Union Bank Recruitment 2023 : ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಸಿಹಿ ಸುದ್ಧಿ ಇಲ್ಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(Union Bank of India) ಖಾಲಿ ಇರುವ ಹುದ್ದೆಗಳನ್ನು (Union Bank Recruitment 2023)ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಏಪ್ರಿಲ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು(Last Date),ಒಟ್ಟು 11 ಸ್ಟೈಪೆಂಡಿಯರಿ ಪ್ಲೇಯರ್ ಹುದ್ದೆಗಳು ಖಾಲಿಯಿದೆ. ಆಸಕ್ತರು ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಹುದ್ದೆಗಳಿಗೆ( Jobs in Bank)ಅರ್ಜಿ ಸಲ್ಲಿಸುವ ಮುನ್ನ ಖಾಲಿಯಿರುವ ಹುದ್ದೆಗಳು, ನೇಮಕಾತಿ ಪ್ರಕ್ರಿಯೆ,ವೇತನ ಮೊದಲಾದ ಮಾಹಿತಿ ತಿಳಿದಿರುವುದು ಒಳ್ಳೆಯದು.
ಸಂಸ್ಥೆ – ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ – ಸ್ಟೈಪೆಂಡಿಯರಿ ಪ್ಲೇಯರ್
ಒಟ್ಟು – ಹುದ್ದೆ 11
ಹುದ್ದೆಯ ಮಾಹಿತಿ:
ಗೋಲ್ಕೀಪರ್ಸ್- 1
ಡಿಫೆಂಡರ್ಸ್- 2
ಮಿಡ್ಫೀಲ್ಡರ್ಸ್- 4
ಫಾರ್ವರ್ಡ್ಸ್- 4
ಉದ್ಯೋಗದ ಸ್ಥಳ – ಬೆಂಗಳೂರು
ಸ್ಟೆಫಂಡ್: ಮಾಸಿಕ – ₹10,000
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಗೆ 03.04.2023 ಆರಂಭಿಕ ದಿನವಾಗಿದ್ದು, ಏಪ್ರಿಲ್ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ವಿದ್ಯಾರ್ಹತೆ(Education Qualification)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ(SSLC)ಉತ್ತೀರ್ಣರಾಗಿರಬೇಕು.
ವಯೋಮಿತಿ(Age Limit)
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1, 2023ಕ್ಕೆ ಕನಿಷ್ಠ ವಯೋಮಿತಿ 16 ವರ್ಷವಾಗಿದ್ದು, ಗರಿಷ್ಠ 25 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ
ಮೇಲೆ ತಿಳಿಸಿದ ಹುದ್ದೆಗಳಿಗೆ ಉದ್ಯೋಗದ ಸ್ಥಳ ಪುಣೆ, ದೆಹಲಿ, ಭುವನೇಶ್ವರ, ಬೆಂಗಳೂರು ಆಗಿರಲಿದೆ. ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ. ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು 3ಹಂತದ ಪ್ರಕ್ರಿಯೆ ಇರಲಿದೆ. ಹಿಂದಿನ ಕಾರ್ಯಕ್ಷಮತೆ, ಆಯ್ಕೆ ಪ್ರಯೋಗಗಳು ಮತ್ತು ಪ್ರಯೋಗಗಳ ಹೊಂದಾಣಿಕೆ ಮೂಲಕ ಅಭ್ಯರ್ಥಿಯನ್ನು ಆರಿಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನ ಏಪ್ರಿಲ್ 15, 2023 ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ
