Home » Belthangady : ಬೆಳ್ತಂಗಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

Belthangady : ಬೆಳ್ತಂಗಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

by Mallika
0 comments

ಬೆಳ್ತಂಗಡಿ : ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 08 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಹಾಗೂ 07 ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಭೌತಿಕವಾಗಿ(OFFLINE) ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ತೆರವಾಗಿರುವ ಕೇಂದ್ರಗಳು ಬಂದಾರು ಗ್ರಾಮದ ಉಳಿಯ (ಮಿನಿ ) ಕುಂಟಾಲ ಪಲ್ಕೆ (ಮಿನಿ) ,ಲಾಯಿಲ ಗ್ರಾಮದ ಹಂದೇವೂರು (ಮಿನಿ), ಕಾಶಿಪಟ್ಟ ಗ್ರಾಮದ ಕಿರೋಡಿ (ಮಿನಿ ), ವೇಣೂರು ಗ್ರಾಮದ ಬಾಕಿಮಾರು (ಮಿನಿ ), ಮಚ್ಚಿನ ಗ್ರಾಮದ ಮಚ್ಚಿನ, ಕಳೆಂಜ ಗ್ರಾಮದ ಶಿಬರಾಜೆ, ಕುವೆಟ್ಟು ಗ್ರಾಮದ ಮದ್ದಡ್ಕ ಹಾಗೂ ಸಹಾಯಕಿ ಹುದ್ದೆಗೆ ಪುದುವೆಟ್ಟು ಗ್ರಾಮದ ಬೊಳ್ಳೂನಾರ್, ಮಾಲಾಡಿ ಗ್ರಾಮದ ಪುರಿಯ, ನಡ ಗ್ರಾಮದ ಕನ್ಯಾಡಿ 1, ಬೆಳ್ತಂಗಡಿ ಕಸಬ ಉದಯ ನಗರ, ವೇಣೂರು ಗ್ರಾಮದ ವೇಣೂರು, ಅರಸಿನಮಕ್ಕಿಯ ರೆಖ್ಯ, ತಣ್ಣೀರುಪಂತ ಗ್ರಾಮದ ಕಲ್ಲೇರಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17.03.2023 ಆಗಿರುತ್ತದೆ. ಹೆಚ್ಚಿನ ವಿವರಗಳಿಗೆ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

You may also like

Leave a Comment