Home » SBI ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ – ಸಂಬಳ, ಅರ್ಜಿ ಸಲ್ಲಿಕೆ, ಅರ್ಹತೆ ಬಗ್ಗೆ ಇಲ್ಲದೆ ಡೀಟೇಲ್ಸ್

SBI ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ – ಸಂಬಳ, ಅರ್ಜಿ ಸಲ್ಲಿಕೆ, ಅರ್ಹತೆ ಬಗ್ಗೆ ಇಲ್ಲದೆ ಡೀಟೇಲ್ಸ್

0 comments

SBI ಬ್ಯಾಂಕ್ ತನ್ನ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸಬಹುದೆಂದು ಹೇಳಿದೆ.

ಹೌದು, ಒಟ್ಟು 122 ಹುದ್ದೆಗಳಿಗೆ ಖಾಲಿ ಹುದ್ದೆಯನ್ನು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 2, 2025 ಕೊನೆಯ ದಿನಾಂಕ. ಹಾಗಿದ್ರೆ ಹುದ್ದೆ ವಿವರ, ಅರ್ಜಿ ಸಲ್ಲಿಸೋದು ಹೇಗೆ? ಅರ್ಹತೆ ಏನು? ಸಂಬಳ ಎಷ್ಟು ನೋಡೋಣ ಬನ್ನಿ.

ಹುದ್ದೆಯ ವಿವರ:

ಒಟ್ಟು ಹುದ್ದೆಗಳು: 122

ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ (ಉತ್ಪನ್ನಗಳು – ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು) – 59 ಹುದ್ದೆಗಳು

ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) – 63 ಹುದ್ದೆಗಳು

ಸಂಬಳ ವಿವರ:

SBI ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ ವೇತನ ಶ್ರೇಣಿ:

ಮ್ಯಾನೇಜರ್(ಉತ್ಪನ್ನಗಳು – ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು) – ತಿಂಗಳಿಗೆ ರೂ. 63,840/- ರಿಂದ ರೂ. 78,230/- ವರೆಗೆ

ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) – ರೂ. 63,840/- ರಿಂದ ರೂ. ತಿಂಗಳಿಗೆ 78,230 ರೂ.

ಶೈಕ್ಷಣಿಕ ಅರ್ಹತೆ:

1. ಮ್ಯಾನೇಜರ್ (ಡಿಜಿಟಲ್ ಪಾವತಿಗಳು)

ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ B.E/B. ಟೆಕ್ ಪದವಿ ಅಥವಾ MCA/ MBA/ PGDM ಅಥವಾ ತತ್ಸಮಾನ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.

ಒಟ್ಟು ಕನಿಷ್ಠ 60% ಅಂಕಗಳನ್ನು ಹೊಂದಿರಬೇಕು.

2. ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ)

ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು.

3.ಅಭ್ಯರ್ಥಿಯು MBA (ಹಣಕಾಸು) / PGDBA / PGDBM / MMS (ಹಣಕಾಸು) / CA / CFA / ICWA ಗಳಲ್ಲಿ ಪೂರ್ಣ ಸಮಯದ ಪದವಿಯನ್ನು ಹೊಂದಿರಬೇಕು.

ವಯೋಮಿತಿ:

ಮ್ಯಾನೇಜರ್ (ಪ್ರಾಜೆಕ್ಟ್‌ಗಳು-ಡಿಜಿಟಲ್ ಪಾವತಿಗಳು) – ಕನಿಷ್ಠ 28 ವರ್ಷಗಳು; ಗರಿಷ್ಠ 35 ವರ್ಷಗಳು

ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ) – ಕನಿಷ್ಠ 25 ವರ್ಷಗಳು; ಗರಿಷ್ಠ 35 ವರ್ಷಗಳು

ಅರ್ಜಿ ಶುಲ್ಕ:

ಸಾಮಾನ್ಯ / EWC / OBC ಅಭ್ಯರ್ಥಿಗಳು: ರೂ.750

SC / ST / PwD ಅಭ್ಯರ್ಥಿಗಳು: ಇಲ್ಲ

You may also like