೇತಿಗೆ ಸಂಬಂಧಿಸಿದಂತೆ ಆಫೀಸ್ ಆಟೋಮೇಶನ್ ಅಕೌಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಅಸಿಸ್ಟೆಂಟ್, ಕಂಪ್ಯೂಟರ್ ಅಪ್ಲಿಕೇಶನ್ ಆ್ಯಂಡ್ ಬ್ಯುಸಿನೆಸ್ ಅಕೌಂಟಿಂಗ್ ಅಸೋಸಿಯೇಟ್, ಸೈಬ‌ರ್ ಸೆಕ್ಯೂರ್ಡ್ ವೆಬ್ ಡೆವಲಪ್‌ಮೆಂಟ್ ಅಸೋಸಿಯೇಟ್ ಹುದ್ದೆಗಳಿಗೆ ನಿಯೋಲಿಟ್ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗುತ್ತದೆ.

ಪ್ರತಿಯೊಂದು ಕೋರ್ಸ್‌ಗೆ ಮಾಸಿಕ ತಲಾ ಒಂದು ಸಾವಿರ ರೂ. ಶಿಷ್ಯ ವೇತನ ನೀಡಲಾಗುತ್ತದೆ. ವಿಶೇಷ ತರಬೇತಿ ಯೋಜನೆಗೆ 2024ರ ಜುಲೈ 1ಕ್ಕೆ ಅನ್ವಯವಾಗುವಂತೆ 18ರಿಂದ 27 ವರ್ಷ ವಯೋಮಿತಿಯವರು ಅರ್ಹತೆ ಪಡೆಯಲಿದ್ದಾರೆ. ಉಳಿದ ಕೋರ್ಸ್‌ಗಳಿಗೆ 18ರಿಂದ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪುಸ್ತಕ ಮತ್ತು ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಅರ್ಹ ಅರ್ಜಿದಾರರು ಸ್ವಯಂ ದೃಢೀಕರಣದೊಂದಿಗೆ ಎಸೆಸೆಲ್ಸಿ, ಪಿಯುಸಿ ಅಂಕಪಟ್ಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಸ್ಥಳೀಯ ಉದ್ಯೋಗ ವಿನಿಯಮ ಕೇಂದ್ರದ ನೋಂದಣಿ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕದ ನಕಲು ಪ್ರತಿಯನ್ನು ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ, ಪ.ಜಾ/ಪ.ಪಂಗಡಗಳಿಗಾಗಿ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಸರಕಾರಿ ಮಾದರಿ ಐಟಿಐ ಕ್ಯಾಂಪಸ್, ಡೈರಿ ಸರ್ಕಲ್, ಬೆಂಗಳೂರು- 560029ಕ್ಕೆ ಕಳುಹಿಸಬೇಕು.

ದೂರವಾಣಿ : 080-29756192/9620933988, www.labour.gov.in, www.ncs.gov.in ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಾಮಾನ್ಯ ಉದ್ಯೋಗ ನಿರ್ದೇಶನಾಲಯ ಕೇಂದ್ರದ ಪ್ರಕಟನೆ ತಿಳಿಸಿದೆ.

You may also like

Leave a Comment