Home » Nalin Kumar Kateel: ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜಿಬಿಎಫ್ ನಲ್ಲಿದ್ದ ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಕೇಂದ್ರ ಸಚಿವರಿಗೆ ಸಂಸದ ನಳಿನ್ ಮನವಿ

Nalin Kumar Kateel: ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜಿಬಿಎಫ್ ನಲ್ಲಿದ್ದ ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಕೇಂದ್ರ ಸಚಿವರಿಗೆ ಸಂಸದ ನಳಿನ್ ಮನವಿ

17 comments
Nalin Kumar Kateel

Nalin Kumar Kateel: ಜಿಎಂಪಿಎಲ್‌ ಕಂಪನಿಯಲ್ಲಿ ಜಿಬಿಎಫ್‌ನಲ್ಲಿದ್ದ (ಹಿಂದಿನ) ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಕೇಂದ್ರ ಪೆಟ್ರೋಲಿಯಂ ಸಚಿವರಾದ ಶ್ರೀ ಹರ್‌ದೀಪ್‌ ಸಿಂಗ್‌ ಪೂರಿ ಅವರಿಗೆ ಮನವಿ ಮಾಡಿದ್ದಾರೆ.

ಗೈಲ್‌ ಮಂಗಳೂರು ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌-ಜಿಎಂಪಿಎಲ್‌ ಕಂಪನಿಯಲ್ಲಿ MSEZ ಸ್ಥಾಪನೆಗೆ ಜಮೀನು ಕೊಟ್ಟಿದ್ದ ಕುಟುಂಬ ಸದಸ್ಯರ ನೆಲೆಯಲ್ಲಿ (ಪಿ.ಡಿ.ಎಫ್‌) ಉದ್ಯೋಗ ಪಡೆದಿದ್ದ 115 ಮಂದಿ ಹಾಗೂ ನೇರ ನೇಮಕಾತಿಯಲ್ಲಿ ನೇಮಕಗೊಂಡ ಸ್ಥಳೀಯರಿಗೆ ಉದ್ಯೋಗ ನೀಡಲು ಮನವಿ ಮಾಡಿದ್ದಾರೆ. ಸ್ಥಳ ನೀಡಿದ ನೆಲೆಯಲ್ಲಿ ಕೆಲಸ ನೀಡಲಾಗಿದ್ದ ಎಲ್ಲಾ ಉದ್ಯೋಗಿಗಳಿಗೆ ಜಿಎಂಪಿಎಲ್‌ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸದೆ ಉದ್ಯೋಗವನ್ನು ನೀಡುವುದು ಹಾಗೂ ಜೆಬಿಎಫ್‌ಪಿಎಲ್‌ನಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗಿಗಳಾಗಿದ್ದ ಎಲ್ಲಾ ಸ್ಥಳೀಯರಿಗೂ ಖಾಯಂ ಉದ್ಯೋಗ ನೀಡುವಂತೆ ಮನವಿ ಮಾಡಲಾಗಿದೆ. ಈ ಕುರಿತು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: ದ.ಕ: ಮತ್ತೆ ನೈತಿಕ ಪೊಲೀಸ್‌ಗಿರಿ : ಭಿನ್ನ ಕೋಮಿನ ಜೋಡಿಯ ತರಾಟೆ

You may also like

Leave a Comment