Home » ಶಾಕಿಂಗ್ ನ್ಯೂಸ್ : 10 ನೇ ತರಗತಿಯ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ದುಷ್ಕರ್ಮಿಗಳು! ವೀಡಿಯೋ ವೈರಲ್, ಅಮಾನವೀಯ ವರ್ತನೆಗೆ ಎಲ್ಲೆಡೆ ಆಕ್ರೋಶ!!!

ಶಾಕಿಂಗ್ ನ್ಯೂಸ್ : 10 ನೇ ತರಗತಿಯ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ದುಷ್ಕರ್ಮಿಗಳು! ವೀಡಿಯೋ ವೈರಲ್, ಅಮಾನವೀಯ ವರ್ತನೆಗೆ ಎಲ್ಲೆಡೆ ಆಕ್ರೋಶ!!!

0 comments

ದಲಿತರ ಮೇಲೆ ದೌರ್ಜನ್ಯ ಮಾಡುವಂತ ಬಹಳಷ್ಟು ಘಟನೆಗಳು ಇತ್ತೀಚೆಗೆ ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದ 10 ನೇ ತರಗತಿಯ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕಾಲು ನೆಕ್ಕುವಂತೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹಾಗೂ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಈ ಮೃಗೀಯ ಕೃತ್ಯ ನಡೆದಿರುವುದು ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ. ಜಾತಿ ಆಧಾರಿತ ಹಿಂಸಾಚಾರ ಇದಾಗಿದೆ ಎಂದೇ ಹೇಳಬಹುದು. ಈ ಘಟನೆ ಎಪ್ರಿಲ್ 10 ರಂದು ನಡೆದಿದೆ.

ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ತಕ್ಷಣ, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಕಾರ್ಯಾಚರಣೆಗೆ ಇಳಿದು ಸಂತ್ರಸ್ತನನ್ನು ಪತ್ತೆಹಚ್ಚಲು ಮತ್ತು ಕ್ರಮವನ್ನು ಪ್ರಾರಂಭಿಸಲು ಐದು ತಂಡಗಳನ್ನು ರಚಿಸಿದ್ದರು.

ಅದೇ ಶಾಲೆಯಲ್ಲಿ ತೇರ್ಗಡೆಯಾಗಿರುವ ಸೀನಿಯರ್ ನವರ ಸುಲಿಗೆ ಕರೆಗೆ ಮಣಿಯಲು ಸಿದ್ಧರಿಲ್ಲದ ಕಾರಣ 10ನೇ ತರಗತಿಯ ದಲಿತ ಬಾಲಕನನ್ನು ಚಿತ್ರಹಿಂಸೆ ಮತ್ತು ಅಮಾನವೀಯ ವರ್ತನೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವೀಡಿಯೋದಲ್ಲೇನಿದೆ? ಆರೋಪಿಗಳು ಮೋಟಾರು ಸೈಕಲ್‌ಗಳಲ್ಲಿ ಕುಳಿತಿದ್ದು, ಅಪ್ರಾಪ್ತ ಬಾಲಕ ನೆಲದ ಮೇಲೆ ಭಯದಿಂದ ಕುಳಿತುಕೊಂಡಿದ್ದಾನೆ. ಈತನ ಭಯ ಕಂಡು ಕೆಲವರು ನಗುತ್ತಾರೆ. ಒಬ್ಬ ಆರೋಪಿಯು ಅಪ್ರಾಪ್ತ ಬಾಲಕನನ್ನು ನಿಂದಿಸುತ್ತಾನೆ. ಇನ್ನೊಬ್ಬ ಆರೋಪಿ “ಮತ್ತೆ ಇಂತಹ ತಪ್ಪು ಮಾಡ್ತೀಯಾ?” ಎಂದು ಬಾಲಕನನ್ನು ಕೇಳುತ್ತಾನೆ.

ಜೊತೆಗೆ ವಿಡಿಯೋದಲ್ಲಿ ಬಾಲಕನನ್ನು ಬಲವಂತವಾಗಿ ಆರೋಪವನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿದೆ. ಸಂತ್ರಸ್ತ ಬಾಲಕನ ಲಿಖಿತ ದೂರಿನ ನಂತರ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕೆಲವು ಆರೋಪಿಗಳು ಮೇಲ್ಜಾತಿಯವರು ಎಂದು ಕರೆಯಲಾಗುತ್ತದೆ.

You may also like

Leave a Comment