Home » Job News: ಪೊಲೀಸ್‌ ಇಲಾಖೆಯಲ್ಲಿ 4656, ಶಿಕ್ಷಣ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳ ನೇಮಕಾತಿ

Job News: ಪೊಲೀಸ್‌ ಇಲಾಖೆಯಲ್ಲಿ 4656, ಶಿಕ್ಷಣ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳ ನೇಮಕಾತಿ

0 comments
Constable recritement

Job News: ಶಿಕ್ಷಣ ಮತ್ತು ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ಬಯಸುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿ ನೀಡಲಾಗಿದೆ. ಒಳ ಮೀಸಲಾತಿ ವಿಚಾರ ಇತ್ಯರ್ಥವಾಗಿರುವುದರಿಂದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ;Kasaragod: ಮೊಟ್ಟೆ ತಿಂದು ಕೆಟ್ಟ: ಮೊಟ್ಟೆ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು!

ಶಿಕ್ಷಣ ಇಲಾಖೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ದೈಹಿಕ ಶಿಕ್ಷಕರು ಒಳಗೊಂಡಂತೆ ಖಾಲಿ ಇರುವ 18000 ಶಿಕ್ಷಕರ ನೇಮಕಾತಿಗೆ ಈ ಹಿಂದೆಯೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಒಳ ಮೀಸಲಾತಿ ವಿಚಾರ ಬಗೆಹರಿಯದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಕೂಡಲೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರಯಲಿದೆ.

ಪೊಲೀಸ್‌ ಇಲಾಖೆಯಲ್ಲಿ 4656 ಹುದ್ದೆಗಳ ನೇಮಕಾತಿಗೆ ಸಿದ್ಧತೆ ಮಾಡಲಾಗಿದ್ದು, ರಾಜ್ಯದಲ್ಲಿ 10ಸಾವಿರದಿಂದ 15 ಸಾವಿರ ಪೊಲೀಸ್‌ ಕಾನ್ಸ್ಟೇಬಲ್‌ ಹುದ್ದೆಗಳಲ್ಲಿ ಕೆಎಸ್‌ಆರ್‌ಪಿ, ಸಿವಿಲ್‌, ಸಶಸ್ತ್ರ, ಮೀಸಲು ಪಡೆ ಸೇರಿ ಎಲ್ಲಾ ಪೊಲೀಸ್‌ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು.

ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌ 1650, ನಾಗರಿಕ ಪೊಲೀಸ್‌ ಕಾನ್ಸ್ಟೇಬಲ್‌ ಸಿವಿಲ್‌ 614, ಕೆಎಸ್‌ಆರ್‌ಪಿ 2032, ಕೆಎಸ್‌ಐಎಸ್‌ಎಫ್‌ 340, ಡಿಟೆಕ್ಟಿವ್‌ ಇನ್ಸ್‌ಪೆಕ್ಟರ್‌ 20 ಹುದ್ದೆಗಳು ಸೇರಿ 4656 ಪೊಲೀಸ್‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ವರದಿಯಾಗಿದೆ.

You may also like