Home » Teachers Recruitment: 18 ಸಾವಿರ ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಶಿಕ್ಷಣ ಇಲಾಖೆ

Teachers Recruitment: 18 ಸಾವಿರ ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಶಿಕ್ಷಣ ಇಲಾಖೆ

0 comments
Teachers Transfer

Teachers Recruitment: 18000 ಶಿಕ್ಷಕರ ನೇಮಕಾತಿಗೆ ಮುಂದಾಗಿರುವ ರಾಜ್ಯ ಸರಕಾರವು ಡಿ.7 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಿಗದಿ ಮಾಡಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.

ಅ.23 ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನವೆಂಬರ್‌ 9 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿ.7 ರಂದು ಬೆಳಗ್ಗೆ ಪತ್ರಿಕೆ-1 (ಒಂದರಿಂದ ಐದನೇ ತರಗತಿ) ಮತ್ತು ಮಧ್ಯಾಹ್ನ ಪತ್ರಿಕೆ-2 (ಆರರಿಂದ ಎಂಟನೇ ತರಗತಿ) ಪರೀಕ್ಷೆ ನಡೆಯಲಿದೆ.

ಸಾಮಾನ್ಯವಾಗಿ ವರ್ಗ ಮತ್ತು ಒಬಿಸಿಗೆ ಪರೀಕ್ಷೆ-1 ಅಥವಾ ಪರೀಕ್ಷೆ-2 ಬರೆಯಲು ರೂ.700 ಶುಲ್ಕ ನಿಗದಿ ಮಾಡಲಾಗಿದೆ. ಎರಡೂ ಪರೀಕ್ಷೆ ಬರೆಯುವವರಿಗೆ ಒಂದು ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಅಭ್ಯರ್ಥಿಗಳಿಗೆ ರೂ.350 ನಿಗದಿ ಮಾಡಲಾಗಿದ್ದು, ಎರಡು ಪರೀಕ್ಷೆಗೆ ರೂ.500 ನಿಗದಿ ಮಾಡಲಾಗಿದೆ. ಡಿಸೆಂಬರ್‌ ಅಂತ್ಯಕ್ಕೆ ಫಲಿತಾಂಶ ಪ್ರಕಟ ಮಾಡಲಾಗುವುದು. ಆಫ್ಲೈನ್‌ನಲ್ಲಿಯೇ ಈ ಪರೀಕ್ಷೆ ನಡೆಯಲಿದೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯ.

You may also like